ಕೆನರಾ ಬ್ಯಾಂಕಿನ ಸರಳ ಸಜ್ಜನಿ ನಿವೃತ್ತ ಮ್ಯಾನೇಜರ್ ಉಮೇಶ್ ಮಲ್ಯ ಇನ್ನಿಲ್ಲ

ದೇಶ

ಬೆಂಗಳೂರು, ಉಮೇಶ್ ಮಲ್ಯ(78) ಅವರು ನಿನ್ನೆ ದಿವಸ ವಾಕಿಂಗ್ ತೆರುಳುವಾಗ ಏಕಏಕಿ ಹೃದಯ ಸ್ಥಂಬನದಿಂದ ಸ್ಥಳದಲ್ಲೇ ಕುಸಿದುಬಿದ್ದು ಅಸುನಿಗಿದ್ದಾರೆ.ಉಮೇಶ್ ಮಲ್ಯ ಅವರು ಪತ್ನಿ ಹಾಗೂ ಪುತ್ರ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು ಹಾಗೂ ಸಹೋದರರನ್ನ ಅಗಲಿದ್ದಾರೆ.

ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ವೃತ್ತಿಜೀವನ ಆರಂಭಿಸಿದ್ದ ಉಮೇಶ್ ಮಲ್ಯರವರುಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಾರಂಭವಾದ ಸಹ್ಯಾದ್ರಿ ಗ್ರಾಮೀಣ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.ನಂತರ ಮುಂಬೈ ಮತ್ತು ಬೆಂಗಳೂರಿನ West Card ಬ್ರಾಂಚ್ ನಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಸರಳ ಸಜ್ಜನಿಕೆಯ ಪ್ರತಿರೂಪ ಉಮೇಶ್ ಮಲ್ಯ:

ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಸದಾ ಜನಾನುರಾಗಿಯಾಗಿ ಬಡ ಬಗ್ಗರ ಕಷ್ಟಕ್ಕೆ ಸ್ಪಂದಿಸಿ ನಿರ್ಗತಿಕರಿಗೆ ಬ್ಯಾಂಕ್ ಸೌಲಭ್ಯ ಒದಗಿಸುವಲ್ಲಿ ಸಾಕಷ್ಟು ಜನಕ್ಕೆ ಸಹಾಯ ಮಾಡಿದ್ದರು.ಹಲವಾರು ರಾಜಕಾರಣಿಗಳು ಸಹ ಇವರಿಗೆ ಆತ್ಮೀರಾಗಿದ್ದರು ಆದರೂ ಸಹ ಯಾರ ಬಳಿ ಕೂಡ ಸಹಾಯ ಮತ್ತೊಂದು ಅಪೇಕ್ಷೆ ಮಾಡಿರಲಿಲ್ಲ. ಹಾಗೂ ಇವರು ನಿವೃತ್ತರಾದ ನಂತರದ ದಿನಗಳಲ್ಲಿ ಸಹ ಹಲವಾರು ಜನರಿಗೆ ಬ್ಯಾಂಕಿನ ಸೌಲಭ್ಯಗಳ ಕುರಿತು ಮಾಹಿತಿ ನೀಡುತ್ತಿದ್ದರು. ಹಾಗೆ ಇವರಿಗೆ ಜನಸಾಮಾನ್ಯರು ಸಹ ತುಂಬಾ ಗೌರವ ಪ್ರೀತಿ ಪಾತ್ರದಿಂದ ನೆನಪಿಸಿಕೊಳ್ಳುತ್ತಿದ್ದರು.

ಮುಖ್ಯವಾಗಿ ಒಂದೆರಡು ವಿಚಾರ ನಿಮ್ಮ ಮುಂದೆ ತಿಳಿಸಲೇ ಬೇಕು ಅದೇನಂದರೆ ಕೆಲವು ದಿನಗಳ ಹಿಂದೆ ಒಮ್ಮೆ ಆಟೋದಲ್ಲಿ ಬರುವಾಗ ಆಟೋ ಚಾಲಕ ಉಮೇಶ್ ಮಲ್ಯ ಅವರನ್ನು ಗುರುತಿಸಿ ಸರ್ ಅಂದು ನೀವು ಲೋನ್ ಕೊಡಿಸದಿದ್ದರೆ ನಾನು ಇವತ್ತು ಆಟೋ ಕೊಂಡುಕೊಂಡು ಬದುಕು ಕಟ್ಟಿಕೊಳ್ಳಲು ಆಗುತ್ತಿರಲಿಲ್ಲ ನಿಮ್ಮಿಂದ ಅನ್ನ ತಿನ್ನುತ್ತಿದ್ದೇನೆ ಹಾಗಾಗಿ ನಿಮ್ಮಿಂದ ನಾನು ಆಟೋ ಬಾಡಿಗೆ ಸ್ವೀಕರಿಸಲ್ಲ ಎಂದು ಹೇಳಿ ಧನ್ಯವಾದ ತಿಳಿಸಿ ತೆರಳಿದ್ದರು.

