ಹಾವೇರಿ | ಗೌರವ ಡಾಕ್ಟರೆಟ್ ನಿರಾಕರಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಗೌರವ ಡಾಕ್ಟರೇಟ್ ಎಂಬುದು ದೀರ್ಘಕಾಲದಿಂದ ಯಾವುದಾದರೂ ಕ್ಷೇತ್ರದಲ್ಲಿ ವಿಶಿಷ್ಟ ಮತ್ತು ಮಹತ್ತರ ಸೇವೆ ಸಲ್ಲಿಸಿದವರಿಗೆ ನೀಡಬೇಕಾದ ಗೌರವವೆಂಬುದು ನನ್ನ ಅಭಿಪ್ರಾಯ. ಹೀಗಾಗಿ ಇದನ್ನು ಅಂಥ ಸಾಧಕರಿಗೆ ನೀಡಬೇಕು. ರಾಜಕಾರಣಿಗಳಿಗೆ ಅಥವಾ ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಗೌರವ ಡಾಕ್ಟರೇಟ್ ನೀಡುವುದು ಸಮಂಜಸವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ವಿಷಯದಲ್ಲಿ ಪುನರ್ ವಿಚಾರ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Continue Reading

ಬಾಗಲಕೋಟೆ ಉಪಚುನಾವಣೆ : ಬಿಜೆಪಿ ಅಭ್ಯರ್ಥಿ ವಿರುದ್ಧ ಕೇಸರಿ ಶಾಲು ಹಾಕಿ NSUI ಅಪಪ್ರಚಾರ ಆರೋಪ

ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಸೋಗಿನಲ್ಲಿ ಕೇಸರಿ ಶಾಲು ಹಾಕಿಕೊಂಡು ಬಾಗಲಕೋಟೆ ನಗರದ ಕುಮಾರೇಶ್ವರ ಕ್ಯಾಂಪಸ್‌ಗೆ ಎಂಟ್ರಿಕೊಟ್ಟ NSUI ಸಂಘಟನೆ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಚರಂತಿಮಠ ವಿರುದ್ಧ ಕರಪತ್ರ ಹಂಚಿ ಅಪಪ್ರಚಾರ ನಡೆಸಿದ್ದಾರೆ. ಕರಪತ್ರದಲ್ಲಿ ಬಿಜೆಪಿ ಗೆ ವೋಟ್ ಹಾಕಿದ್ರೆ ಜೈಲು ಫಿಕ್ಸ್‌ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ಚರಂತಿಮಠ ಭಾವಚಿತ್ರಕ್ಕೆ ಎಕ್ಸ್ ಮಾರ್ಕ್ ಹಾಕಿ, ಬಿಜೆಪಿ ವಿರುದ್ಧ ವಿದ್ಯಾರ್ಥಿಗಳು ಎಚ್ಚರದಿಂದಿರಿ ಎಂದು ಉಲ್ಲೇಖಿಸಲಾಗಿದೆ. ಈ ಕರಪತ್ರ ಹಂಚುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಇದರಿಂದ ಗಲಾಟೆ ಶುರುವಾಗಿದೆ.ಕರಪತ್ರ […]

Continue Reading

ಬಾಗಲಕೋಟೆ ಬೈ ಎಲೆಕ್ಷನ್ ; ಮಿತಿ ಮೀರಿದ ರಾಜಕೀಯ ನಾಯಕರ ಮಾತು

ಗೌಡ, ಲಿಂಗಾಯತ, ಕುರುಬ, ವಾಲ್ಮೀಕಿ, ದಲಿತರು ವಿಭಜನೆಯಾಗಿದೆ. ಹಿಂದೂಗಳು ಉಳಿಯಬೇಕು ಅಂದ್ರೆ ಒಗ್ಗಟ್ಟಾಗಬೇಕು ಎಂದು ಹೇಳಿದ್ದಾರೆ. ಕವರನಲ್ಲಿ 2000 ಕೊಟ್ರೆ ಓಟ್ ಹಾಕ್ತಾರೆ ಅಂತ ತಿಳಿಕೊಂಡಿದ್ದಾರೆ ಆದ್ರೆ ಹಾಗಾಗಬಾರದು ಹಿಂದೂಗಳು ಓಟ್ ಹಾಕಿದ್ರಿಂದಲೇ ದೇಶಕ್ಕೆ ಮೋದಿಯಂತವರು ಪ್ರಧಾನಿಯಾಗಿದ್ದಾರೆ.ದೇಶ ಅಭಿವೃದ್ಧಿ ಪಥದಲ್ಲಿ ಇದೆ ಎಂದ ಪ್ರತಾಪ ಸಿಂಹ ಹೇಳಿದರು.

