ಶಿವಮೊಗ್ಗ ನಗರದ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ಸಾರ್ವಜನಿಕರು, ಮಹಿಳೆಯರು, ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಸುದ್ದಿ ಮಾಡಿದ ಕಾರಣಕ್ಕೆ, ನಮ್ಮ ಮಾಧ್ಯಮದ ಮೇಲೆ ಅಂದರೆ ಇ-ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮದ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಲೀಗಲ್ ನೋಟೀಸ್ ಕಳಿಸಿದ್ದಾರೆ.
ವಿಚಾರವೇನಂದರೆ ರಸ್ತೆಯಲ್ಲಿ, ಫುಟ್ ಪಾತ್ ಎಲ್ಲೆಂದರಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಈ ರೀತಿಯಾಗಿ ರಸ್ತೆಯಲ್ಲಿ ಫುಟ್ ಪಾತ್, ಎಲ್ಲೆಂದರಲ್ಲಿ ಮದ್ಯಪಾನ ಮಾಡಿ ಅವರವರೇ ಬಡಿದಾಡಿಕೊಂಡು ಹಾಗೂ ಸಾರ್ವಜನಿಕರಿಗೂ, ಮಹಿಳೆಯರು, ಹೆಣ್ಣುಮಕ್ಕಳು ಎಲ್ಲರಿಗೂ ಸಮಸ್ಯೆ ಎದರಾಗುತ್ತಿರುವ ಕುರಿತು ನಾವು ಸುದ್ದಿ ಪ್ರಕಟಿಸಿದ್ದೆವು.
ಇದೊಂದು ಪ್ರತಿಷ್ಠಿತ ಬಡಾವಣೆ ಕೂಡ ಹೌದು ಈ ಸಂಬಂಧ ಇಲ್ಲಿ ಸಮಸ್ಯೆ ಆಗುತ್ತಿದೆ ಅನ್ನುವುದರ ಕುರಿತಾಗಿ ನಾವು ಒಂದು ಜನಪರ ಮಾಧ್ಯಮವಾಗಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೂ ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೂ ಸಮಸ್ಯೆ ಗಂಭೀರ ಪರಿಸ್ಥಿತಿ ಕುರಿತು ಫೋಟೋ ಗಳನ್ನೆಲ್ಲ ವಾಟ್ಸಪ್ ಸಂದೇಶ ಮೂಲಕ ಕಳಿಸಿ ಈ ಸಂಬಂಧ ಗಮನಕ್ಕೆ ಮಾಹಿತಿ ತಿಳಿಸಿದ್ದರು ಕೂಡ ಯಾವದೇ ಕ್ರಮ ಆಗದಂತ ಪರಿಸ್ಥಿತಿ ನಿರ್ಮಾಣವಾದ ಸಂದರ್ಭದಲ್ಲಿ ಮಾಧ್ಯಮವಾಗಿ ನಮ್ಮ ಕರ್ತವ್ಯದಂತೆ ಸುದ್ದಿ ಪ್ರಕಟಿಸಿದೆವು.
ಇನ್ನು ನಮ್ಮ ನ್ಯೂಸ್ ಸಂಬಂಧ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಆ ರಸ್ತೆ ಬಡಾವಣೆಯಲ್ಲಿ ಆಗುತ್ತಿರುವ ಸಮಸ್ಯೆ ಬಗೆಹರಿಸಿ ಕೊಡುವುದಕ್ಕಿಂತ ಹೆಚ್ಚಾಗಿ ನಾವು ಸುದ್ದಿ ಬಿತ್ತರ ಮಾಡಿದ್ದೆ ತಪ್ಪು ಎಂದು ಯಾಕೆ ಅನಿಸಿತೋ ಅಧಿಕಾರಿಯೇ ತಿಳಿಸಬೇಕಾಗಿದೆ..!
ಹಾಗಾಗಿ ನಾವು ಪ್ರಸಾರ ಮಾಡಿದ ಸುದ್ದಿ ಸಂಬಂಧ ನಮ್ಮ ಮಾಧ್ಯಮದ ಮೇಲೆ ಪೊಲೀಸ್ ಅಧಿಕಾರಿ ಮಾನಹಾನಿಕರ ಸುದ್ದಿ ಪ್ರಸಾರ ಮಾಡಿದ್ದೀರಾ ಅಂತ ಲೀಗಲ್ ನೋಟೀಸ್ ಕಳಿಸಿದ್ದಾರೆ .
