ಶಿವಮೊಗ್ಗ | ಆದಿಲ್ ಅಲಿಯಾಸ್ ರೈಯಿಸ್ ಗ್ಯಾಂಗ್ ಅರೆಸ್ಟ್..!

ಕ್ರೈಂ

ಶಿವಮೊಗ್ಗ ರೌಡಿ ಶೀಟರ್ ಆದಿಲ್ ಅಲಿಯಾಸ್ ರೈಯಿಸ್ ಬಂಧನ ಬೆನ್ನಲ್ಲೇ ಶಿವಮೊಗ್ಗ ಎಸ್ಪಿ ನಿಖಿಲ್ ಮಾರ್ಗದರ್ಶನದಲ್ಲಿ ದೊಡ್ಡಪೇಟೆ ಇನ್ಸ್ಪೆಕ್ಟರ್ ಸತ್ಯನಾರಾಯಣ ಹಾಗೂ ಕ್ರೈಂ ಪೊಲೀಸರ ಕಾರ್ಯಾಚರಣೆ ಮೆಚ್ಚುಗೆಗೆ ಪಾತ್ರವಾಗಿದೆ.

ಪಾತಕ ಲೋಕದ ನಟೋರಿಯಸ್ ಕ್ರಿಮಿನಲ್ ರೈಯಿಸ್ ಆಲಿಯಾಸ್ ಆದಿಲ್ ಸೇರಿ 6 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನು ಆದಿಲ್ ಹಾಗೂ ಆತನ ಸಹಚರ ಕೋಕಾ ಕೇಸ್ ನಲ್ಲಿ ಬಂಧಿತರಾಗಿದ್ದು. ಉಳಿದಂತೆ ನಾಲ್ಕು ಆರೋಪಿಗಳನ್ನ ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಬಂಧಿಸಲಾಗಿದೆ.

ಆದಿಲ್ ಬಂಧನಕ್ಕೆ ಕಾರಣ?

ಪ್ರಕರಣಗಳ ಸಂಬಂಧಪಟ್ಟಂತೆ ಧಮ್ಕಿ, ಜೀವ ಬೆದರಿಕೆ, ಹಾಗೂ ಲಕ್ಷ ಹಣ ಡ್ರಾ ಮಾಡಿಕೊಂಡು ಪರಾರಿಯಾದ ಪ್ರಕರಣ ಸಂಬಂಧ ಆರೋಪಿಗಳನ್ನ ಪೊಲೀಸರು ಜೈಲಿಗಟ್ಟಿದ್ದಾರೆ.

ರೈಯಿಸ್ ಮೇಲಿದೆ ಹಲವಾರು ಕೇಸ್ ಈ ಹಿಂದೆ ಲಷ್ಕರ್ ಮೊಹಲ್ಲ ಮೀನು ಮಾರ್ಕೆಟ್ ಬಳಿ ಲೋಕಸಭಾ ಚುನಾವಣೆಯ ಮತದಾನವಾದ ಮರುದಿನವೇ ನಟೋರಿಯಸ್ ರೌಡಿಶೀಟರ್ ಯಾಸಿನ್ ಖುರೇಶಿ ಹತ್ಯೆ ಮಾಡಲಾಗಿತ್ತು. ಖುರೇಶಿ ಹತ್ಯೆ ಮಾಡಲು ಬಂದಿದ್ದ ಆದಿಲ್ ನ ಇಬ್ಬರು ಸಹಚರರು ಕೂಡ ಹತ್ಯೆಯಾಗಿದ್ದರು .

ಈ ಹತ್ಯೆಯ ನಂತರ ಚಿಗುರಿಕೊಂಡಿದ್ದ ಆದಿಲ್ ಗ್ಯಾಂಗ್ ಜೈಲಿಗೆ ಹೋಗಿದ್ದೆ ಒಂದು ಡಾಕ್ಟರೇಟ್ ಸಿಕ್ಕಂತೆ ಎಂಬಂತಾಗಿ ಶಿವಮೊಗ್ಗ ನಗರದ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಮರಳು ದಂಧೆಯವರಿಗೆ ಈತನ ಗ್ಯಾಂಗ್ ನ ಬೆದರಿಕೆಗಳು ಶುರುವಾಗಿದ್ದವು.

ಇಷ್ಟಕ್ಕೂ ರೈಸ್ ಅಲಿಯಾಸ್ ಆದಿಲ್ ಬಂಧನಕ್ಕೆ ಕಾರಣವಾದ ಪ್ರಕರಣ ಏನೆಂದರೆ..!!

ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಆದಿಲ್ ಅಲಿಯಾಸ್ ರೈಯೀಸ್ ಹಾಗೂ ಆತನ ಸಹಚರರ ವಿರುದ್ಧ ದಬ್ಬಾಳಿಕೆ ಮತ್ತು ಹಣ ದೋಚಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ನಗರದ “ಮೊಬೈಲ್ ನ್ಯೂ ಮಂಡಳಿ” ಅಂಗಡಿ ಮಾಲೀಕ ಇಮ್ರಾನ್ ಖಾನ್ ಅವರ ಅಂಗಡಿಗೆ ಆರೋಪಿಗಳು ನೇರವಾಗಿ ನುಗ್ಗಿ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ.

ಬಳಿಕ ಗ್ಯಾಂಗ್‌ಸ್ಟರ್ ಶೈಲಿಯಲ್ಲಿ ಬೆದರಿಕೆ ಹಾಕಿ, ಅವರನ್ನು ಶಿವಮೊಗ್ಗ ಹೊರವಲಯದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕರೆದೊಯ್ದಿದ್ದಾರೆ ಅಲ್ಲದೆ, ಇಮ್ರಾನ್ ಖಾನ್ ಅವರ ಎಟಿಎಂ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು ಫೋನ್‌ಪೇ ಮುಖಾಂತರ ಸುಮಾರು ₹1 ಲಕ್ಷ ಹಣ ಡ್ರಾ ಮಾಡಿಕೊಂಡು ಆರೋಪಿಗಳು ಪರಾರಿಯಾಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ವೇಳೆ ಜೀವ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಹೇಳಲಾಗಿದೆ.ಪ್ರಕರಣ ದಾಖಲಾದ ತಕ್ಷಣವೇ ದೊಡ್ಡಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ರೌಡಿಶೀಟರ್ ಆದಿಲ್ ಅಲಿಯಾಸ್ ರೈಯೀಸ್ ಮತ್ತು ಆತನ ಸಹಚರನನ್ನು ಬಂಧಿಸಿದ್ದಾರೆ.

ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ಈ ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ…

ಕೊಲೆ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಗಲ್ಲು ಶಿಕ್ಷೆ ಗ್ಯಾರಂಟಿಯೇ..!!?

ಶಿವಮೊಗ್ಗದಲ್ಲಿ ವಿಪರೀತ ಹವಾ ಮೇಂಟೈನ್ ಮಾಡಲು ರೌಡಿಶೀಟರ್ ಗಳು ಜೈಲ್ ನಿಂದಲೇ ಮೊಬೈಲ್ ಬಳಸಿ ಧಮ್ಕಿ ಹಾಕುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇಂಥ ನಟೋರಿಯಸ್ ಕ್ರಿಮಿನಲ್ ಗಳಿಗೆ ಜೈಲಿನಲ್ಲಿ ಮೊಬೈಲ್ ಸೇರಿದಂತೆ ಮಾದಕ ವಸ್ತುಗಳು ಸಿಗದೇ ಇರುವಂತೆ ಕಠಿಣ ಕ್ರಮ ಮಾಡಬೇಕಾಗಿರುವುದು ಜೈಲ್ ಅಧೀಕ್ಷಕರು ಹಾಗೂ ಸಿಬ್ಬಂದಿಗಳ ಕರ್ತವ್ಯವಾಗಿದೆ.

ಹಾಗೂ ರೈಯಿಸ್ ಅಂತವರನ್ನು ಶಿವಮೊಗ್ಗದ ಜೈಲ್ ಗಿಂತ ಬೇರೆ ಜಿಲ್ಲೆಯ ಜೈಲ್ ಗೆ ರವಾನಿಸುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ ಹಾಗೂ BNS ಕಾಯ್ದೆಯ ಮೂಲಕ ಕಠಿಣ ಶಿಕ್ಷೆಗೆ ಒಳಪಡಿಸಬೇಕಾದ ಜರೂರತ್ತಿದೆ.

ಮತ್ತೊಮ್ಮೆ ಕೊಲೆ, ಸುಲಿಗೆ ಮೊದಲಾದಅಪರಾಧಿ ಕೃತ್ಯಗಳಲ್ಲಿ ಭಾಗಿಯಾದ ರೌಡಿಶೀಟರ್ ಗಳಿಗೆ ಗಲ್ಲು ಶಿಕ್ಷೆಯಂತಹ ಶಿಕ್ಷೆ ಸಿಗುವಂತೆ ಜಿಲ್ಲಾ ಪೊಲೀಸರು ಕೂಡ ಕಠಿಣ ಕ್ರಮ ಜರುಗಿಸಬೇಕಾಗಿದೆ ಎಂಬ ಕೂಗು ಸಮಾಜದ ಪ್ರಜ್ಞಾವಂತ ವಲಯದಲ್ಲಿ ಕೇಳಿಬರುತ್ತಿದೆ.

Author