ಸಾಗರ ತಾಲ್ಲೂಕಿನ ಶಾಸಕ ಬೇಳೂರು ಗೋಪಾಲಕೃಷ್ಣರವರು ತಮಗೆ 100 ಪರ್ಸೆಂಟ್ ಮಿನಿಸ್ಟರ್ ಗಿರಿ ಸಿಗುತ್ತೆ ಎನ್ನುತ್ತಿದ್ದಾರೆ ಅಲ್ಲದೆ ಫಾರೆಸ್ಟ್ ಮಿನಿಸ್ಟ್ರಿಯೇ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಈ ಬಗ್ಗೆ ಸಾಗರದಲ್ಲಿ ನಿನ್ನೆ ಸೋಮವಾರ ಮಾತನಾಡಿರುವ ಅವರು, ಸಚಿವ ಸಂಪುಟ ವಿಸ್ತರಣೆ ಜೂ. 23 ಅಥವಾ 24ರಂದು ನಡೆಯಲಿದೆ. ಆ ವೇಳೆ ತಮಗೆ ಸಚಿವ ಸ್ಥಾನ ಸಿಗುವ ಬಗ್ಗೆ ಶೇ.100 ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಮಲೆನಾಡು ಭಾಗಕ್ಕೆ ಅರಣ್ಯ ಖಾತೆ ನೀಡುವಂತೆ ಆಗ್ರಹಿಸಲಾಗಿದೆ. ಆದರೆ, ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿರ್ವಹಿಸುವೆ ಎಂದಿದ್ದಾರೆ.