ಆದರೆ ವಾಸ್ತವದಲ್ಲಿ ನಾವು ಯಾವದೇ ಮಾನಹಾನಿಕರ ಸುದ್ದಿ ಪ್ರಕಟಿಸಿರುವುದಿಲ್ಲ. ಹಾಗೂ ಆ ಬಡಾವಣೆಯ ರಸ್ತೆಯಲ್ಲಿ ರಾಜಾರೋಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಮದ್ಯಪಾನ ಮಾಡುತ್ತ ಕುಳಿತಿದ್ದಾರೆ ಅಂತ ಅಧಿಕಾರಿಯ ಗಮನಕ್ಕೆ ನಮ್ಮ ಮಾಧ್ಯಮದ ಮೂಲಕ ಮಾಹಿತಿ ಕೂಡ ತಂದಿದ್ದೇವೆ.
ಈ ಸಂಬಂಧ ಅಧಿಕಾರಿಗಳಿಗೆ ತಮ್ಮ ಗಮನಕ್ಕೆ ಮಾಹಿತಿ ಅಂತ ಕರೆ ಮಾಡಿದಾಗ ಪರಿಸ್ಥಿತಿ ಅವಲೋಕನ ಮಾಡಿ ಸರಿಪಡಿಸಿಕೊಡುವ ಜವಾಬ್ದಾರಿಯನ್ನು ಅಧಿಕಾರಿಯಾದವರು ನಿರ್ಲಕ್ಷಿಸುತ್ತಾರೆ ಎಂದು ನಾವು ಕೂಡ ಭಾವಿಸಿರಲಿಲ್ಲ.
ಇದಾದ ನಂತರ ಸುದ್ದಿ ಪ್ರಕಟಣೆ ಬೆನ್ನಲ್ಲೇ, ಅಧಿಕಾರಿಯವರು ನಮಗೆ ವಾಟ್ಸಪ್ ಸಂದೇಶ ಮೂಲಕ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ನಮ್ಮ ಮೇಲೆ ಬೆದರಿಕೆ ಸಂದೇಶ ವಾಟ್ಸಪ್ ಮೂಲಕ ಕಳಿಸಿದ್ದರು. ಹಾಗೆಯೇ ಅದೇ ಅಧಿಕಾರಿ ನಂತರ ಅದೇ ಮೆಸೇಜ್ ನ (ಅಳಿಸಿ)ಡಿಲೀಟ್ ಸಹ ಮಾಡಿದರು.
ಹಾಗೂ ಸಾರ್ವಜನಿಕರು, ನಾಗರಿಕರು, ಮಹಿಳೆಯರು, ಹೆಣ್ಣುಮಕ್ಕಳು ಅನುಭವಿಸುತ್ತಿರುವ ಸಮಸ್ಯೆ ಹಾಗೂ ಮದ್ಯ ವ್ಯಸನಿಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಆಗುತ್ತಿರುವ ಸಮಸ್ಯೆ ಜೊತೆ ಜೊತೆಗೆ ವೈನ್ ಶಾಪ್ ಗಳು ಲೈಸನ್ಸ್ ಪಡೆದುಕೊಂಡರೆ ಸಾಕಾಗಲ್ಲ ವೈನ್ ಶಾಪ್ ಅವರ ಜವಾಬ್ದಾರಿ ಕೂಡ ಸಮಾಜದಲ್ಲಿರತ್ತೆ ಎನ್ನುವುದನ್ನ ವೈನ್ ಶಾಪ್ ಅವರು ಮರೆತಿದ್ದಾರೆ ಎಂಬುದು ಸ್ಥಳೀಯರ ಆರೋಪ ಮತ್ತು ಆಕ್ರೋಶವಾಗಿದೆ.
