ಶಿವಮೊಗ್ಗ | ದೇಶದ ಬೊಕ್ಕಸ ಲೂಟಿ ಮಾಡಿದ ಕಾಂಗ್ರೆಸ್ಸಿಗರಿಗೆ ಮೋದಿಯವರ ರಾಷ್ಟ್ರಭಕ್ತಿಯ ಮಿತವ್ಯಯದ ಪಾಠ ಅರ್ಥವಾಗದು : ಶಾಸಕ ಎಸ್. ಎನ್. ಚನ್ನಬಸಪ್ಪ

2012ರಲ್ಲಿ ದೇಶದ ಆರ್ಥಿಕತೆ ಹದಗೆಟ್ಟಾಗ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅವರು ಇದೇ ರೀತಿ ದೇಶದ ಜನರಲ್ಲಿ ‘ಚಿನ್ನ ಖರೀದಿಸುವುದನ್ನು ನಿಲ್ಲಿಸಿ’ ಎಂದು ಬಹಿರಂಗವಾಗಿ ಬೇಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ‘ಹಣವೇನು ಮರದಲ್ಲಿ ಬೆಳೆಯುವುದಿಲ್ಲ’ ಎಂದು ಹೇಳುವ ಮೂಲಕ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡು ಜನಸಾಮಾನ್ಯರ ಸಂಕಷ್ಟವನ್ನು ಹೀಗಳೆದಿದ್ದರು. ಅಂದು ಅವರು ಮಾಡಿದ ಇಂತಹ ಆರ್ಥಿಕ ಅಶಿಸ್ತಿನ ಪರಿಣಾಮವಾಗಿ ಭಾರತವು ವಿಶ್ವದ ಅತ್ಯಂತ ದುರ್ಬಲ ಆರ್ಥಿಕತೆಗಳ (Fragile Five) ಪಟ್ಟಿಗೆ ಸೇರಿತ್ತು ಎಂಬ […]

Continue Reading

ಇಂಧನ ಬಳಕೆ ಕಡಿಮೆಗೆ ಪ್ರಧಾನಿ ಸಲಹೆ : ಡಿಸಿಎಂ ಡಿಕೆಶಿ ತಿರುಗೇಟು

ಅವರ ಕೇಂದ್ರ ಸಚಿವರಿಗೆ ತಾಕೀತು ಮಾಡಲಿ. ನಾವು ಮೊದಲು ನಡೆದುಕೊಂಡು ನಂತರ ಸಾಮಾನ್ಯ ಜನಕ್ಕೆ ಸಂದೇಶ ನೀಡಬೇಕು ಎಂದು ತಿರುಗೇಟು ನೀಡಿದರು. ಬಿಜೆಪಿ ಶಾಸಕರು, ನಾಯಕರು, ಕಾರ್ಯಕರ್ತರಿಂದ ತ್ಯಾಗ ಪ್ರಾರಂಭವಾಗಲಿಜಗತ್ತಿನ ಪರಿಸ್ಥಿತಿ ಸರಿಯಿಲ್ಲ ಕೆಲವೊಮ್ಮೆ ತ್ಯಾಗಕ್ಕೂ ಸಿದ್ಧವಾಗಿರಬೇಕು ಎಂಬ ಕಾರಣಕ್ಕೆ ಸಂದೇಶ ನೀಡಿದ್ದಾರೆ ಎಂದಾಗ, “ಮೊದಲು ತ್ಯಾಗವನ್ನು ಮಂತ್ರಿಗಳು, ಕೇಂದ್ರ ಸರ್ಕಾರದ ಸಚಿವರು, ಅಧಿಕಾರಿಗಳು, ಬಿಜೆಪಿ ಆಡಳಿತ ರಾಜ್ಯಗಳಲ್ಲಿರುವ ಅಧಿಕಾರಿಗಳಿಂದ, ಅವರ ಪಕ್ಷದ ಶಾಸಕರು, ನಾಯಕರು ಹಾಗೂ ಕಾರ್ಯಕರ್ತರಿಂದ ತ್ಯಾಗ ಆರಂಭವಾಗಲಿ. ನಂತರ ಬೇರೆಯವರಿಗೆ ತ್ಯಾಗದ ಸಲಹೆ […]

Continue Reading

ಯಶಸ್ವಿಯಾಗಿ ಸಂಪನ್ನಗೊಂಡ ಅಭೂತಪೂರ್ವ, ಐತಿಹಾಸಿಕ ‘ಬಿಎಸ್ ವೈ ಅಭಿಮಾನೋತ್ಸವ’ ; ಎಲ್ಲರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ ಸಂಸದ ಬಿ.ವೈ.ರಾಘವೇಂದ್ರ..!

ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರ ಮೇಲಿರುವ ಅಚಲವಾದ ಪ್ರೀತಿ, ಅಭಿಮಾನ ಮತ್ತು ವಿಶ್ವಾಸದಿಂದ, ದೂರವನ್ನಾಗಲಿ, ಸುಡುವ ಬಿಸಿಲನ್ನಾಗಲಿ ಲೆಕ್ಕಿಸದೆ ನಾಡಿನ ಮೂಲೆ ಮೂಲೆಗಳಿಂದ ಚಿತ್ರದುರ್ಗಕ್ಕೆ ಬಂದ ಅಭಿಮಾನಿಗಳು, ಕಾರ್ಯಕರ್ತರು, ಸ್ವಯಂಸೇವಕರು, ತಾಯಂದಿರು, ಸೋದರಿಯರು, ಶ್ರೀಸಾಮಾನ್ಯರ ಜನಸಾಗರದ ಸಂಪೂರ್ಣ ಸಹಕಾರದಿಂದ ತಮ್ಮ ನಾಯಕನ ಅಭಿಮಾನೋತ್ಸವ, ನಾಡಿನ ಜನೋತ್ಸವವಾಗಿ ಮಾರ್ಪಟ್ಟಿತು. ಪೂಜ್ಯ ತಂದೆಯವರ ಮೇಲೆ ಜನರ ಅತಿಶಯವಾದ ಪ್ರೀತಿ, ವಿಶ್ವಾಸಗಳಿಗೆ ಪ್ರತಿಯಾಗಿ ನಾವು ಏನು ಹೇಳುವುದು ಸಾಧ್ಯ, ಆಗಮಿಸಿದ ಪ್ರತಿಯೊಬ್ಬ ಅಭಿಮಾನಿಗಳಿಗೂ, ಅತ್ಯಂತ ವಿನೀತ ಭಾವದಿಂದ ಹೃದಯತುಂಬಿ ಸಾಷ್ಟಾಂಗ ನಮನಗಳನ್ನು ಸಲ್ಲಿಸುತ್ತೇನೆ ಎಂದು […]

Continue Reading

ಪ್ರಧಾನಿ ದೇಶ ನಡೆಸಲು ಅಸಮರ್ಥ ; ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ..!

“12 ವರ್ಷಗಳಲ್ಲಿ ದೇಶವನ್ನು ಇಂತಹ ಸ್ಥಿತಿಗೆ ತಳ್ಳಲಾಗಿದೆ. ಈಗ ಜನರಿಗೆ ಏನು ಖರೀದಿಸಬೇಕು, ಎಲ್ಲಿ ಹೋಗಬೇಕು ಎಂಬುದನ್ನೂ ಸರ್ಕಾರ ಹೇಳುವ ಪರಿಸ್ಥಿತಿ ಬಂದಿದೆ. ತಮ್ಮ ವೈಫಲ್ಯದಿಂದ ತಪ್ಪಿಸಿಕೊಳ್ಳಲು ಸರ್ಕಾರ ಹೊಣೆಗಾರಿಕೆಯನ್ನು ಜನರ ಮೇಲೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಇವರು ರಾಜಿ ಮಾಡಿಕೊಂಡ ಪ್ರಧಾನಮಂತ್ರಿಯಾಗಿದ್ದು, ದೇಶ ನಡೆಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆಂದು ಕಿಡಿಕಾರಿದ್ದಾರೆ. ‘ಇನ್ನೊಂದ್ ವರ್ಷ ಖರೀದಿ ಮಾಡ್ಬೇಡಿ..’ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಪಾತಾಳಕ್ಕೆ ಕುಸಿದ ಚಿನ್ನಾಭರಣ ಷೇರು Advertisement ಇದರ ನಡುವೆ ಕಾಂಗ್ರೆಸ್ ಪಕ್ಷವೂ ಪ್ರಧಾನಿ ವಿರುದ್ಧ ತೀವ್ರ […]

Continue Reading

ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ

ಕೋಲ್ಕತ್ತಾದಲ್ಲಿ ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಬಿಜೆಪಿ ಶಾಸಕರ ಸಭೆಯಲ್ಲಿ ಸುವೇಂದು ಅಧಿಕಾರಿಯನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಮಿತ್ ಶಾ ಅವರು ಅಧಿಕಾರಿ ಅವರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ‘ಸುವೇಂದು ಅವರು ಸಂಘರ್ಷದ ಹಾದಿಯಲ್ಲಿ ಬಂದವರು. ಅವರಿಗೆ ಆಡಳಿತದ ಅನುಭವವಿದೆ.ಬಂಗಾಳದ ಜನತೆಯ ಆಸೆಗಳನ್ನು ಪೂರ್ಣಗೊಳಿಸಲು ಅವರು ಸಮರ್ಥರಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಿಯೋಜಿತ ಸಿಎಂ ಸುವೇಂದು ಅಧಿಕಾರಿ ಅವರು ಈಗಾಗಲೇ ರಾಜ್ಯಪಾಲ ಆರ್.ಎನ್. […]

Continue Reading

ಪಶ್ಚಿಮ ಬಂಗಾಳ | ರಾಜಿನಾಮೆ ಕೊಡದ ದೀದಿಗೆ ಮಂತ್ರಿಮಂಡಳವನ್ನೇ ವಿಸರ್ಜಿಸಿ ಶಾಕ್ ನೀಡಿದ ರಾಜ್ಯಪಾಲ ಆರ್‌ಎನ್ ರವಿ!

