ಶಿವಮೊಗ್ಗ | ಮಹಾನಗರ ಪಾಲಿಕೆ ಮತ್ತು ಸಂಚಾರಿ ಪೊಲೀಸ್ ಜಂಟಿ ಕಾರ್ಯಾಚರಣೆ ; ಖಾಸಗಿ ಬಸ್ ನಿಲ್ದಾಣದ ಬಳಿ ಇದ್ದ ಅನಧಿಕೃತ ಹೂ ಮತ್ತು ಹಣ್ಣಿನ ಮಾರುಕಟ್ಟೆ ತೆರವು..!

ಶಿವಮೊಗ್ಗ

ಶಿವಮೊಗ್ಗ, ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಅನಧಿಕೃತ ಹೂ ಮತ್ತು ಹಣ್ಣಿನ ತಾತ್ಕಾಲಿಕ ಮಾರುಕಟ್ಟೆಯನ್ನು ಮಹಾನಗರ ಪಾಲಿಕೆ ಮತ್ತು ಸಂಚಾರಿ ಪೊಲೀಸ್ ಅಧಿಕಾರಿಗಳು ಇಂದು ತೆರವುಗೊಳಿಸಿದ್ದಾರೆ. ಈ ಹಿಂದೆ ಶಿವಪ್ಪ ನಾಯಕ ಹೂ ಮತ್ತು ಹಣ್ಣಿನ ಮಾರುಕಟ್ಟೆಯನ್ನು ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ವಾಹನ ಪಾರ್ಕಿಂಗ್ ಜಾಗಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಕ್ಕೆ ಅವಕಾಶ ನೀಡಲಾಗಿತ್ತು.

ಈಗ ಶಿವಪ್ಪ ನಾಯಕ ವೃತ್ತದಲ್ಲಿ ಶಾಶ್ವತವಾಗಿ ಬಹುಮಹಡಿ ಪಾರ್ಕಿಂಗ್ ಕಟ್ಟಡದ ಕೆಳಭಾಗದಲ್ಲಿ ಅವರಿಗೆ ಶಾಶ್ವತ ವ್ಯವಸ್ಥೆ ಮಾಡಲಾಗಿದ್ದು ಅನೇಕ ಬಾರಿ ಅವರಿಗೆ ಸೂಚನೆ ನೀಡಿದ್ದರು ವ್ಯಾಪಾರಿಗಳು ತೆರಳಿರಲಿಲ್ಲ. ಇಂದು ಸಾಂಕೇತಿಕವಾಗಿ ಪಾಲಿಕೆ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಕೆಲವು ಮಳಿಗೆಗಳನ್ನು ತೆರವುಗೊಳಿಸಿದ್ದು ವ್ಯಾಪಾರಿಗಳಿಗೆ ಮನವಿ ಮಾಡಿ ಒಂದು ವಾರದ ಗಡುವು ನೀಡಿದ್ದು ಮುಂದಿನ ಶನಿವಾರದೊಳಗೆ ತೆರವುಗೊಳಿಸುವಂತೆ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ಅವರು ಸೂಚನೆ ನೀಡಿದ್ದಾರೆ.

ಖಾಸಗಿ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ದ್ವಿಚಕ್ರ ವಾಹನ ಪಾರ್ಕಿಂಗ್ ಗೆ ಜಾಗವಿಲ್ಲದೆ ಬಹಳ ಸಮಯದಿಂದ ತೊಂದರೆಯಾಗುತ್ತಿತ್ತು ಹಾಗಾಗಿ ತಾತ್ಕಾಲಿಕವಾಗಿ ನೀಡಿದ ಈ ಷಡ್ ಅನ್ನು ತೆರವುಗೊಳಿಸುವಂತೆ ಅಂತಿಮ ಗಡುವು ನೀಡಲಾಗಿದೆ.

Author