ಶಿವಮೊಗ್ಗ | ನಾಳೆ ರಂಗಾಯಣದಿಂದ ದಿ. ಚಿದಂಬರರಾವ್ ಜಂಬೆ ಹಾಗೂ ಪಿ. ಗಂಗಾಧರ ಸ್ವಾಮಿ ಅವರಿಗೆ ‘ನುಡಿ ನಮನ’ ಮತ್ತು ‘ಪಾರ್ಟಿ’ ನಾಟಕ ಪ್ರದರ್ಶನ

ಮನೋರಂಜನೆ

ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ, ಶಿವಮೊಗ್ಗ ಇವರ ಜಂಟಿ ಆಯೋಜನೆಯಲ್ಲಿ ಸೆಪ್ಟೆಂಬರ್ 20 ರ ಭಾನುವಾರ ಸಂಜೆ 6.00 ಗಂಟೆಗೆ ಅಶೋಕನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ​ಇತ್ತೀಚೆಗೆ ಅಗಲಿದ ಹಿರಿಯ ರಂಗಚೇತನ ಶ್ರೀ ಚಿದಂಬರರಾವ್ ಜಂಬೆ ಹಾಗೂ ಶ್ರೀ ಪಿ. ಗಂಗಾಧರ ಸ್ವಾಮಿ ಅವರನ್ನು ಸ್ಮರಿಸುತ್ತಾ, ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ‘ನುಡಿ ನಮನ’ ಕಾರ್ಯಕ್ರಮ ನಡೆಯಲಿದೆ. ​

‘ಪಾರ್ಟಿ’ ನಾಟಕ ಪ್ರದರ್ಶನ:’ನುಡಿ ನಮನ’ ಕಾರ್ಯಕ್ರಮದ ನಂತರ ಸಂಜೆ 6.30ಕ್ಕೆ ಮೈಸೂರಿನ ‘ನಿರಂತರ ರಂಗ ತಂಡ’ದ ಕಲಾವಿದರಿಂದ ದಿ. ಚಿದಂಬರರಾವ್ ಜಂಬೆ ಅವರ ನಿರ್ದೇಶನದ ಕೊನೆಯ ನಾಟಕವಾದ ‘ಪಾರ್ಟಿ’ ಪ್ರದರ್ಶನಗೊಳ್ಳಲಿದೆ. ​ಈ ನಾಟಕ ಪ್ರದರ್ಶನಕ್ಕೆ ಪ್ರವೇಶ ಶುಲ್ಕವಾಗಿ ತಲಾ ಒಬ್ಬರಿಗೆ ರೂ.30/- ದರವನ್ನು ನಿಗದಿಪಡಿಸಲಾಗಿದೆ.

ಶಿವಮೊಗ್ಗದ ಸಮಸ್ತ ರಂಗಾಸಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ರಂಗಾಯಣದ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Author