ತೀರ್ಥಹಳ್ಳಿ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ಐಪಿಎಸ್ ಅಧಿಕಾರಿ ಭಾನುಪ್ರಕಾಶ್ ಜೆ. ಅವರನ್ನು ಸರ್ಕಾರ ನೇಮಕ ಮಾಡಿದೆ.ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತೀರ್ಥಹಳ್ಳಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಕೆಲಕಾಲದಿಂದ ಖಾಲಿ ಇದ್ದ ಡಿವೈಎಸ್ಪಿ ಹುದ್ದೆಗೆ ಹೊಸ ಅಧಿಕಾರಿಯ ನೇಮಕವಾದಂತಾಗಿದೆ.
ಇವರು ಬೆಳಗಾವಿಯಲ್ಲಿ ಪೊಲೀಸ್ ಟ್ರೇನಿಂಗ ಸ್ಕೂಲ್ ನಲ್ಲಿ 8 ತಿಂಗಳು ಕೆಲಸ ಮಾಡಿ ಈಗ ಇಲ್ಲಿಗೆ ವರ್ಗಾವನೆಗೊಂಡಿದ್ದಾರೆ. ಭಾನುಪ್ರಕಾಶ್ ಜೆ. ಅವರು 2023-24ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಮೂಲತಃ ಮೈಸೂರು ಗ್ರಾಮಾಂತರದವರು.ಕೃಷಿ ಕುಟುಂಬದದಿಂದ ಬಂದವರು. ಇವರ ತಾಯಿ ಅಂಗನವಾಡಿ ಕಾರ್ಯಕರ್ತೆ.
ಎಂಬಿಬಿಸ್ ಎಂಡಿ ಮುಗಿಸಿ ಮಕ್ಕಳ ತಜ್ಞರಾಗಿ ಎರಡು ವರ್ಷ ಬೆಂಗಳೂರು ನಲ್ಲಿ ಕೆಲಸ ಮಾದಿದ್ದಾರೆ. ನಂತರ ಯುಪಿ ಎಸ್ ಸಿ ಬರೆದವರು. ಈ ಹಿಂದೆ ತೀರ್ಥಹಳ್ಳಿ ಡಿವೈಎಸ್ಪಿಯಾಗಿದ್ದ ಅರವಿಂದ ಕಲಗುಜ್ಜಿ ಒಂದು ತಿಂಗಳ ಹಿಂದೆ ನಿವೃತ್ತರಾದ ಬಳಿಕ ಹುದ್ದೆ ಖಾಲಿಯಾಗಿತ್ತು. ಇದೀಗ ಯುವ ಐಪಿಎಸ್ ಅಧಿಕಾರಿಯ ನೇಮಕವಾಗಿದೆ.





