ಶಿವಮೊಗ್ಗ | ಆಪರೇಷನ್ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ

ಶಿವಮೊಗ್ಗ

ಶಿವಮೊಗ್ಗ ನಗರದ ಆಲ್ಕೋಳ ವೃತ್ತದಿಂದ ಗೋಪಾಲಗೌಡ ಬಡಾವಣೆಗೆ ತೆರಳುವ 100 ಅಡಿ ರಸ್ತೆಯಲ್ಲಿ ಹಲವಾರು ಬೀದಿಬದಿ ವ್ಯಾಪಾರಸ್ಥರು ಫುಟ್ ಪಾತ್ ಒತ್ತುವರಿ ಮಾಡಿಕೊಂಡಿದ್ದರು.

ಈ ಸಂಬಂಧ ಹಲವಾರು ತಿಂಗಳುಗಳಿಂದ ಸುತ್ತಮುತ್ತಲಿನ ವಿವೇಕಾನಂದ ಬಡಾವಣೆ ಹಾಗೂ ಇನ್ನಿತರೇ ಬಡಾವಣೆಯ ನಿವಾಸಿಗಳು ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಒತ್ತುವರಿ ತೆರವುಗೊಳಿಸಿ ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಹಲವಾರು ಬಾರಿ ಅಗ್ರಹಿಸಿದ್ದರು.

ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳ ವಿಳಂಬದಿಂದ ಸ್ಥಳೀಯರು ಹಾಗೂ ಜನಸಾಮಾನ್ಯರು ಬೇಸತ್ತಿದ್ದರು.

ಇಂದು ಮಹಾನಗರ ಪಾಲಿಕೆ ಅಧಿಕಾರಿಗಳು, ಸಂಚಾರಿ ಪೊಲೀಸರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ.

ಹಾಗೂ ಈ ಒಂದು ಕಾರ್ಯಾಚರಣೆಯು ಭಗಷಹ ಆಗಿದೆ ಸಂಪೂರ್ಣವಾಗಿ ಮುಗಿದಿಲ್ಲ.

ಈ ಒಂದು ಕಾರ್ಯಾಚರಣೆ ಸಂಬಂಧ ಸಂಚಾರ ವೃತ್ತ ನಿರೀಕ್ಷಕರಾದ ದೇವರಾಜ್ ಅವರು ನಮ್ಮ ಇ-ಕನ್ನಡ ಸುದ್ದಿ ಮಾಧ್ಯಮಕ್ಕೆ ಮಾತನಾಡಿ ಇಂದು ಒಂದು ಹಂತಕ್ಕೆ ಪಾದಚಾರಿ ಮಾರ್ಗಕ್ಕೆ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ.

ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮುಂದಿನ ದಿನಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮತ್ತಷ್ಟು ಕಠಿಣವಾಗಿ, ಪರಿಣಾಮಕಾರಿಯಾಗಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಹಾಗೆಯೇ ಬೀದಿ ಬದಿ ವ್ಯಾಪಾರಸ್ತರಿಗೆ ಮತ್ತೊಂದು ಸ್ಥಳ ನಿಗದಿ ಮಾಡಿದ್ದೇವೆ ಅಲ್ಲಿ ವ್ಯಾಪಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಗಾಂಧಿ ಬಜಾರ್ ಹಾಗೂ ನಗರದ ಬೇರೆ ಭಾಗದಲ್ಲಿ ಒತ್ತುವರಿ ಆಗಿದ್ದಂತ ಪರಿಸ್ಥಿತಿ ಇಲ್ಲಿಯೂ ಸಹ ಆಗದಂತೆ ಈಗಲೇ ಎಚ್ಚರವಹಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಗೋಪಾಲಗೌಡ ಬಡಾವಣೆ ಹಾಗೂ ಸುತ್ತಮುತ್ತಲಿನ ಬಡಾವಣೆಯ ನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ಹಲವಾರು ತಿಂಗಳು ನಂತರ ಈ ಒಂದು ಕಾರ್ಯಾಚರಣೆ ಒಂದು ಹಂತಕ್ಕೆ ಸಮಾಧಾನವಾಗಿದ್ದರು.

ಇದು ಪೂರ್ತಿಯಾಗಿ ಯಾವಾಗ ಯಶಸ್ವಿಯಾಗಲಿದೆ, ಪಾದಚಾರಿಗಳಿಗೆ ಸಂಚಾರಕ್ಕೆ ಯಾವಾಗ ಮುಕ್ತವಾಗಲಿದೆ? ಎಂದು ಕಾದು ನೋಡುತ್ತಿದ್ದಾರೆ..!

Author