ಶಿವಮೊಗ್ಗ | ಶಂಕರರ ವಿರುದ್ಧ ಅವಹೇಳನಕಾರಿ ಕಮೆಂಟ್ ; ವೆಬ್ ಸೈಟ್ ಗಳ ವಿರುದ್ಧ ಕಾನೂನು ಕ್ರಮವಾಗಲಿ : ಶ್ರೀಶಂಕರ ಚೈತನ್ಯ ವೇದಿಕೆ ಆಗ್ರಹ..!

ಶಿವಮೊಗ್ಗ

ಶಿವಮೊಗ್ಗ, ಕೆಲವು ಅಜ್ಞಾನಿಗಳು ಮತ್ತು ಸಂಕುಚಿತ ಮನೋಭಾವವುಳ್ಳ ಶಿಷ್ಯವೃಂದರವರು ವೆಬ್‌ಸೈಟ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀ ಶಂಕರರ ವಿರುದ್ಧ ಅವಹೇಳನಕಾರಿಯಾಗಿ ಅಪಪ್ರಚಾರ ಬೆಳಕಿಗೆ ಬಂದಿದೆ. ಇದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಶ್ರೀಶಂಕರ ಚೈತನ್ಯ ವೇದಿಕೆ ಆಗ್ರಹಿಸಿದೆ.

ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಪಿ ಎಂ ಮಾಲತೇಶ, ಇದು ಬ್ರಾಹ್ಮಣರಿಗೆ ಶೋಭೆಯಲ್ಲ. ಈ ವಿಚಾರದಲ್ಲಿ ಎಲ್ಲಾ ಮಠದ ಪೀಠಾಧಿಪತಿಗಳು ತಮ್ಮ ಮಠಕ್ಕೆ ಸಂಬಂಧಪಟ್ಟ ವೆಬ್‌ಸೈಟ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಲ್ಲಿ ಗಮನಿಸಿ ಕ್ರಮ ಜರುಗಿಬೇಕು. ಅಪಪ್ರಚಾರ ಮಾಡುತ್ತಿರುವ ವೆಬ್ ಸೈಟ್ ಗಳನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.

ಹಲವು ದಿನಗಳ ಹಿಂದೆ ಉಡುಪಿಯ ಶಿರೂರು ಮಠದಲ್ಲಿ ಅಚಾತುರ್ಯದಿಂದ ನಡೆದ ಘಟನೆಯೊಂದಕ್ಕೆ ಕೆಲ ಹಿರಿಯರು ಕ್ಷಮೆಯಾಚಿಸುವ ಪರಿಸ್ಥಿತಿ ಬಂದೊದಗಿತ್ತು. ಆದರೆ ಕೆಲ ಕಿಡಿಗೇಡಿಗಳು ಇದರ ಸಂದರ್ಭವನ್ನು ಉಪಯೋಗಿಸಿಕೊಂಡು ಆದಿಶಂಕರರ ವಿರುದ್ಧ ಅಪಪ್ರಚಾರ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಯಾರು ಜಗತ್ತಿನ ಸತ್ಯಮಾರ್ಗವನ್ನು ತೋರಿಸಿ ಧರ್ಮವನ್ನು ರಕ್ಷಿಸಿದರೋ ಅವರನ್ನೇ ನಿಂದಿಸುವುದು ಯಾರಿಗೂ ಶೋಭೆ ತರುವಂಥಹದ್ದಲ್ಲ. ಅದೈತ ಸಿದ್ಧಾಂತದ ಪ್ರತಿಪಾದಕರು ಅಸಹಾಯಕರಲ್ಲ. ಶ್ರೀಶಂಕರರು ಹಾಗೂ ಕ್ಷೇತ್ರಗಳ ಬಗ್ಗೆ ಹಗುರವಾಗಿ ಮಾತನಾಡಬಾರದು. ಅವರವರ ತತ್ವ ಸಿದ್ಧಾಂತವನ್ನು ಧರ್ಮಾನುಸಾರ ಅನುಸರಿಸಸಬೇಕೆಂದರು.

Author