ಭದ್ರಾವತಿ | ಕರ್ಕಶ ಶಬ್ದದ, ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನಗಳ ವಶ

ಶಿವಮೊಗ್ಗ

ಭದ್ರಾವತಿ ನಗರದಲ್ಲಿ ಬುಧವಾರ ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ನಗರ ವೃತ್ತ ನಿರೀಕ್ಷಕರಾದ ನಾಗಮ್ಮ ನೇತೃತ್ವದಲ್ಲಿ ಸಂಚಾರ ಪೊಲೀಸರು ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಕರ್ಕಶ ಶಬ್ದ ಮಾಡುವ ಹಾಗೂ ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಸಂಚಾರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಚಂದ್ರಶೇಖರ್ ಮತ್ತು ರಾಜೇಶ್ ಸಂಗೊಳ್ಳಿ ಮತ್ತು ಸಿಬ್ಬಂದಿಗಳು ವಿವಿದೆಡೆ ವಿಶೇಷ ಕಾರ್ಯಾಚರಣೆ ಮಾಡಿದರು. ಜನರಿಗೆ ಮತ್ತು ಇಲಾಖೆಗೆ ತಲೆನೋವಾಗಿದ್ದ ನಂಬರ್ ಪ್ಲೇಟ್ ಇಲ್ಲದ ಹಾಗೂ ದೋಷಪೂರಿತ ಸೈಲೆನ್ಸರ್ ಹೊಂದಿದ್ದ ೩೫ ದ್ವಿಚಕ್ರ ವಾಹನಗಳನ್ನು ತಡೆ ಹಿಡಿದು ಕಾನೂನು ಕ್ರಮಕೈಗೊಳ್ಳಲಾಯಿತು.

ನಂತರ ಡಿವೈಎಸ್‌ಪಿ ಪ್ರಕಾಶ್ ರಾಥೋಡ್ ವಾಹನ ಚಾಲಕರಿಗೆ ಸಂಚಾರ ಅರಿವು ಮೂಡಿಸಿದರು. ನ್ಯೂಟೌನ್ ಸಬ್‌ಇನ್ಸ್‌ಪೆಕ್ಟರ್ ರಮೇಶ್ ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Author