ಶಿವಮೊಗ್ಗ ಮೂಲದ ದುರ್ಗಿಗುಡಿ ಕ್ರಿಕೆಟ್ ಅಸೋಸಿಯೇಷನ್ ನ ಮುಖಾಂತರ ಬೆಳಕಿಗೆ ಬಂದ ಶಿವಮೊಗ್ಗದ ರಣಜಿ ಆಟಗಾರ ಅಕ್ಷಯ್ ಅವರು ಇಂದು ಬೆಂಗಳೂರಿನಲ್ಲಿ ನಡೆಯುತ್ತಿದ್ದ ರಣಜಿ ಪಂದ್ಯದಲ್ಲಿ ಆಟ ಆಡುತ್ತಿದ್ದ ವೇಳೆ ಹೃದಯ ಸ್ಥಂಬದ ಪರಿಣಾಮ ದುರ್ಮರಣಕ್ಕೆ ಈಡಗಿದ್ದಾರೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ಮೂಲದವರಾದ ಸಂತೇಬೆನ್ನೂರು ಲೋಕೇಶ್ ಅಕ್ಷಯ್ (39 ವರ್ಷ) ಅವರು ಬಲಗೈಮಧ್ಯಮ ವೇಗದ ಬೌಲರ್ ಆಗಿದ್ದರು.
ಕರ್ನಾಟಕ ರಣಜಿ ತಂಡವನ್ನು ಪ್ರತಿನಿಧಿಸಿದ್ದ ಇವರು 2011-12ರ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಕರ್ನಾಟಕ ಪ್ರೀಮಿಯರ್ಲೀಗ್ (KPL) ಟೂರ್ನಿಗಳಲ್ಲಿ ಮಲ್ನಾಡ್ ಗ್ಲಾಡಿಯೇಟರ್ಸ್, ಬಿಜಾಪುರ್ ಬುಲ್ಸ್, ಬಳ್ಳಾರಿ ಟಸ್ಕರ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ಮೃತರ ಕುಟುಂಬ ಹಾಗೂ ಬಂಧು ಬಳಗಕ್ಕೆ, ದುಃಖ ಭರಿಸುವ ಶಕ್ತಿ ನೀಡಲೆಂದು ಹಾಗೂ ಈ ಮೂಲಕ ಕ್ರಿಕೆಟ್ ಪ್ರೇಮಿಗಳು, ಆತ್ಮೀಯರು ಮತ್ತು ಕ್ರಿಕೆಟ್ ಮಂಡಲಿಯವರು ಅಕ್ಷಯ್ ಅವರ ಆತ್ಮಕ್ಕೆ ಶಾಂತಿ ಕೊರಿದ್ದಾರೆ.

