ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹಿಸಿ ನಡೆಸುತ್ತಿರುವ ವಕೀಲರ ಸಂಘದ ಪ್ರತಿಭಟನೆಗೆ ಕರವೇ,ಸ್ವಾಭಿಮಾನಿ ಬಣ ಬೆಂಬಲಿಸುತ್ತಿರುವ ಕುರಿತು,ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರಕ್ಕೆ ಶಿವಮೊಗ್ಗ ಜಿಲ್ಲೆ ಮಧ್ಯ ಕರ್ನಾಟಕದ ಭಾಗವಾಗಿದ್ದು, ಇಲ್ಲಿನ ನಾಗರೀಕ ನ್ಯಾಯಕ್ಕಾಗಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹಿಸಿ ಶಿವಮೊಗ್ಗ ವಕೀಲರ ಸಂಘದಿಂದ ನಡೆಸುತ್ತಿರುವ ಅನಿರ್ಧಿಷ್ಟವಾಧಿ ಧರಣಿಗೆ ಜನತೆಯ ಹಿತದೃಷ್ಠಿಯಿಂದ ನ್ಯಾಯ ಸಮ್ಮತವಾಗಿರುವ ಹೋರಾಟಕ್ಕೆ ಕರವೇ ಸ್ವಾಭಿಮಾನಿ ಬಣ ಬೆಂಬಲಿಸಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮನವಿ ಮಾಡುತ್ತಿದೆ ಎಂದು ಸಂಘಟನೆ ತಿಳಿಸಿದೆ.

ಶಿವಮೊಗ್ಗ ಸೇರಿದಂತೆ ವಿಭಾಗೀಯ ಮಟ್ಟದಲ್ಲಿ ಹಾಗೂ ಮಧ್ಯ ಕರ್ನಾಟಕದ ಭಾಗವಾಗಿರುವ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗಳ ನಾಗರೀಕರು ಮಂಗಳೂರಿಗೆ ಪಯಣಿಸಿ ಕಾನೂನು ಕೇಸುಗಳನ್ನು ಇತ್ಯರ್ಥ ಪಡಿಸಿಕೊಳ್ಳುವುದಕ್ಕೆ ಸುಗಮವಾಗಲು ಸಾಧ್ಯವಾಗುವುದಿಲ್ಲ, ಬದಲಿಗೆ ಯಾವುದೇ ಅಂಕಿ ಅಂಶಗಳ ಕೇಸುಗಳು, ಪ್ರತಿಕೂಲ ವಾತಾವರಣ, ಪ್ರವಾಸದ ಅನುಕೂಲತೆಗಳು, ಆರ್ಥಿಕ ಸ್ಥಿತಿಗತಿಗಳು, ಪ್ರಾಕೃತಿಕ ವಿಕೋಪಗಳು, ಶಿವಮೊಗ್ಗ ಜಿಲ್ಲಾ ವಿಭಾಗವಾದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ಜನತೆಗೆ ತಂದೊಡ್ಡುವ ಬಹುದೊಡ್ಡ ಸಮಸ್ಯೆಗಳನ್ನು ಪರಿಗಣಿಸಿದೆ ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ಅನುಮತಿ ಕೋರಿ ಮುಖ್ಯಮಂತ್ರಿಗಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವುದು ಆವೈಜ್ಞಾನಿಕವಾಗಿದೆ ಎಂದು ಕರವೇ ಸ್ವಾಭಿಮಾನಿ ಬಣ ಮುಖ್ಯಮಂತ್ರಿಗಳ ಆವಗಾಹನೆಗೆ ತರಬಯಸುತ್ತದೆ ಎಂದು ಈ ಮೂಲಕ ತಿಳಿಸಿದೆ.

ಮಂಗಳೂರು ಪೀಠದ ಸ್ಥಾಪನೆಗೆ ರಾಜ್ಯ ಸರ್ಕಾರದ ಇಚ್ಛಾಶಕ್ತಿ ಇದ್ದರೆ ಇದರಲ್ಲಿ ಜೋಡಿಸಲಾಗಿರುವ ಶಿವಮೊಗ್ಗ ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳನ್ನು ಕೈ ಬಿಡಬೇಕು, ಹಾಗೂ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮುಂದಾಗಬೇಕೆಂದು ತಿಳಿಸಿರುವುದು, ಮಧ್ಯ ಕರ್ನಾಟಕದ ಜನತೆಗೊಂದು ಸಾಮಾಜಿಕ ನ್ಯಾಯವಾಗಿದೆ,

ಹೀಗಾಗಿಯೇ ಇದರ ಅನಾನುಕೂಲತೆಗಳನ್ನು ಮನನ ಮಾಡಿಕೊಂಡಿರುವ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಧರಣಿಗೆ ಬೆಂಬಲಿಸಿದೆ ಇದರ ಗಂಭೀರತೆ ರಾಜ್ಯ ಸರ್ಕಾರ ಗೊತ್ತು ಮಾಡಿಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಈ ಪತ್ರ ನಡೆಯ ವಿರುದ್ದ ಭಾರಿ ಪ್ರತಿಭಟನೆಗೆ ಕರವೇ ಸ್ವಾಭಿಮಾನಿ ಬಣ ಮುಂದಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತದೆ ಎಂದು ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ನ್ಯಾಯವಾದಿಗಳ ಹೋರಾಟಕ್ಕೆ ಬೆಂಬಲಿಸಿದೆ.

