ಶಿವಮೊಗ್ಗ | “ನಾನೇ ಭಾರತ” ನಾಳೆಯ ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆಗೆ ನಿರ್ಭಂಧ ಹೇರುವಂತೆ SDPI ಮನವಿ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ಜಿಲ್ಲಾ ಸಮಿತಿ ವತಿಯಿಂದ SPರವರಿಗೆ ಭೇಟಿ ಮಾಡಿ ಇಂದು ದಿನಾಂಕ:-17/04/2026, ಮನವಿ ಸಲ್ಲಿಸಿದೆ.

ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನಾಳೆ ಅಂದರೆ 18/04/2026ರ ಸಂಜೆ ನಡೆಯಲಿರುವ “ನಾನೇ ಭಾರತ” ಕಾರ್ಯಕ್ರಮಕ್ಕೆ ಕೋಮು ದ್ವೇಷ ಭಾಷಣಕಾರರ ಎಂದು ಆರೋಪಿಸಿ ಚಕ್ರವರ್ತಿ ಸೂಲಿಬೆಲೆಗೆ ನಿರ್ಭಂಧ ಹೇರುವಂತೆ ಮನವಿ ನೀಡಲಾಗಿದೆ.

ಹಲವು ಜಿಲ್ಲೆಗಳಲ್ಲಿ ನಿರ್ಭಂಧಕ್ಕೆ ಒಳಗಾಗಿರುವ ದ್ವೇಷ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಎಂದು ತಿಳಿಸಿದೆ ಇವರ ಮೇಲೆ ಹಲವು ಕೋಮು ಪ್ರಚೋದನಕಾರಿ ಭಾಷಣದ ಪ್ರಕರಣಗಳಿದ್ದು, ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು ಚಕ್ರವರ್ತಿ ಸೂಲಿಬೆಲೆಗೆ ಭಾಷಣ ಮಾಡಲು ಬಿಡಬಾರದು ಎಂದು SDPI ಮನವಿ ನೀಡಲಾಗಿದೆ.

ಈ ಸಂದರ್ಭದಲ್ಲಿ SDPI ಪಕ್ಷದ ಜಿಲ್ಲಾಧ್ಯಕ್ಷ ಜೀಲಾನ್ ರಜಾ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಇಮ್ರಾನ್, ಜಮೀರ್, ಸಮಿತಿ ಸದಸ್ಯರಾದ ಕಲೀಂ, ಇಸಾಖ್, ಮತ್ತು ಶಿವಮೊಗ್ಗ ನಗರ ಕಾರ್ಯದರ್ಶಿ ಸಜೀಲ್, ನಗರ ಸಮಿತಿಯ ಹಬೀಬ್ ರವರು ಉಪಸ್ಥಿತರಿದ್ದರು.

Author