ಭದ್ರಾವತಿ ವಿಶ್ವ @ ಮುದ್ದೆ ವಿಶ್ವ ಹಲ್ಲೆ ಪ್ರಕರಣ ; ಐವರು ಆರೋಪಿಗಳು ನ್ಯಾಯಾಲಯಕ್ಕೆ ಶರಣು

ಕ್ರೈಂ

ಭದ್ರಾವತಿ,ಜೂನ್ 8 ರಂದು ಅನ್ವರ್ ಕಾಲೋನಿಯಲ್ಲಿ ಟಿ ಅಂಗಡಿ ಮುಂದೆ ಭೀಕರ ಹಲ್ಲೆಗೆ ಒಳಗಾಗಿದ್ದ ವಿಶ್ವನ ಪ್ರಕರಣ ಸಂಬಂಧ ಇಂದು ಭದ್ರಾವತಿಯ ಎರಡನೇ ಹೆಚ್ಚುವರಿ ನ್ಯಾಯಾಲಯದ ಮುಂದೆ ಐವರು ಆರೋಪಿಗಳು ಶರಣಾಗಿದ್ದಾರೆ.

ಪ್ರಕಾಶ್ @ ಕರಾಟೆ, ಭರತ್ @ ಕೊಳಕ, ರಾಕೇಶ್, ಆಲ್ವಿನ್ ಹಾಗೂ ಪ್ರಜ್ವಲ್ ಇವರುಗಳು ಮಾನ್ಯ ನ್ಯಾಯಧೀಶರಾದ ಚೇತನ ಅವರ ಮುಂದೆ ಶರಣಾಗಿರುತ್ತಾರೆ.

ಹಾಗೂ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂಬ ಮಾಹಿತಿಯಾಗಿದೆ.

Author