ಶಿವಮೊಗ್ಗ | ಚಿನ್ನಾಭರಣ ಕದ್ದಿದ್ದ ಬಾಲಕರಿಬ್ಬರು ಪೊಲೀಸರ ವಶಕ್ಕೆ

ಕ್ರೈಂ

ಶಿವಮೊಗ್ಗ, ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಮನೆಯ ಅಡುಗೆ ಕೋಣೆಯ ವೆಂಟಿಲೇಟರ್ ಮುಖೇನ ಒಳಗೆ ನುಗ್ಗಿ ಸುಮಾರು ೬.೩೯ ಲ. ರೂ. ಬೆಲೆಬಾಳುವ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಬಾಲಕರನ್ನು ಬಂಧಿಸಲಾಗಿದೆ.

ಭದ್ರಾವತಿ ತಾಲೂಕಿನ ತಡಸ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಘಟನೆ ಬಗ್ಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ: ೧೭೭/೨೦೨೬ ಕಲಂ ೩೩೧(೩),೩೦೫(ಂ) ಬಿ.ಎನ್.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿತ್ತು.ಆರೋಪಿತರನ್ನು ಪತ್ತೆ ಹಚ್ಚುವ ಕುರಿತು ಡಿಎಸ್ಪಿ ಪ್ರಕಾಶ್ ರಾಥೋಡ್ ಮೇಲ್ವಿಚಾರಣೆಯಲ್ಲಿ ತಂಡ ರಚಿಸಲಾಗಿತ್ತು.

ಗ್ರಾಮಾಂತರ ಸಿಪಿಐ ಚಿದಾನಂದ, ಪಿಎಸ್‌ಐ ಶಿಲ್ಪಾ ನಾಯನೇಗಲಿ, ಮಹೇಶ್ ಹಾಗೂ ಎ ಎಸ್ ಐ ವೆಂಕಟೇಶ್, ರವಿಕುಮಾರ್, ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಇದರಲ್ಲಿದ್ದರು.ಸಿಕ್ಕ ಸುಳಿವಿನ ಆಧಾರದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಬಯಲಿಗೆ ಬಂದಿದೆ. ಅವರಿಂದ ಎಲ್ಲಾ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

Author