Continue Reading

ಶಿವಮೊಗ್ಗ | ಎಲೆಕ್ಟ್ರಿಕ್ ವಾಹನಗಳ ಮೇಲೆ ರಾಜ್ಯ ಸರ್ಕಾರ ವಿಧಿಸಿರುವ ತೆರಿಗೆ ಕ್ರಮ ಖಂಡನೀಯ : ಜಗದೀಶ್ ಎನ್.ಕೆ

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ತಾಳಲಾಗದೆ ತೆರಿಗೆಗಳ ಮೂಲಕ ಜನರಿಂದ ಹಣ ಸಂಗ್ರಹಿಸಲು ಮುಂದಾಗಿದೆ ಎಂದು ಆರೋಪಿಸಿದ ಅವರು, “ಗ್ಯಾರಂಟಿಗಳ ಹೆಸರಿನಲ್ಲಿ ಭರವಸೆ ನೀಡಿದ ಸರ್ಕಾರವೇ ಈಗ ಜನರ ಮೇಲೆ ಹೆಚ್ಚುವರಿ ಬಾಧೆ ಹಾಕುತ್ತಿದೆ” ಎಂದು ಟೀಕಿಸಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಮೇಲೆ ಲೈಫ್‌ಟೈಮ್ ಟ್ಯಾಕ್ಸ್ ವಿಧಿಸುವುದು ಜನಸಾಮಾನ್ಯರಿಗೆ, ವಿಶೇಷವಾಗಿ ಮಧ್ಯಮ ವರ್ಗಕ್ಕೆ ಆರ್ಥಿಕ ಒತ್ತಡ ಉಂಟುಮಾಡಲಿದೆ. ಇದರಿಂದ ಹಸಿರು ತಂತ್ರಜ್ಞಾನಗಳ ಸ್ವೀಕಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ. ಇದಲ್ಲದೆ, […]

Continue Reading

ವೈದ್ಯರ ಮಗ ವೈದ್ಯ ಆಗ್ತಾನೆ, MLA ಮಗ MLA ಆಗೋದ್ರಲ್ಲಿ ತಪ್ಪೇನು? ; ಕುಟುಂಬ ರಾಜಕೀಯಕ್ಕೆ ಎಂ.ಬಿ.ಪಾಟೀಲ್ ಸಮರ್ಥನೆ

ಮೃತ ಶಾಸಕರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವುದು ಕಾಂಗ್ರೆಸ್ ಪಕ್ಷದ ಪರಂಪರೆಯಾಗಿದೆ. “ಇದರಲ್ಲೇನು ತಪ್ಪಿಲ್ಲ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಇದೆ. ಹಿಂದಿನ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಗೆದ್ದಿದೆ. ಈ ಬಾರಿಯೂ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದೆ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಸಾದಿಕ್ ಪೈಲ್ವಾನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಪಕ್ಷದ ಅಭ್ಯರ್ಥಿಗಾಗಿ ಜಮೀರ್ ಅಹ್ಮದ್ ಪ್ರಚಾರ ನಡೆಸಲಿದ್ದಾರೆ. ಅವರು ಶಾಮನೂರು ಕುಟುಂಬದ ಒಳ್ಳೆಯ ಸ್ನೇಹಿತರು” ಎಂದು ತಿಳಿಸಿದರು.

Continue Reading

ಬಾಗಲಕೋಟೆ ಉಪಚುನಾವಣೆ ; ಕೇಂದ್ರದ ಬೆಲೆ ಏರಿಕೆ ವಿರುದ್ದ ಸುರ್ಜೆವಾಲ ವಾಗ್ದಾಳಿ

ಇನ್ನು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುರ್ಜೆವಾಲ ಕರ್ನಾಟಕದಲ್ಲಿ ಎರಡು ವಿಚಾರದ ಮೇಲೆ ಚುನಾವಣೆ ನಡೆಯುತ್ತಿದೆ ಎಂದರು. ಕಾಂಗ್ರೆಸ್ ಪಕ್ಷದಿಂದ ಸಮಾವೇಶಿ ವಿಕಾಸ ಹಾಗೂ ಜನ ಕಲ್ಯಾಣದ ಮೇಲೆ ಚುನಾವಣೆ ನಡೆಯುತ್ತಿದ್ದರೆ, ಬಿಜೆಪಿ ಅವರದ್ದು ವಿನಾಶ, ದ್ವೇಷ,ಒಡೆದು ಅಳುವ ನೀತಿಯ ಚುನಾವಣೆ ಎಂದು ಕಿಡಿ ಕಾರಿದರು. ನಾವು ಜನರ ಸೇವಕರು ಜನರೇ ನಮ್ಮ ಸರ್ಕಾರದ ಮಾಲೀಕರು ಎಂದರು. ಬಿಜೆಪಿ ಅಜೆಂಡಾ ಏನಿದೆ ಅಂದರೆ ಗ್ಯಾರಂಟಿಗಳನ್ನ ರದ್ದು ಮಾಡಬೇಕು, ಕಮಿಷನ್ ದಂಧೆ ಪ್ರಾರಂಭ ಮಾಡಬೇಕು, ಇಂದು ಏಪ್ರಿಲ್ ಒಂದರಂದು ನಿನ್ನೆ […]