ಈ ಎಲ್ಲಾ ವಿಚಾರದ ಬೆಳವಣಿಗೆ ಜೊತೆಗೆ ಶಿವಮೊಗ್ಗದ ಎಸ್ಪಿ ನಿಖಿಲ್. ಬಿ ಅವರ ಗಮನಕ್ಕೆ ಈ ರಸ್ತೆಯಲ್ಲಿರುವ ಸಮಸ್ಯೆಯನ್ನು ಸಹ ನಮ್ಮ ಇ-ಕನ್ನಡ ಮಾಧ್ಯಮ ಮುಂಚಿತವಾಗಿ ಗಮನಕ್ಕೆ ತಂದಿತ್ತು ಹಾಗೆಯೇ ಎಸ್ಪಿ ಅವರು ಕೂಡ ಸಂಬಂಧಪಟ್ಟ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರಿಗೆ ಅಂದೇ ಸಮಸ್ಯೆ ಸರಿಪಡಿಸಿಕೊಡಲು ತಿಳಿಸಿದ್ದರು. ಹಾಗೆಯೇ ರಸ್ತೆಯಲ್ಲಿ ಮಹಿಳೆಯರು, ಮಾನವಂತರು ಅನುಭವಿಸುತ್ತಿದ್ದ ಸಮಸ್ಯೆ ಬಗ್ಗೆ ERSS ಗೆ ಕೂಡ ಕರೆ ಮಾಡಿ ನಮ್ಮ ಮಾಧ್ಯಮ ತಿಳಿಸಿತ್ತು.
ನಮ್ಮ ಇ-ಕನ್ನಡ ಮಾಧ್ಯಮ ಎಲ್ಲಾ ಪ್ರಯತ್ನ ಮಾಡಿ ಸಮಸ್ಯೆ ಬಗೆಹರಿಯಲಿಲ್ಲವೆಂಬ ಕಾರಣಕ್ಕೆ ತದ ನಂತರ ಹತ್ತಿರ ಹತ್ತಿರ ಒಂದು ತಿಂಗಳು ಕಳೆಯುತ್ತ ಬಂದಾಗ ಮತ್ತೊಮ್ಮೆ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಅಧಿಕಾರಿ ಗಮನಕ್ಕೆ ಕರೆ ಮಾಡಿ ಇಲ್ಲಿ ರಾಜಾರೋಷವಾಗಿ ಮದ್ಯಪಾನ ಎಲ್ಲೆಂದರಲ್ಲಿ ಮಾಡುತ್ತಿದ್ದಾರೆ ಹಾಗೂ ಫೋಟೋ ಸಹಿತ ಇನ್ಸ್ಪೆಕ್ಟರ್ ಗೆ ವಾಟ್ಸಪ್ ಮೂಲಕ ಮಾಹಿತಿ ಕಳಿಸಲಾಗಿತ್ತು .
ಇಷ್ಟೆಲ್ಲಾ ವಿಷಯ ವಿಚಾರ ತಿಳಿಸಿದರು ಯಾವದೇ ಕ್ರಮ ಆಗದ ಹಿನ್ನಲೆ ನಾವು ನ್ಯೂಸ್ ಮಾಡಬೇಕಾಯಿತು.ನಂತರದ ಬೆಳವಣಿಗೆ ಏನಂದರೆ ಮಾಧ್ಯಮವಾಗಿ ಸುದ್ದಿ ಮಾಡಿದರೆ ಸಮಸ್ಯೆಗಳ ಬಗ್ಗೆ ಗಮನಕ್ಕೆ ತೆಗೆದುಕೊಂಡು ಸರಿಯಾದ ವ್ಯವಸ್ಥೆ ಮಾಡಬೇಕಾದ ಪೊಲೀಸ್ ಅಧಿಕಾರಿ ನಾವು ಸುದ್ದಿ ಮಾಡಿದ್ದೆ ಮಾನಹಾನಿಕರ ಸುದ್ದಿ ಎಂದು ಬೆದರಿಕೆ ಒಡ್ದುವ ಮೂಲಕ ಲೀಗಲ್ ನೋಟೀಸ್ ಕಳಿಸಿದ್ದಾರೆ.
