ಹೊಸನಗರ ತಾಲ್ಲೋಕು ಒಕ್ಕಲಿಗರ ಸಂಘ (ರಿ) ಅವರ ಮಾರ್ಗದರ್ಶನದಲ್ಲಿ ಯುವ ಪಡೆ ಸೇರಿ ರಚಿಸಿರುವ ಒಕ್ಕಲಿಗರ ಯುವ ವೇದಿಕೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ನೆರವೇರಿತು.

ಶ್ರೀ ಶ್ರೀ ಪ್ರಸನ್ನನಾಥ್ ಸ್ವಾಮೀಜಿ ಅವರ ದಿವ್ಯ ಹಸ್ತದಲ್ಲಿ ಒಕ್ಕಲಿಗರ ಯುವ ವೇದಿಕೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಹೊಸನಗರ ತಾಲ್ಲೂಕು ವ್ಯಾಪ್ತಿಯ ಎಲ್ಲಾ ಯುವಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು, ಯುವಕರಲ್ಲಿ ಏಕತೆ ಮೂಡಿಸುವುದು, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಸಾರ್ವಜನಿಕ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವ ಉದ್ದೇಶದಿಂದ ಒಕ್ಕಲಿಗರ ಯುವ ವೇದಿಕೆಯನ್ನು ಆರಂಭಿಸಲಾಗಿದೆ.
ಹೊಸನಗರ ತಾಲ್ಲೂಕಿನ ಯುವ ಶಕ್ತಿಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಆರಂಭಗೊಂಡಿರುವ ಈ ವೇದಿಕೆ ಮುಂದಿನ ದಿನಗಳಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದೆ ಎಂದು ವೇದಿಕೆಯ ಮುಖಂಡರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯ ನಿರ್ದೇಶಕರಾದ ಬೇಳೂರು ಗಗನ್ ಗೌಡ ಸೇರಿದಂತೆ ವಿಟ್ಟು ಹೊಸನಗರ, ಪ್ರಿಯದ್ ಮಾಸ್ತಿಕಟ್ಟೆ, ಅನುದೀಪ್ ಹೊಸನಗರ, ಆದರ್ಶ್ ಉಳಕೊಪ್ಪ, ಪೃಥ್ವಿರಾಜ್ ದೋದುರ್, ದೇವು ನಿಲ್ಸಿಕಲ್, ಸಂಕೇತ್ ಹೆಗ್ಗೆಬೈಲ್, ಧೀಮಂತ ಉಳೆಗದ್ದೆ. ದೀಕ್ಷಿತ್ ಹೆಂಡೇಗದ್ದೆ, ಪುನೀತ್ ಬೇಳೂರು, ಸಚಿನ್ ಮಾಸ್ತಿಕಟ್ಟೆ, ಸಂದೇಶ್ ನಿಲ್ಸಿಕಲ್, ನಿತಿನ್ ಕೋಟೆಕೊಪ್ಪ, ಅಭಿ ಹೆಂಡೇಗದ್ದೆ. ಪ್ರದೀಪ ಬೇಳೂರು, ಮಹೇಶ್ ಕಾರಣಗೇರಿ ಸೇರಿದಂತೆ ಅನೇಕ ಯುವಕರು ಭಾಗವಹಿಸಿದ್ದರು.


