ಶಿವಮೊಗ್ಗ,ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಯಶಸ್ವಿಯಾಗಿ ದೇಶವನ್ನು ಮುನ್ನಡೆಸುತ್ತಿರುವ ಈ ಶುಭ ಸಂದರ್ಭದಲ್ಲಿ, ಅವರ ಉತ್ತಮ ಆರೋಗ್ಯ, ಆಯುಷ್ಯ ಹಾಗೂ ದೇಶದ ನಿರಂತರ ಅಭಿವೃದ್ಧಿಗಾಗಿ ಇಂದು ಶಿವಮೊಗ್ಗದ ವಿನೋಬನಗರದ ಶ್ರೀ ಅಭೀಷ್ಟ ವರ ಗಣಪತಿ ದೇವಸ್ಥಾನದಲ್ಲಿ ಭಕ್ತಿಪೂರ್ವಕವಾಗಿ ವಿಶೇಷ ಪೂಜೆ ಸಲ್ಲಿಸಿದ ಸಂಸದ ಬಿ. ವೈ. ರಾಘವೇಂದ್ರ.
ಮುಂದುವರೆದು ಕಳೆದ 12 ವರ್ಷಗಳಿಂದ ದೇಶವನ್ನು ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ದು, ಕೋಟ್ಯಂತರ ಭಾರತೀಯರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿರುವ ಮಾನ್ಯ ಪ್ರಧಾನಿಯವರ ನೇತೃತ್ವದಲ್ಲಿ ನಮ್ಮ ‘ವಿಕಸಿತ ಭಾರತ’ದ ಸಂಕಲ್ಪವು ಇನ್ನಷ್ಟು ಬಲಿಷ್ಠವಾಗಿ ಸಾಕಾರಗೊಳ್ಳಲಿ ಎಂದು ಈ ಸಂದರ್ಭದಲ್ಲಿ ಮಂಗಲ ಕಾಮನೆಗಳನ್ನು ಅರ್ಪಿಸಲಾಯಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿ 7ನೇ ವಾರ್ಡ್ ಅಧ್ಯಕ್ಷರಾದ ವಿಶ್ವನಾಥ್, ಮಾಜಿ ಪಾಲಿಕೆ ಸದಸ್ಯರಾದ ಸೋಮಸುಂದರ್, ಮಾಲತೇಶ್ ಸಿ.ಹೆಚ್., ಹಿರಿಯರಾದ ಪದ್ಮನಾಭ ಭಟ್, ನಗರ ಕಾರ್ಯದರ್ಶಿ ರಂಗೇಶ್ ಹಾಗೂ ವಾರ್ಡ್‌ನ ವಿವಿಧ ಸ್ತರದ ಪದಾಧಿಕಾರಿಗಳು, ನಿಷ್ಠಾವಂತ ಕಾರ್ಯಕರ್ತ ಬಂಧುಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಮಾನ್ಯ ಪ್ರಧಾನಿಯವರ ಜನಪರ ಹಾಗೂ ದೇಶಭಕ್ತಿಯ ನಾಯಕತ್ವವು ನಮಗೆಲ್ಲರಿಗೂ ಸದಾ ದೇಶಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರಂತರ ಪ್ರೇರಣೆಯಾಗಿದೆ ಎಂದು ತಿಳಿಸಿದರು.