ಒಂದು ಮಾಧ್ಯಮವಾಗಿ ಜನಪರ ಸುದ್ದಿಗಳನ್ನು ಪ್ರಕಟಣೆ ಮಾಡುವುದೇ ಜನಸಾಮಾನ್ಯರು, ಮಹಿಳೆಯರಿಗೆ ಹೆಣ್ಣುಮಕ್ಕಳು ಅನುಭವಿಸುತ್ತಿರುವ ಸುದ್ದಿ ಪ್ರಕಟಣೆ ಮಾಡಿದರೆ ಮಾಧ್ಯಮದ ಮೇಲೆ ಗದಾ ಪ್ರಹಾರ, ಹೆದರಿಸುವ ಬೆದರಿಸುವ ಪ್ರಯತ್ನ ನಡೆಯುತ್ತೆ ಅಂದರೆ ಹಲವಾರು ಪ್ರಶ್ನೆ ಸಮಾಜದಲ್ಲಿ ಎದರಾಗತ್ತೆ?,
ಪೊಲೀಸ್ ಇಲಾಖೆಗೆ ವಾಸ್ತವದ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟರು ಸಹ ಯಾಕೆ ಕ್ರಮ ಜರುಗಿಸಲಿಲ್ಲ?ಹಾಗೂ ಒಂದು ಸಮಾಜಮುಖಿ ಸುದ್ದಿ ಅಥವಾ ನ್ಯೂಸ್ ಮಾಡಿದರೆ ಅಲ್ಲಿಯ ಆ ರಸ್ತೆಯ, ಬಡಾವಣೆಯ ವಾಸ್ತವದ ಬಗ್ಗೆ ಆ ಅಧಿಕಾರಿಗೆ ಯಾಕೆ ಸಮಸ್ಯೆ ಏನಾಗುತ್ತಿದೆ ಅಂತ ತಿಳಿದು ಸಮಸ್ಯೆ ಬಗೆಹರಿಸಬಹುದಿತ್ತಲ್ಲವೇ?
ನಾವು ಒಂದು ಮಾಧ್ಯಮವಾಗಿ ಸಮಾಜದ ಸಮಸ್ಯೆಗಳನ್ನು ತೋರಿಸುವ ಕೆಲಸವನ್ನ ಈ ಹಿಂದೆಯೂ ಮಾಡುತ್ತ ಬಂದಿದ್ದೇವೆ, ಈಗಲೂ ಮಾಡುತ್ತಿದ್ದೇವೆ, ಮುಂದೆಯೂ ಮಾಡಲಿದ್ದೇವೆ..!
ಧ್ವನಿ ಇಲ್ಲದವರ ಧ್ವನಿ ಆಗುವುದು ಮಾಧ್ಯಮದ ಕರ್ತವ್ಯ ಇಂತಹ ಪ್ರಾಮಾಣಿಕ ಕೆಲಸಕ್ಕೆ ಎಷ್ಟೇ ಬೆದರಿಕೆ ಮತ್ತೊಂದು ಏನೇ ಬಂದರು ಸಹ ನಮ್ಮ ನಿಷ್ಪಕ್ಷವಾದ ಸುದ್ದಿಯನ್ನು ನಾವು ಪ್ರಕಟಣೆ ಮಾಡುತ್ತೇವೆ.
ಹೆದರಿಕೆ ಬೆದರಿಕೆಗೆಲ್ಲ ನಿಂತರೆ ಮಾಧ್ಯಮ ಅನಿಸುವುದಿಲ್ಲ..!ಸತ್ಯ ಶೋಧ ನಿರ್ಭೀತ ಪತ್ರಿಕೋದ್ಯಮ ಮೂಲಕ ನ್ಯಾಯುಯುತ ಸುದ್ದಿ ಪ್ರಕಟಣೆ ಮಾಡುವುದು ಸಮಾಜದಲ್ಲಿ ನಮ್ಮ ಜವಾಬ್ದಾರಿಯಾಗಿದೆ.
ಹಾಗೂ ನಮ್ಮ ಕೆಲವು ಆತ್ಮೀಯ ವೃತ್ತಿ ಬಾಂಧವರು ನಮಗೆ ಎಚ್ಚರಿಕೆಯೋ ಬೆದರಿಕೆಯೋ ಒಟ್ಟು ನಮ್ಮ ಮೇಲಿರುವ ಪ್ರೀತಿ ಅಭಿಮಾನದಿಂದ ಕಾಳಜಿ ತೋರಿಸಿ ಹೇಳಿದರು, ಏನಂದರೆ..?
ನಾಳೆ ದಿವಸ ಒಬ್ಬನೇ ಓಡಾಡುವಾಗ ಯಾರಾದರು ಏನಾದರು ಮಾಡಿದರೆ ಏನು ಅಂತ ಪ್ರಶ್ನೆ ಮಾಡಿದರು? ಇನ್ನು ವೈನ್ ಶಾಪ್, ಮರಳು, ಗಾಂಜಾ ಇತ್ಯಾದಿ ಸುದ್ದಿ ಮಾಡಿದರೆ ಸಮಸ್ಯೆ ಬಗೆಹರಿಯಲಿದ್ದೆಯ?
