Tag: ಬಂಧನ
ಶಿವಮೊಗ್ಗ | ಆದಿಲ್ ಅಲಿಯಾಸ್ ರೈಯಿಸ್ ಗ್ಯಾಂಗ್ ಅರೆಸ್ಟ್..!
ಪ್ರಕರಣಗಳ ಸಂಬಂಧಪಟ್ಟಂತೆ ಧಮ್ಕಿ, ಜೀವ ಬೆದರಿಕೆ, ಹಾಗೂ ಲಕ್ಷ ಹಣ ಡ್ರಾ ಮಾಡಿಕೊಂಡು ಪರಾರಿಯಾದ ಪ್ರಕರಣ ಸಂಬಂಧ ಆರೋಪಿಗಳನ್ನ ಪೊಲೀಸರು ಜೈಲಿಗಟ್ಟಿದ್ದಾರೆ. ರೈಯಿಸ್ ಮೇಲಿದೆ ಹಲವಾರು ಕೇಸ್ ಈ ಹಿಂದೆ ಲಷ್ಕರ್ ಮೊಹಲ್ಲ ಮೀನು ಮಾರ್ಕೆಟ್ ಬಳಿ ಲೋಕಸಭಾ ಚುನಾವಣೆಯ ಮತದಾನವಾದ ಮರುದಿನವೇ ನಟೋರಿಯಸ್ ರೌಡಿಶೀಟರ್ ಯಾಸಿನ್ ಖುರೇಶಿ ಹತ್ಯೆ ಮಾಡಲಾಗಿತ್ತು. ಖುರೇಶಿ ಹತ್ಯೆ ಮಾಡಲು ಬಂದಿದ್ದ ಆದಿಲ್ ನ ಇಬ್ಬರು ಸಹಚರರು ಕೂಡ ಹತ್ಯೆಯಾಗಿದ್ದರು . ಈ ಹತ್ಯೆಯ ನಂತರ ಚಿಗುರಿಕೊಂಡಿದ್ದ ಆದಿಲ್ ಗ್ಯಾಂಗ್ ಜೈಲಿಗೆ […]
Continue Readingಶಿವಮೊಗ್ಗ | ರೌಡಿಶೀಟರ್ ರಯೀಸ್ ಬಂಧನ
ಘಟನೆ ವೇಳೆ ಜೀವ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಹೇಳಲಾಗಿದೆ.ಪ್ರಕರಣ ದಾಖಲಾದ ತಕ್ಷಣವೇ ದೊಡ್ಡಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ರೌಡಿಶೀಟರ್ ಆದಿಲ್ ಅಲಿಯಾಸ್ ರಯೀಸ್ ಮತ್ತು ಆತನ ಮತ್ತೊಬ್ಬ ಸಹಚರನನ್ನು ಬಂಧಿಸಿದ್ದಾರೆ. ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ಈ ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
Continue Readingಶಿವಮೊಗ್ಗ | ಶಿಕಾರಿಗೆ ಬಳಸುತ್ತಿದ್ದ 45 ನಾಡ ಬಾಂಬ್ ವಶಕ್ಕೆ ; ಓರ್ವ ಸೆರೆ, ಇಬ್ಬರು ಪರಾರಿ
ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ, ಭಾಸ್ಕರ್ ಹಾಗೂ ನಾಗರಾಜ್ ಪರಾರಿಯಾಗಿದ್ದು, ಡಾಕಪ್ಪನನ್ನು ಬಂಧಿಸಲಾಗಿದೆ. ಈ ವೇಳೆ 45 ನಾಡ ಬಾಂಬ್ಗಳ ಜೊತೆಗೆ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಾಕಪ್ಪನನ್ನು ಹೊಸನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಪರಾರಿಯಾಗಿರುವ ಇಬ್ಬರು ಆರೋಪಿಗಳಾದ ಭಾಸ್ಕರ್ ಹಾಗೂ ನಾಗರಾಜ್ ಹುಡುಕಾಟಕ್ಕೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ಹೊಸನಗರ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್., ಉಪ ವಲಯ ಅರಣ್ಯಾಧಿಕಾರಿಗಳಾದ ಅನಿಲ್ ಬೆಳ್ಳೆನವರ್, ಭರತ್ ಕುಮಾರ್, ಗಸ್ತು ಅರಣ್ಯ ಪಾಲಕ ಮಂಜುನಾಥ […]
Continue Readingಹಾಸನ | ಪ್ರೀ ವೆಡ್ಡಿಂಗ್ ಫೋಟೊಶೂಟ್ ತಂಡದ ಮೇಲೆ ಹಲ್ಲೆ ; ಆರೋಪಿಗಳ ಬಂಧನ
