ಸಾಗರ | ಅಕ್ರಮ ಜಂಬಿಟ್ಟಿಗೆ ಗಣಿಗಾರಿಕೆ ವಿರುದ್ಧ ತಹಶೀಲ್ದಾರ್ ಡಾ. ಪ್ರತಿಭಾ.ಆರ್ ದಾಳಿ

ಕ್ರೈಂ

ಸಾಗರ, ಅಕ್ರಮ ಜಂಬಿಟ್ಟಿಗೆ ಗಣಿಗಾರಿಕೆ ವಿರುದ್ಧ ತಹಶೀಲ್ದಾರ್ ಡಾ. ಪ್ರತಿಭಾ.ಆರ್ ದಾಳಿ ಮುಂದುವರೆಸಿದ್ದಾರೆ. ಸಾಗರ ತಾಲೂಕು ಬೊಮ್ಮತ್ತಿ ಸಮೀಪದ ಬ್ರಾಹ್ಮಣ ಮಂಚಾಲೆಯಲ್ಲಿ ಅಕ್ರಮವಾಗಿ ಜಂಬಿಟ್ಟಿಗೆ ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ದಿಢೀರ್ ದಾಳಿ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

ಸಾಗರ ತಾಲೂಕಿನ ಬ್ರಾಹ್ಮಣ ಮಂಚಾಲೆ ಗ್ರಾಮದಲ್ಲಿ ಅಕ್ರಮವಾಗಿ ಜಂಬಿಟ್ಟಿಗೆ ಗಣಿಗಾರಿಕೆ ನಡೆಸಿ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತಹಶೀಲ್ದಾರ್ ಡಾ. ಪ್ರತಿಭಾ ಆರ್, ಜಂಬಿಟ್ಟಿಗೆ ಸಮೇತ ಲಾರಿಯನ್ನು ವಶಕ್ಕೆ ಪಡೆದು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಂದಾಯ ನಿರೀಕ್ಷಕ ಗುರುರಾಜ್ ಹಾಗೂ ಗ್ರಾಮ ಆಡಳಿತಾಧಿಕಾರಿ ನಂದೀಶ್ ಕಾರ್ಯಾಚರಣೆಯಲ್ಲಿ ಇದ್ದರು.

Author