ಶಿವಮೊಗ್ಗ | ಟಿಪ್ಪು ನಗರದಲ್ಲಿ 14 ವರ್ಷ ದಿಂದ ಸಾಕ್ಷಿ ಆಗಿರುವ ಸೌಹಾರ್ದ ಗಣಪತಿ

ಶಿವಮೊಗ್ಗ

ಶಿವಮೊಗ್ಗ ಸೌಹಾರ್ದ ಗಣಪತಿ : ಭಾವೈಕ್ಯತೆಗೆ ಸಾಕ್ಷಿಯಾದ ಸಂಭ್ರಮ

ಶಿವಮೊಗ್ಗದಲ್ಲಿ ಸೌಹಾರ್ದತೆ, ಸಹಬಾಳ್ವೆ ಹಾಗೂ ಭಾವೈಕ್ಯತೆಯ ಸಂದೇಶ ಸಾರುವ ಉದ್ದೇಶದಿಂದ ಸೌಹಾರ್ದ ಗಣಪತಿ ಮೂರ್ತಿಯನ್ನು ಕಳೆದ 14 ವರ್ಷದಿಂದ ಭಕ್ತಿಭಾವದಿಂದ ಸ್ಥಾಪಿಸಲಾಗುತ್ತಿದೆ.

ವಿವಿಧ ಸಮುದಾಯಗಳ ಜನರು ಒಗ್ಗೂಡಿ ಗಣಪತಿ ಆರಾಧನೆಯಲ್ಲಿ ಪಾಲ್ಗೊಂಡು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.

ಗಣಪತಿ ಹಬ್ಬವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಸಮಾಜದಲ್ಲಿ ಒಗ್ಗಟ್ಟು, ಸ್ನೇಹ ಮತ್ತು ಸಹೋದರತ್ವವನ್ನು ಬೆಳೆಸುವ ವೇದಿಕೆಯಾಗಬೇಕು ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ಸಾರಾಲಾಗುತ್ತಿದೆ.

ಸೌಹಾರ್ದ ಗಣಪತಿ ಸ್ಥಾಪನೆಯ ಕಾರ್ಯಕ್ರಮದಲ್ಲಿ ಸ್ಥಳೀಯರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯದ ವಾತಾವರಣದಲ್ಲಿ ಹಬ್ಬವನ್ನು ಆಚರಿಸುವ ಸಂಕಲ್ಪವನ್ನು ವ್ಯಕ್ತಪಡಿಸಲಾಗುತ್ತಿದೆ .

ಈ ಗಣಪತಿಯನ್ನು ನೀವು ನೋಡಬೇಕಾದಲ್ಲಿ ಟಿಪ್ಪು ನಗರ ಕೆ.ರಾಜ ಅವರು 14 ವರ್ಷದಿಂದ ಟಿಪ್ಪು ನಗರ 6ನೇ ಕ್ರಾಸ್ ಎಡಭಾಗ ಹಿಂದುಗಳ ಒಂದೇ ಮನೆಯಲ್ಲಿ ಕೂಡಿಸುವ ಹಿಂದೂ ಮುಸಲ್ಮಾನ್ ಬಾಂಧವ್ಯ ಬೆಸೆಯುವ ಈ ಹಬ್ಬವನ್ನು ಎಲ್ಲರೂ ಒಟ್ಟುಗೂಡಿ ಆಚರಣೆ ಮಾಡುತ್ತಿದ್ದಾರೆ.

ಸ್ಥಳ : ಆರತಿ ತಿವಾರಿ ,ಸಾಯಿ ಪ್ಯಾರಡೈಸ್, ಟಿಪ್ಪು ನಗರ ಎಡಭಾಗ ಆರನೇ ತಿರುವು. ಶಿವಮೊಗ್ಗ

Author