ಶಿವಮೊಗ್ಗ | ಜೂನ್ 12 ರಂದು “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ-2026”

ಮಕ್ಕಳಿಗೆ ನ್ಯಾಯಯುತ ಆಟದ ಅವಕಾಶ, ವಯಸ್ಕರಿಗೆ ಯೋಗ್ಯ ಕೆಲಸ” ಎಂಬ ಘೋಷಣೆಯೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.ಜೂನ್ 12 ರಂದು ಬೆಳಿಗ್ಗೆ 09.30 ಕ್ಕೆ ಶಿವಮೊಗ್ಗದ ಶಿವಪ್ಪ ನಾಯಕ ಸರ್ಕಲ್‌ನಲ್ಲಿ ಸ್ತಬ್ಧಚಿತ್ರ ವಾಹನ ಚಾಲನೆ ಹಾಗೂ ಕರಪತ್ರಗಳ ಮೂಲಕ ಬಾಲಕಾರ್ಮಿಕ ಪದ್ಧತಿ ವಿರೋಧಿ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.