ಒಂದನೇ ತರಗತಿ, ಎಲ್‌ಕೆಜಿ, ಯುಕೆಜಿ ಪ್ರವೇಶಾತಿಗೆ 60 ದಿನಗಳ ವಯೋಮಿತಿ ಸಡಿಲಿಕೆ ; ವಿಧಾನಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ

1ನೇ ತರಗತಿ ದಾಖಲಾತಿಗೆ 60 ದಿನಗಳ ವಿನಾಯಿತಿಯನ್ನು ನೀಡಲಾಗುತ್ತಿದೆ. 2026-27ನೇ ಶೈಕ್ಷಣಿಕ ಸಾಲಿಗೆ ಇದು ಅನ್ವಯವಾಗಲಿದ್ದು, 6 ವರ್ಷ ತುಂಬಲು 60 ದಿನಗಳ ಕೊರತೆ ಇದ್ದರೂ ಅಂತಹ ಮಕ್ಕಳಿಗೆ ಪ್ರವೇಶಾತಿ ಲಭ್ಯವಾಗಲಿದೆ.ಈ 60 ದಿನಗಳ ವಯೋಮಿತಿ ರಿಯಾಯಿತಿಯು ಕೇವಲ 1ನೇ ತರಗತಿಗೆ ಮಾತ್ರ ಸೀಮಿತವಾಗಿರದೆ, ಎಲ್‌ಕೆಜಿ (LKG) ಮತ್ತು ಯುಕೆಜಿ (UKG) ತರಗತಿಗಳ ದಾಖಲಾತಿಗೂ ಅನ್ವಯವಾಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಶೀಘ್ರದಲ್ಲೇ ಶಾಶ್ವತ ಕಾನೂನು: ಪ್ರಸ್ತುತ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಸೂಕ್ತ ನಿಯಂತ್ರಣ ವ್ಯವಸ್ಥೆ ಇಲ್ಲದಿರುವುದರಿಂದ […]

Continue Reading

ಹೊಸನಗರ ಕ್ಷೇತ್ರ ಮರುಸ್ಥಾಪನೆ ಪಾದಯಾತ್ರೆಯಿಂದ ಫಲವಿಲ್ಲ : ವಾಟಗೋಡು ಸುರೇಶ್

ಅಂದು ಮುಂದಾಳತ್ವ ವಹಿಸಿದ್ದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಕ್ಷೇತ್ರ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಎಂದು ಆಪಾದಿಸಿದರು.ಸದ್ಯ ಎರಡು ರಾಷ್ಟ್ರೀಯ ಪಕ್ಷಗಳೂ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿವೆ. ಹಾಗೂ ಪರಸ್ಪರ ವಿರೋಧ ಪಕ್ಷಗಳಾಗಿವೆ. ಸರಕಾರದ ಹಂತದಲ್ಲಿ ಆಗಬೇಕಿರುವ ಕ್ಷೇತ್ರ ಮರುವಿಂಗಡಣೆಗೆ ಸರಕಾರದ ಮಟ್ಟದಲ್ಲಿ ಒತ್ತಡ ಹೇರಬೇಕಾಗಿರುವ ರಾಜಕೀಯ ಮುಖಂಡರು ಅದನ್ನು ಬಿಟ್ಟು ಇಲ್ಲಿ ಜನಸಾಮಾನ್ಯರ ದಿಕ್ಕುತಪ್ಪಿಸಿ ಪಾದಯಾತ್ರೆ ಮಾಡುತ್ತಿರುವುದರ ಔಚಿತ್ಯವೇನು ಎಂದು ಪ್ರಶ್ನಿಸಿದರು..? ಹೊಸನಗರ ಕ್ಷೇತ್ರ ಇಲ್ಲದ ಕಾರಣಕ್ಕೆ ಅಭಿವೃದ್ಧಿಯಾಗಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. […]