ಹಲ್ಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಫೋಟೊಗ್ರಾಫರ್ಸ್ ಕುಟುಂಬದ ಸದಸ್ಯರು ಠಾಣೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಹಾಗೂ ದೂರುದಾರರ ನಡುವೆ ವಾದ-ವಿವಾದ ನಡೆಯಿತು. ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ತುರ್ತು ಕ್ರಮ ಜರುಗಿಸಬೇಕು ಎಂದು ಫೋಟೋಗ್ರಾಫರ್ ಕುಟುಂಬದವರು ಆಗ್ರಹಿಸಿದರೆ, ಇದನ್ನು ಖಂಡಿಸಿದ 15ಕ್ಕೂ ಹೆಚ್ಚು ಗ್ರಾಮಸ್ಥರು, ‘ವಿಡಿಯೋದಲ್ಲಿ ಇರುವುದೆಲ್ಲ ನಿಜವಲ್ಲ.ಫೋಟೋಗ್ರಾಫರ್ ಸ್ಥಳೀಯರೊಡನೆ ಅಸಭ್ಯವಾಗಿ ವರ್ತಿಸಿದರು’’ ಎಂದು ಪ್ರತ್ಯಾರೋಪ ಮಾಡಿದರು.
Continue Readingಶಿವಮೊಗ್ಗ | ಇನ್ಸ್ಪೆಕ್ಟರ್ ನಾರಾಯಣ ಮಧುಗಿರಿ ನೇತೃತ್ವದಲ್ಲಿ ದಾಳಿ ; ಗಾಂಜಾ ಮಾರಾಟ ಮಾಡುತ್ತಿದ್ದವನ ಬಂಧನ
ಈತ ವೃತ್ತಿಯಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆದರೆ, ಎರಡನೇ ಆರೋಪಿ ವಸೀಂ ಅಕ್ರಂ ಅಲಿಯಾಸ್ ಸೈಲೆಂಟ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. ಬಂಧಿತ ಆರೋಪಿ ಅಜರ್ನ ಮೇಲೆ ಈ ಹಿಂದೆ ದೊಡ್ಡಪೇಟೆ ಮತ್ತು ತುಂಗಾನಗರ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ (Section 307), ದರೋಡೆ ಸಂಚು, ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಎನ್‌ಡಿಪಿಎಸ್ ಕಾಯ್ದೆಯಡಿ ಒಟ್ಟು 6 ಪ್ರಕರಣಗಳು ದಾಖಲಾಗಿವೆ.
Continue Readingನಗರ ಪೊಲೀಸರಿಂದ ಅಂತರ್ ಜಿಲ್ಲಾ ಕಳ್ಳರ ಬಂಧನ
ಬಂಧಿತರಿಂದ ಒಟ್ಟು 3.87 ಲಕ್ಷ ರೂ. ಮೌಲ್ಯದ 30 ಗ್ರಾಂ ತೂಕದ ಚಿನ್ನದ ನೆಕ್ಲಸ್, 93 ಸಾವಿರ ರೂ. ಮೌಲ್ಯದ 6 ಗ್ರಾಂ ಬ್ರೇಸ್‌ಲೆಟ್, 50 ಗ್ರಾಂ ಬೆಳ್ಳಿ ಪದಾರ್ಥಗಳು, ಮೊಬೈಲ್ ಫೋನ್ ಹಾಗೂ ಕಳ್ಳತನಕ್ಕೆ ಬಳಸಿದ್ದ ಇಟಿಯೋಸ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Continue Readingಶಿವಮೊಗ್ಗ | ವಿಶೇಷ ಭೂಸ್ವಾಧಿನಾಧಿಕಾರಿ ಸಿದ್ದಲಿಂಗಾರೆಡ್ಡಿ ಹಾಗೂ ಗ್ರಾಮ ಸಹಾಯಕ ಲೋಕಾಯುಕ್ತ ಬಲೆಗೆ
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಚಂದ್ರಶೇಖರ್.ಬಿ.ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸ್ ನಿರೀಕ್ಷಕರಾದ ಕೆ.ಪಿ.ರುದ್ರೇಶ್, ಗುರುರಾಜ್ ಮೈಲಾರ್, ವೀರಬಸಪ್ಪ ಎಲ್ ಕುಸಲಾಪುರ ಮತ್ತು ಸಿಬ್ಬಂದಿ ಯೋಗೇಶ್.ಜಿ.ಸಿ, ಟೀಕಪ್ಪ, ಸುರೇಂದ್ರ.ಹೆಚ್.ಸಿ, ಬಿ.ಟಿ.ಚನ್ನೇಶ್, ದೇವರಾಜ್, ಅರುಣ್ ಕುಮಾರ್.ಯು.ಬಿ, ಪ್ರಕಾಶ್ ಬಾರಿಮರದ್, ಆದರ್ಶ್, ಚಂದ್ರಿಬಾಯಿ, ಪ್ರದೀಪ್, ಗೋಪಿ, ಚೇತನ್ ಮತ್ತು ಆನಂದ್ ಪಾಲ್ಗೊಂಡಿದ್ದರು.
