182 ಕೋಟಿ ಮೌಲ್ಯದ ‘ಜಿಹಾದಿ ಡ್ರಗ್’ ಕ್ಯಾಪ್ಟಗನ್ ವಶಕ್ಕೆ : ಅಮಿತ್ ಶಾ ಎಕ್ಸ್​​ನಲ್ಲಿ ಮಾಹಿತಿ

ದೇಶ

ಭಾರತದಲ್ಲಿ ಮೊದಲ ಬಾರಿಗೆ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) 182 ಕೋಟಿ ಮೌಲ್ಯದ ಕ್ಯಾಪ್ಟಗನ್ ಟ್ಯಾಬ್ಲೆಟ್​​ಗಳನ್ನು ವಶಪಡಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಡ್ರಗ್ಸ್ ಅನ್ನು ಪಶ್ಚಿಮ ಏಷ್ಯಾಕ್ಕೆ ಸಾಗಿಸುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ಆಪರೇಷನ್ ರೇಜ್​ಪಿಲ್ ಅಡಿಯಲ್ಲಿ ಈ ಡ್ರಗ್ಸ್​ ಸಾಗಾಟವನ್ನು ತಡೆಹಿಡಿಯಲಾಗಿದೆ ಎಂದು ಅಮಿತ್ ಶಾ ಎಕ್ಸ್​​ನಲ್ಲಿ ಮಾಹಿತಿ ನೀಡಿದ್ದಾರೆ.

ಈ ಡ್ರಗ್ಸ್ ಅನ್ನು ಪಶ್ಚಿಮ ಏಷ್ಯಾಕ್ಕೆ ಸಾಗಿಸುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ಆಪರೇಷನ್ ರೇಜ್​ಪಿಲ್ (Operation Ragepill) ಅಡಿಯಲ್ಲಿ ಈ ಡ್ರಗ್ಸ್​ ಸಾಗಾಟವನ್ನು ತಡೆಹಿಡಿಯಲಾಗಿದೆ ಎಂದು ಅಮಿತ್ ಶಾ ಎಕ್ಸ್​​ನಲ್ಲಿ ಮಾಹಿತಿ ನೀಡಿದ್ದಾರೆ.

ಮುಂದ್ರಾ ಬಂದರು ಮತ್ತು ದೆಹಲಿಯ ನೆಬ್ ಸರಾಯ್‌ನಿಂದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಸಿರಿಯನ್ ಪ್ರಜೆ ಆ ಡ್ರಗ್ಸ್ ಅನ್ನು ಚಹಾ ಎಲೆಗಳ ಪೆಟ್ಟಿಗೆಯಲ್ಲಿ ಮರೆಮಾಡಿದ್ದರು.

ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, “ಮೋದಿ ಸರ್ಕಾರ ‘ಮಾದಕವಸ್ತು ಮುಕ್ತ ಭಾರತ’ಕ್ಕೆ ಸಂಕಲ್ಪ ಮಾಡಿದೆ.

‘ಆಪರೇಷನ್ ರೇಜ್‌ಪಿಲ್’ ಮೂಲಕ ನಮ್ಮ ಏಜೆನ್ಸಿಗಳು 182 ಕೋಟಿ ರೂ. ಮೌಲ್ಯದ “ಜಿಹಾದಿ ಡ್ರಗ್” ಎಂದು ಕರೆಯಲ್ಪಡುವ ಕ್ಯಾಪ್ಟಗನ್ ಅನ್ನು ಮೊದಲ ಬಾರಿಗೆ ವಶಪಡಿಸಿಕೊಂಡಿವೆ ಎಂಬ ವಿಷಯವನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಮಧ್ಯಪ್ರಾಚ್ಯಕ್ಕೆ ಸಾಗಿಸುತ್ತಿದ್ದ ಈ ಡ್ರಗ್ಸ್​ ಜಾಲವನ್ನು ಭೇದಿಸುವುದು ಮತ್ತು ವಿದೇಶಿ ಪ್ರಜೆಯ ಬಂಧನವು ಮಾದಕವಸ್ತುಗಳ ವಿರುದ್ಧದ ಭಾರತದ ಶೂನ್ಯ ಸಹಿಷ್ಣುತೆಗೆ ನಮ್ಮ ಬದ್ಧತೆಗೆ ಉದಾಹರಣೆಗಳಾಗಿವೆ.

ಭಾರತಕ್ಕೆ ಪ್ರವೇಶಿಸುವ ಅಥವಾ ನಮ್ಮ ಪ್ರದೇಶವನ್ನು ಸಾರಿಗೆ ಮಾರ್ಗವಾಗಿ ಬಳಸಿಕೊಂಡು ಸಾಗಾಟವಾಗುವ ಪ್ರತಿ ಗ್ರಾಂ ಮಾದಕವಸ್ತುಗಳನ್ನು ನಾವು ತಡೆಯುತ್ತೇವೆ. ಎನ್‌ಸಿಬಿಯ ಧೈರ್ಯಕ್ಕೆ ನಮ್ಮ ಧನ್ಯವಾದಗಳು.” ಎಂದು ಹೇಳಿದ್ದಾರೆ.

Author