ಆ ಸಂಬಂಧಪಟ್ಟ ಅಧಿಕಾರಿ ಏನಾದರು ಸಮಸ್ಯೆ ಅಥವಾ ತೊಂದರೆ ಉಂಟು ಮಾಡಿದರೆ ನೀನು ಏನು ಮಾಡುತ್ತೀಯಾ? ಎಂದೆಲ್ಲ ಪ್ರಶ್ನೆ ಮಾಡಿದರು.
ಇದೆಲ್ಲ ನಾವು ಒಂದು ಸಮಾಜಮುಖಿ ಸುದ್ದಿ ಮಾಡಿದರ ಪರಿಣಾಮ ಅಂತ ನಮಗೂ ತಿಳಿದಿದೆ.
ಹಾಗೂ ಪ್ರಸ್ತುತ ಅಧಿಕಾರಿಯಾದವರು ಒಳ್ಳೆಯವರು ಅಂತ ನಮ್ಮ ಭಾವನೆ ಸಾಮಾಜಿಕ ಕಳಕಳಿಯ ಸುದ್ದಿ ಬಂದಾಗ ಜನಸಾಮಾನ್ಯರು ಕಷ್ಟ ಆಲಿಸಿ ಜನಸಾಮಾನ್ಯರ ಧ್ವನಿಯಾಗುತ್ತರೆ ಎಂಬುದು ನಮ್ಮ ನಂಬಿಕೆ.
ಹಾಗೂ ನಾವು ಸುದ್ದಿ ಮಾಡಿದ್ದೇವೆ ಅಂತ ಅಧಿಕಾರಿಗಳು ನಮಗೆ ಏನು ತೊಂದರೆ ಮಾಡಲ್ಲ ಅವರಿಗೆ ಸಹ ಒಂದು ಮಾಧ್ಯಮ ಅಂದಾಗ ಸಮಾಜದ ಸ್ವಾಸ್ತ್ಯ ಕಾಪಾಡಲಿ ಅಂತ ಸುದ್ದಿಗಳು ಬಿತ್ತರಿಸುತ್ತಾರೆ ಎಂಬುದು ಅಧಿಕಾರಿಯವರಿಗೂ ಸಹ ತಿಳಿದಿರತ್ತೆ ಎಂಬುದು ನಮ್ಮ ವಿಶ್ವಾಸ.
ನೋಟೀಸ್ ಕಳಿಸಿದ್ದು ಆಯಿತು ನಾವು ಉತ್ತರ ನೀಡಿದ್ದು ಆಗಿದೆ. ಇನ್ನು ಮುಂದೆಯಾದರು ಅಧಿಕಾರಿಯವರು ಯಾರೋ ಹೇಳುವುದನ್ನ ಕೇಳಿ ದುಡುಕೊ ಮುನ್ನ, ಸಮಾಜದಲ್ಲಿ ಇರುವ ಸಮಸ್ಯೆಗಳನ್ನು ಜವಾಬ್ದಾರಿಯುತ ಮಾಧ್ಯಮವಾಗಿ ಮಾಧ್ಯಮವಾಗಿ ಪ್ರಕಟಣೆ ಮಾಡಿದಾಗ ಒಮ್ಮೆ ಆಲೋಚಿಸಿ ನಿರ್ಧಾರ ಮಾಡುವುದು ಒಳಿತು. ಮಾನಹಾನಿಕರವಲ್ಲದ ಸುದ್ದಿಗೆ ಈ ರೀತಿ ದುಡುಕುವ ಅವಶ್ಯಕತೆ ಅಧಿಕಾರಿಯವರಿಗೆ ಇರಲಿಲ್ಲವೇನೋ..?
ನಮ್ಮ ಮಾಧ್ಯಮಕ್ಕು ಸಹ ಅನಿಸುತ್ತಿರುವುದು ಅಧಿಕಾರಿಯವರು ಮುಂದಿನ ದಿನಗಳಲ್ಲಿ ಒಳ್ಳೆಯ ಸೇವೆ ನೀಡುತ್ತಾರೆ, ಸಮಸ್ಯೆಗಳು ಕೇಳಿ ಬಂದಾಗ ಸೂಕ್ತವಾಗಿ, ಸೂಕ್ಷ್ಮವಾಗಿ ಸ್ಪಂದಿಸುವ ಮೂಲಕ ಜನಮನದ ಧ್ವನಿಯಾಗುತ್ತರೆ ಎಂಬ ವಿಶ್ವಾಸ ನಮ್ಮದು………