Continue Reading3.5 ಕೋಟಿ ರೂ. ಮೌಲ್ಯದ ಗ್ರಾಹಕರ ಚಿನ್ನವನ್ನು ಅಡಮಾನ ಇಟ್ಟಿದ್ದ ಬ್ಯಾಂಕ್ ಅಧಿಕಾರಿ ಬಂಧನ
ತನಿಖೆಯ ಸಮಯದಲ್ಲಿ ಆರೋಪಿಗಳು ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಹಣವನ್ನು ಖರ್ಚು ಮಾಡಿದ್ದಾರೆ ಎಂಬುದು ಪತ್ತೆಯಾಗಿದೆ. ಪ್ರಕರಣ ಸಂಬಂಧ ಆರೋಪಿ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಅನ್ನು ಬಂಧಿಸಲಾಗಿದೆ. ನಾವು ಚಿನ್ನವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇಲ್ಲಿಯವರೆಗೆ ಸುಮಾರು 700 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಲೋಕೇಶ್ ಬಿ ಜಗಲಾಸರ್ ಹೇಳಿದರು. ಇದೇ ವೇಳೆ, ಗ್ರಾಹಕರಿಗೆ ಬ್ಯಾಂಕ್ ಲಾಕರ್‌ಗಳಲ್ಲಿ ಇರಿಸಲಾಗಿರುವ ತಮ್ಮ ಆಭರಣಗಳ ಸುರಕ್ಷತೆ ಮತ್ತು ಸ್ಥಿತಿಯನ್ನು ಪರಿಶೀಲಿಸುವಂತೆ ಪೊಲೀಸರು ಸಲಹೆ ನೀಡಿದರು.
Continue Readingಶಿವಮೊಗ್ಗ | ಅಂತರರಾಜ್ಯ ದರೋಡೆಕೋರರನ್ನು ಬಂಧಿಸಿದ ವಿನೋಬನಗರ ಠಾಣೆ ಪೊಲೀಸರು
ಅರಸು ಅಲಿಯಾಸ್ ವಲ್ಲರಸು ಆರ್ (25): ತಿರುವಣ್ಣಾಮಲೈ ಜಿಲ್ಲೆ, ತಮಿಳುನಾಡು. ಕಾಲು ಅಲಿಯಾಸ್ ಇಬ್ರಾಹಿಂ ಪಾಶಾ (40): ಜೆ.ಜೆ.ಆರ್ ನಗರ, ಬೆಂಗಳೂರು. ಕೇಶವನ್ (43): ಸೇಲಂ ಜಿಲ್ಲೆ, ತಮಿಳುನಾಡು. ಸತೀಶ್ ಕುಮಾರ್ (40): ಹೊಸೂರು ಮೂಲದವರು, ಹಾಲಿ ವಾಸ ಅತ್ತಿಬೆಲೆ, ಬೆಂಗಳೂರು. ದಿನಾಂಕ 18/11/2025 ರಂದು ಮಧ್ಯಾಹ್ನ ವಿನೋಬನಗರದ 60 ಅಡಿ ರಸ್ತೆಯ 16ನೇ ಕ್ರಾಸ್‌ನಲ್ಲಿ ಶ್ರೀಮತಿ ಹೊನ್ನಮ್ಮ ಎಂಬುವವರು ನಡೆದುಕೊಂಡು ಹೋಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ಅವರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದರು.ಈ ಬಗ್ಗೆ ವಿನೋಬನಗರ […]
Continue Reading
