ಭದ್ರಾವತಿ | ಎಸ್‌ಐಆರ್ ಕರ್ತವ್ಯದಲ್ಲಿದ್ದಾಗ ಬಿಎಲ್ ಓಗೆ ನಾಯಿ ಕಡಿತ

ಶಿವಮೊಗ್ಗ

ಭದ್ರಾವತಿ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳೇನಗರದ ಖಾಜಿಮೊಹಲ್ಲಾ-ಕೋಟೆ ಏರಿಯಾ ಭಾಗದಲ್ಲಿ ಮತದಾರರಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮತಗಟ್ಟೆ ಅಧಿಕಾರಿಯೊಬ್ಬರು ನಾಯಿ ಕಡಿತಕ್ಕೆ ಒಳಗಾಗಿರುವ ಘಟನೆ ನಡೆದಿದೆ.

ನಗರಸಭೆ ೫ನೇ ವಾರ್ಡಿನ ಖಾಜಿಮೊಹಲ್ಲಾ-ಕೋಟೆ ಏರಿಯಾ ೩ನೇ ತಿರುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮತಗಟ್ಟೆ ಅಧಿಕಾರಿ ರಹಮತುಲ್ಲಾ ಅವರ ಕಾಲಿಗೆ ಸಾಕು ನಾಯಿ ಕಚ್ಚಿದ್ದು ಅವರಿಗೆ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಇವರು ತಕ್ಷಣ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಕೊಂಡಿದ್ದಾರೆ.ಮಾಹಿತಿ ತಿಳಿದ ತಕ್ಷಣ ಉಪತಹಸೀಲ್ದಾರ್ ಮಂಜಾನಾಯ್ಕರವರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದರು.

ಸಾರ್ವಜನಿಕರು ಎಸ್‌ಐಆರ್ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆಗಾಗಿ ಮನೆ ಬಾಗಿಲಿಗೆ ಬರುವ ಅಧಿಕಾರಿಗಳ ಮೇಲೆ ತಮ್ಮ ನಾಯಿಗಳು ದಾಳಿ ಮಾಡದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

Author