ಶಿವಮೊಗ್ಗ | SSLC ಪರೀಕ್ಷೆ ಫಲಿತಾಂಶ ; ರಾಜ್ಯಕ್ಕೆ 5ನೆ ರ್ಯಾಂಕ್ ಪಡೆದ ವಿಕಾಸ ಶಾಲೆಯ ಚಿತ್ಸುಖಿ.ಆರ್.ನಾಡಿಗ್

ಶಿವಮೊಗ್ಗ

ಶಿವಮೊಗ್ಗ ನಗರದ ವಿಕಾಸ ವಿದ್ಯಾ ಸಮಿತಿ ಶಾಲೆಯ ವಿದ್ಯಾರ್ಥಿಯಾದ ಚಿತ್ಸುಖಿ ಆರ್ ನಾಡಿಗ್ ಅವರು ಈ ಬಾರಿಯ SSLC ಪರೀಕ್ಷೆಯಲ್ಲಿ 621 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 5 ನೆ ರ್ಯಾಂಕ್ ಪಡೆಯುವ ಮೂಲಕ ಕೀರ್ತಿ ತಂದಿದ್ದಾರೆ.

ಚಿತ್ಸುಖಿ ಅವರ ತಂದೆ ರಾಜೀವ್ ಪಿ ನಾಡಿಗ್ IT Consultant ಉದ್ಯೋಗಿಯಾಗಿದ್ದಾರೆ ಹಾಗೂ ತಾಯಿ ಅಂಜಲಿ ನಾಡಿಗ್ ಅವರು ಸಂಗೀತ ಶಿಕ್ಷಕರಾಗಿದ್ದಾರೆ.

ವಿಷಯವಾರು ಅಂಕ :

ಸಂಸ್ಕೃತ – 125, ಇಂಗ್ಲಿಷ್ -100

ಕನ್ನಡ -100, ಗಣಿತ -99

ವಿಜ್ಞಾನ -97, ಸೋಶಿಯಲ್ -100

Total-621

SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 5 ನೆ ರ್ಯಾಂಕ್ ಪಡೆದು ಕೀರ್ತಿ ತಂದಿರುವ ಚಿತ್ಸುಖಿ ಆರ್ ನಾಡಿಗ್ ಅವರಿಗೆ ಕುಟುಂಬಸ್ಥರು, ಶಾಲಾ ಆಡಳಿತ ಮಂಡಲಿ, ಬಂಧುಬಳಗ, ಆತ್ಮೀಯರು, ಪ್ರೀತಿ ಪಾತ್ರರು ಶುಭ ಹಾರೈಸಿ ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭಕೊರಿದ್ದಾರೆ.ಮುಂದೆಯೂ ಸಹ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.

ನಮ್ಮ ಇ-ಕನ್ನಡ ಸುದ್ದಿ ಮಾಧ್ಯಮ ವತಿಯಿಂದ ಸಹ ಚಿತ್ಸುಖಿ. ಆರ್. ನಾಡಿಗ್ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದೇವೆ.

Author