Continue Reading

ಪ್ರಭಾ ಮಲ್ಲಿಕಾರ್ಜುನ್‌ಗೆ ಒತ್ತಾಯ ಮಾಡಿ ಟಿಕೆಟ್ ಕೊಟ್ಟಿದ್ದು ನಾವೇ : DCM ಡಿಕೆಶಿ

“ಅವರು ಕೇಳದಿದ್ದರೂ, ನಾವು ಬಲವಂತವಾಗಿ ಅವರನ್ನು ಚುನಾವಣೆಗೆ ನಿಲ್ಲಿಸಿದ್ದೇವೆ. ದಾವಣಗೆರೆಯಲ್ಲಿ ಹಲವಾರು ಬಾರಿ ಸೋಲು ಕಂಡಿದ್ದ ಹಿನ್ನೆಲೆಯಲ್ಲಿ, ಅವರು ನಿಂತರೆ ಗೆಲುವು ಸಾಧ್ಯವೆಂದು ನಂಬಿದ್ದೆವು. ಈಗ ಗೆದ್ದು ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸತ್ತಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಕುಟುಂಬ ರಾಜಕಾರಣದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ. ಎಲ್ಲಾ ಪಕ್ಷದಲ್ಲೂ ಇದ್ದೇ ಇದೆ. ದಾವಣಗೆರೆಯಲ್ಲಿ ಶಾಮನೂರು ಕುಟುಂಬದಿಂದ ಮೊದಲಿನಿಂದಲೂ ಮೂರು ಜನ ರಾಜಕಾರಣದಲ್ಲಿದ್ದರು. ಈಗಲೂ 3 ಜನ ರಾಜಕಾರಣದಲ್ಲಿದ್ದಾರೆ ಎಂದರು. […]

Continue Reading

BPL ಕಾರ್ಡ್​​ ಆದಾಯ ಮಿತಿ ₹3 ಲಕ್ಷಕ್ಕೇರಿಸುವ ಭರವಸೆ ನೀಡಿದ ಸಚಿವ ಮುನಿಯಪ್ಪ

2011ರ ಸೆನ್ಸಸ್ ಪ್ರಕಾರ ಬೆಂಗಳೂರಲ್ಲಿ 83,98,537 ಜನರಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರೇಷನ್ ಕಾರ್ಡ್ ಕೊಟ್ಟಿರುವುದು 7.10 ಲಕ್ಷಕ್ಕೆ ಮಾತ್ರ. ಇಂದಿನ ಜನಸಂಖ್ಯೆ ಪರಿಗಣಿಸಿದರೆ ಅದು 15% ಕೂಡ ಇಲ್ಲ ಎಂದರು.ಇಂದು ಬೆಂಗಳೂರಲ್ಲಿನ ಬಡವರು, ವಿಧವೆಯರು, ವಿಕಲಚೇತನರು ಹಾಗೂ ಆಟೋ ಚಾಲಕರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ. ಬೆಂಗಳೂರಿನ ಜನಪ್ರತಿನಿಧಿಯಾಗಿ ಬಡವರ ಪರ ನಾವು ಏನು ಕೆಲಸ ಮಾಡಿಲ್ಲ ಎಂಬ ಪಶ್ಚಾತಾಪ ಆಗುತ್ತಿದೆ. 200 ರೂ.‌ ಸೀರೆ ಕೊಡುತ್ತೇವೆ ಅಂದರೆ ಸಾಕು, ಸಾವಿರಾರು ಜನ ಕ್ಯೂನಲ್ಲಿ ನಿಲ್ಲುತ್ತಾರೆ. ಬೆಂಗಳೂರಿನ‌ ತಲಾ […]

Continue Reading

ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ!

ಶಾಲೆಗಳ ಜಮೀನುಗಳು ಯಾವುದೇ ಕಾರಣಕ್ಕೂ ಒತ್ತುವರಿಯಾಗದಂತೆ ತಡೆಯಲು ಮತ್ತು ಅನ್ಯ ಕಾರ್ಯಗಳಿಗೆ ಬಳಕೆಯಾಗದಂತೆ ಕಟ್ಟುನಿಟ್ಟಿನ ರಕ್ಷಣೆ ಒದಗಿಸಲು ಈ ಕಾನೂನು ಬಲ ತುಂಬಲಿದೆ.ಮಕ್ಕಳ ಭವಿಷ್ಯ ಹಾಗೂ ಸರ್ಕಾರಿ ಶಾಲೆಗಳ ಸಬಲೀಕರಣವೇ ನಮ್ಮ ಸರ್ಕಾರದ ಮೂಲ ಮಂತ್ರ. ಈ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ, ತಮ್ಮ ಅತ್ಯಮೂಲ್ಯವಾದ ಸಲಹೆ-ಸೂಚನೆಗಳನ್ನು ನೀಡಿ ಒಮ್ಮತದ ಅಂಗೀಕಾರಕ್ಕೆ ಕಾರಣರಾದ ಸನ್ಮಾನ್ಯ ಸಭಾಪತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ಎಲ್ಲಾ ಸದಸ್ಯರಿಗೂ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪನವರು ಇಂದು ಧನ್ಯವಾದ ತಿಳಿಸಿದರು.

