ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಹೊತ್ತಿದ ಮೆರವಣಿಗೆಯ ಕಿಚ್ಚು, ಕಾಡಿಚ್ಚಿನಂತೆ ಧಗಧಗಿಸೋದಕ್ಕೆ ಶುರುವಾಗಿದೆ. ಇನ್ಸ್ಪೆಕ್ಟರ್ ಮಾತಿಗೆ ಕೆರಳಿ ಕೆಂಡವಾಗಿರೋ ಕಮಲ ನಾಯಕರು, ನಾಲ್ಕು ದಿನಗಳ ಗಡುವು ಕೊಟ್ಟಿದ್ದಾರೆ.
ಇನ್ಸ್ಪೆಕ್ಟರ್ ಅನ್ನು ಅಮಾನತು ಮಾಡದಿದ್ದರೆ ಉಗ್ರ ಹೋರಾಟದ ಮುನ್ಸೂಚನೆ ನೀಡಿದ್ದಾರೆ. ಇದು ಟಿ. ನರಸೀಪುರದಲ್ಲಿ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಇನ್ನು ಇದೇ ವಿಷಯವಾಗಿ ಶಿವಮೊಗ್ಗದಲ್ಲಿ ಮಾತನಾಡಿದ ಶಾಸಕ ಚನ್ನಬಸಪ್ಪ, ಗಣೇಶ ಹಬ್ಬ ಮುಗಿಯಲಿ, ಮುಂದೈತೆ ಮಾರಿಹಬ್ಬ ಅಂತಾ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಟಿ. ನರಸೀಪುರ ಲಿಂಕ್ ರಸ್ತೆಯಲ್ಲಿ ಗಣೇಶ ಮೆರವಣಿಗೆ ವಿವಾದಕ್ಕೆ ಸಂಬಂಧಪಟ್ಟಂತೆ, ಹಿಂದೂ ಜಾಗರಣ ವೇದಿಕೆ, ಇನ್ಸ್ಪೆಕ್ಟರ್ ಧನಂಜಯ್ ಸವಾಲು ಸ್ವೀಕರಿಸಿದೆ.
ಮೊದಲ ಬಾರಿಗೆ ನರಸೀಪುರದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿದೆ. ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಹಿಂದೂ ಜಾಗರಣ ವೇದಿಕೆ ವತಿಯಿಂದ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಈ ವೇಳೆ ವಿವಿಧ ಧಾರ್ಮಿಕ ಗುರುಗಳು, ಬಿಜೆಪಿ ಮುಖಂಡರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು.
ಇನ್ನು, ಸೆಪ್ಟೆಂಬರ್ 18ಕ್ಕೆ ಲಿಂಕ್ ರಸ್ತೆಯಲ್ಲಿ ಗಣೇಶ ಮೂರ್ತಿ ಭವ್ಯ ಮೆರವಣಿಗೆಗೆ ಸಿದ್ಧತೆ ನಡೆಸಲಾಗಿದೆ.ಇನ್ನು, ಈ ವೇಳೆ ಹಿಂದೂ ಜಾಗರಣ ವೇದಿಕೆಯ ಮಹೇಶ್ ಮಾತನಾಡಿದ್ದು, ಇನ್ಸ್ಪೆಕ್ಟರ್ ಧನಂಜಯ್ ಅವರ ಸವಾಲು ಸ್ವೀಕಾರ ಮಾಡಿದ್ದೇವೆ. ಲಿಂಕ್ ರಸ್ತೆಯಲ್ಲಿ ಸೆ. 18ರಂದು ಭವ್ಯ ಮೆರವಣಿಗೆ ಹೋಗ್ತವೆ. ಶೋಭಾಯಾತ್ರೆ ನಡೆಸುತ್ತೇವೆ. 5 ಸಾವಿರ ಹಿಂದೂ ಕಾರ್ಯಕರ್ತರು ಆಗಮಿಸಲಿದ್ದಾರೆ.
ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಹಿಂದೂ ಕಾರ್ಯಕರ್ತರು ಬರಲಿದ್ದಾರೆ. ಗಣೇಶ ಮೂರ್ತಿ ಭವ್ಯ ಮೆರವಣಿಗೆಯನ್ನು ಇನ್ಸ್ಪೆಕ್ಟರ್ ಧನಂಜಯ ನೋಡಿ ಕಣ್ಣು ತುಂಬಿಕೊಳ್ಳಲಿ ಎಂದು ಹೇಳಿದರು.