ಇನ್ನು ಉಮೇಶ್ ಮಲ್ಯರವರ ವ್ಯಕ್ತಿತ್ವ ಎಂತದು ಎಂದರೆ ಶಿವಮೊಗ್ಗದಲ್ಲಿ ಬದುಕು ಕಟ್ಟಿಕೊಳ್ಳಲು ಬಂದ ಮಾಧ್ಯಮ ಪ್ರತಿನಿಧಿ ಯುವಕನೊಬ್ಬನಿಗೆ ಮನೆ ಕಟ್ಟಲು ಮುಂದೆ ಕಷ್ಟವಾಗಲಿದೆ ಎಂದು ಬುದ್ದಿ ವಾದ ಹೇಳಿ ಲೋನ್ ಕೊಡಿಸಿ ಮನೆ ಕಟ್ಟಿಸಿಕೊಳ್ಳಲು ನೆರವಾಗಿದ್ದರು.

ಇಂತಹ ಅನೇಕ ಘಟನೆಗಳನ್ನು ನೆನಪಿಸಿಕೊಳ್ಳುವಂತೆ ನೂರಾರು ಸಂಖ್ಯೆಯಲ್ಲಿ ಉಮೇಶ್ ಮಲ್ಯ ಅವರಿಂದ ಸಹಕಾರ ನೆರವು ಪಡೆದವರು ವ್ಯಕ್ತಿತ್ವದ ಅನಾವರಣ ಗೊಳಿಸಿದ್ದಾರೆ. ಇನ್ನು ಉಮೇಶ್ ಮಲ್ಯ ಅವರ ಮನೆ ಶಿವಮೊಗ್ಗದ ಬಸವನಗುಡಿಯಲ್ಲಿದೆ ಹಾಗೂ ಅವಿಭಕ್ತ ಕುಟುಂಬ ಕೂಡ ಹೌದು ಹಾಗಾಗಿ ಪ್ರತಿವರ್ಷ ಗೌರಿ ಗಣೇಶ ಹಬ್ಬಕ್ಕೆ ಕೂಡು ಕುಟುಂಬ ಸಹಿತ ಎಲ್ಲರೂ ಒಟ್ಟಾಗಿ ಗೌರಿ ಗಣೇಶ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಿದ್ದದ್ದು ವಿಶೇಷವಾಗಿತ್ತು.

ಉಮೇಶ್ ಮಲ್ಯ ಅವರ ನಿಧನದಿಂದ ಈಗ ಎಲ್ಲವು ನೀರವ ಮೌನದಿಂದ ಕೂಡಿದೆ. ಸದಾ ಹಸನ್ಮುಖಿಯಾಗಿ ಎಲ್ಲರನ್ನು ಪ್ರೀತಿಯಿಂದ ಗೌರವದಿಂದ ಕಾಣುತ್ತಿದ್ದರು. ಅವರ ಸುತ್ತಮುತ್ತಲಿನ ಸ್ನೇಹಿತರು ಪರಿಚಯಸ್ಥರು ಅವರು ಕೋಪ ಮಾಡಿಕೊಂಡಿದ್ದನ್ನು ನೋಡಿದ್ದೇ ಇಲ್ಲ. ಯಾರು ಏನೇ ಸಮಸ್ಯೆಯನ್ನು ತೆಗೆದುಕೊಂಡು ಹೋದರು. ಯಾವುದಾದರೂ ಒಂದು ರೀತಿಯಲ್ಲಿ ಮಾರ್ಗದರ್ಶನ ಮಾಡಿ ಆರ್ಥಿಕವಾಗಿ ಸದೃಢರಾಗುವಂತೆ ಬೆನ್ನು ತಟ್ಟುತ್ತಿದ್ದರು.

ಇದಿಷ್ಟು ಅಲ್ಲದೆ ಎದುರಿಗೆ ಸಿಕ್ಕಾಗಲ್ಲ ಏನ್ ಮಾಡ್ತಿದ್ದೀರಾ ನಿಮ್ಮ ಕೆಲಸ ಚೆನ್ನಾಗಿ ನಡಿತಿದಿಯೆದೆಯಲ್ಲ ಪ್ರೀತಿಯಿಂದ ಮಾತನಾಡಿಸಿ ಬರುತ್ತೇನೆ ಎಂದು ಹೇಳಿ ಹೋಗುತ್ತಿದ್ದರು. ಇಂತಹ ಅಪರೂಪದ ವ್ಯಕ್ತಿತ್ವದ ಜನಾನುರಾಗಿ ಉಮೇಶ್ ಮಲ್ಯ ಅವರ ನಿಧನಕ್ಕೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.

Author