Continue Reading

ಲೋಕಸಭಾ ಕ್ಷೇತ್ರ ಪುನರ್‌ ವಿಂಗಡಣೆ,ಮಹಿಳಾ ಮೀಸಲು ನಿಗದಿಪಡಿಸಲು ಮುಂದಾದ ಕೇಂದ್ರ ಸರ್ಕಾರ

ನಾರಿ ಶಕ್ತಿ ಅಭಿನಂದನ್‌ ಅಧಿನಿಯಮ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲು ಕಲ್ಪಿಸುವ ಸಂಬಂಧ 2023ರ ಮಹಿಳಾ ಮೀಸಲು ವಿಧೇಯಕಕ್ಕೆ ಮಹತ್ವದ ತಿದ್ದುಪಡಿ (ನಾರಿ ಶಕ್ತಿ ಅಭಿನಂದನ್‌ ಅಧಿನಿಯಮ-2023) ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ 2029ರ ಲೋಕಸಭಾ ಚುನಾವಣೆ ವೇಳೆ ಮಹಿಳೆಯರಿಗೆ ಮೀಸಲು ಸ್ಥಾನ ನಿಗದಿಪಡಿಸುವ ಸಂಬಂಧ ಪ್ರಸ್ತುತ ನಡೆಯುತ್ತಿರುವ ಬಜೆಟ್‌ ಅಧಿವೇಶನದಲ್ಲಿತಿದ್ದುಪಡಿ ವಿಧೇಯಕ ಮಂಡಿಸಲು ನಿರ್ಧರಿಸಿದೆ. ಈ ಸಂಬಂಧ ರಾಜಕೀಯ ಪಕ್ಷಗಳ ಜತೆ ಸರಕಾರ ಸಮಾಲೋಚನೆ ನಡೆಸಿದೆ. ಪ್ರಸ್ತಾವಿತ ತಿದ್ದುಪಡಿ ವಿಧೇಯಕ ಕುರಿತು […]

Continue Reading

ರಂಗೇರಿದ ಉಪಚುನಾವಣೆ ; ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಈ ಸಮಾವೇಶದಲ್ಲಿ CM ಸಿದ್ದರಾಮಯ್ಯ, DCM ಡಿ. ಕೆ. ಶಿವಕುಮಾರ್, ಮತ್ತು ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಘಟಾನುಘಟಿ ನಾಯಕರು ಭಾಗವಹಿಸಿದರು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಸೋಮವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

Continue Reading

ಶಿವಮೊಗ್ಗ | ರಾಜ್ಯದ ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣವೇ ನನ್ನ ಏಕೈಕ ಪ್ರಮುಖ ಗುರಿ : ಸಚಿವ ಮಧು ಬಂಗಾರಪ್ಪ

ಬೇಸಿಗೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದರು. ಅಲ್ಲದೆ, ರಾಜ್ಯದಲ್ಲಿ ಇಂಧನ ಅಥವಾ ಅನಿಲದ ಕೊರತೆಯಿದೆ ಎಂಬ ವದಂತಿಗಳಿಗೆ ಕಿವಿಗೊಡಬಾರದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜಕೀಯ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಜವಾಬ್ದಾರಿ ನನ್ನ ಮೇಲಿದೆ. ಪಕ್ಷದಲ್ಲಿ ಯಾವುದೇ ಒಳಜಗಳವಿಲ್ಲದೆ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಜಯಭೇರಿ ಬಾರಿಸುತ್ತೇವೆ ಎಂದರು. […]

Continue Reading