Continue Reading

ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲ್ಲಿಸಿ ; ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ

ನೀವು ಯಾರು ಆತಂಕ ಪಡಬೇಕಾಗಿಲ್ಲ,ನಿಮಗೆ ರಕ್ಷಣೆ ನೀಡುವ ಜವಾಬ್ದಾರಿ ನಮ್ಮದು ಎಂದ ಸಿಎಂ ಸಿದ್ದರಾಮಯ್ಯ. ಮುಂದುವರೆದು ನಾವು ಗ್ಯಾರಂಟಿ ಯೋಜನೆ ನೀಡಿದೆವು ಆದರೆ ಬಿಜೆಪಿ ಇದನ್ನ ವಿರೋಧಿಸಿದರು. ನಮ್ಮ ಸರ್ಕಾರ ಬಡವರು, ದೀನ ದಲಿತರ ಪರವಿದೆ. ಹಾಗಾಗಿ ಈ ಬಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಉಮೇಶ್ ಮೇಟಿಗೆ ಮತ ನೀಡುವ ಮೂಲಕ ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಾಯಾಚನೆ ಮಾಡಿದರು.

Continue Reading

ಶಾಸಕರಿಗೆ ಐಪಿಎಲ್ 3, ಅಂತಾರಾಷ್ಟ್ರೀಯ ಪಂದ್ಯದ 2 ಟಿಕೆಟ್ ನೀಡಲು KSCA ಒಪ್ಪಿಗೆ ; DCM ಡಿ.ಕೆ ಶಿವಕುಮಾರ್

ಈ ಮೊದಲು 1 ಪ್ಲಸ್ 1 ಒಟ್ಟು ಎರಡು ಉಚಿತ ಟಿಕೆಟ್ ನೀಡಲು ತೀರ್ಮಾನಿಸಲಾಗಿತ್ತು. ಆದರೆ, ಇಂದಿನ ಸಭೆಯಲ್ಲಿ ಇನ್ನೊಂದು ಟಿಕೆಟ್ ಹೆಚ್ಚಳ ಮಾಡಲಾಗಿದ್ದು, ಅಂತಿಮವಾಗಿ ಒಬ್ಬ ಎಂಎಲ್​​ಎಗೆ ಒಟ್ಟು 3 ಟಿಕೆಟ್​​ಗಳನ್ನು ನೀಡಲು ಒಪ್ಪಂದವಾಗಿದೆ. IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರು ಬೇಡಿಕೆ ಇಟ್ಟಿರುವ ಸಂಬಂಧ ಇಂದು (ಮಾರ್ಚ್ 30) ಬೆಂಗಳೂರಿನ ಸದಾಶಿವನಗರದ ಡಿಸಿಎಂ ಡಿಕೆ ಶಿವಕುಮಾರ್​​ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಆರ್​ಸಿಬಿ ಪದಾಧಿಕಾರಿಗಳು ಭಾಗಿಯಾಗಿದ್ದು, […]

Continue Reading

SSLC ಒಟ್ಟು ಮಾರ್ಕ್ಸ್​​ 625ದಿಂದ 525ಕ್ಕೆ ಇಳಿಕೆ ; ತೃತೀಯ ಭಾಷೆಯ ಅಂಕಕ್ಕೆ ಕೊಕ್ ಆದರೆ ಪರೀಕ್ಷೆ ಕಡ್ಡಾಯ

ಬದಲಿಗೆ ತೃತೀಯ ಭಾಷೆ ಪರೀಕ್ಷೆಯ ಅಂಕವನ್ನು ಗ್ರೇಡ್ ಮೂಲಕ ನೀಡಲಾಗುತ್ತದೆ. ಇದರಿಂದ ಒಟ್ಟು ಅಂಕಗಳು 625ರಿಂದ 525 ಇಳಿಕೆ ಮಾಡಲಾಗಿದೆ. ಆದರೆ ವಿದ್ಯಾರ್ಥಿಗಳು ತೃತೀಯ ಭಾಷೆಯ ಪರೀಕ್ಷೆಯನ್ನು ಬರೆಯುವುದು ಕಡ್ಡಾಯ. ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯ ಕೆಆರ್. ವೃತ್ತದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ನಿಯಮವು ಹೊಸ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. ಈಗ ನಮ್ಮಲ್ಲಿ‌ ಇರುವುದು ತ್ರಿಭಾಷಾ ನೀತಿ. ಎಸ್ಎಸ್ಎಲ್​​​ಸಿಯಲ್ಲಿ ಹಿಂದಿ ಭಾಷೆ ಅಂಕವನ್ನ […]

Continue Reading