ಸಾಮಾನ್ಯವಾಗಿ, ರಾಜ್ಯಪಾಲರು ಮುಖ್ಯಮಂತ್ರಿಯ ಸಲಹೆಯ ಮೇರೆಗೆ ಹಾಗೆ ಮಾಡುತ್ತಾರೆ. ಆದಾಗ್ಯೂ, ಪ್ರಸ್ತುತ ಸಂದರ್ಭಗಳಲ್ಲಿ, ಸರ್ಕಾರ ಮತ್ತು ರಾಜಭವನದ ನಡುವಿನ ಸಂಘರ್ಷ ಉತ್ತುಂಗದಲ್ಲಿದ್ದಾಗ, ರಾಜ್ಯಪಾಲರು ಮಮತಾ ಬ್ಯಾನರ್ಜಿ ಸರ್ಕಾರದ ಅಸ್ತಿತ್ವವನ್ನು ಕೊನೆಗೊಳಿಸಲು ಈ ವೀಟೋ-ತರಹದ ಅಧಿಕಾರವನ್ನು ಬಳಸಿದರು. ಮುಖ್ಯ ಕಾರ್ಯದರ್ಶಿ ದುಷ್ಯಂತ್ ನರಿಯಾಲ ಅವರು ಹೊರಡಿಸಿದ ಅಧಿಸೂಚನೆಯು ಈ ನಿರ್ಧಾರವನ್ನು ರಾಜಭವನದ ನೇರ ಆದೇಶದ ಮೇರೆಗೆ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸುತ್ತದೆ. ಐತಿಹಾಸಿಕ ವಜಾ: ರಾಜ್ಯಪಾಲ ಆರ್.ಎನ್. ರವಿ ಅವರು ಮಮತಾ ಬ್ಯಾನರ್ಜಿ ಅವರ ಸಂಪುಟವನ್ನು ವಜಾಗೊಳಿಸಿದ್ದಾರೆ. ಮೇ 7, […]

Continue Reading

ಪಶ್ಚಿಮ ಬಂಗಾಳ | ಸಿಎಂ ಅಭ್ಯರ್ಥಿ ಸುವೇಂದು ಅಧಿಕಾರಿ ಪಿಎ ಚಂದ್ರ ನಾಥ್ ದತ್ ಗುಂಡೆಟಿಗೆ ಬಲಿ!

ಬಿಜೆಪಿ ನಾಯಕ ಸದ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥರನ್ನು ಬುಧವಾರ ತಡರಾತ್ರಿ ಗುಂಡಿಕ್ಕಿ ಕೊಲೆ ಮಾಡಲಾಗಿದ್ದು, ಈ ಬಗ್ಗೆ ಸುವೇಂದು ಅಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಆಪ್ತನನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಈ ಹತ್ಯೆ ಘಟನೆ ನಡೆದ ಕೆಲ ಗಂಟೆಗಳ ನಂತರ ಆಸ್ಪತ್ರೆಗೆ ತೆರಳಿದ ಸುವೇಂದು ಅಧಿಕಾರಿ, ಹತ್ಯೆಯನ್ನು ‘ಶೀತಲ ರಕ್ತದ ಕೊಲೆ’ ಮತ್ತು ‘ಕ್ರೂರ ಕೊಲೆ’ ಎಂದು ಕರೆದಿದ್ದಾರೆ. ಆಸ್ಪತ್ರೆಯ ಹೊರಗೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ದಾಳಿ […]

Continue Reading

ಶೃಂಗೇರಿ | ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯ ಡಿ.ಎನ್. ಜೀವರಾಜ್​ಗೆ ಜಯ

ಮರು ಎಣಿಕೆಯಲ್ಲಿ ಗೆಲುವಿನ ಜಯಭೇರಿ ಬಾರಿಸಿದ ಬೆನ್ನಲ್ಲೇ ದೇವಸ್ಥಾನದ ಸಮೀಪವೇ ಬಿಜೆಪಿ ಕಾರ್ಯಕರ್ತರು ಜೀವರಾಜ್ ಅವರಿಗೆ ಅಭಿನಂದನೆ ಸಲ್ಲಿಸಿ ಸಂಭ್ರಮಿಸಿದರು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರ ಅಂಚೆ ಮತದಾನದ ಮರು ಎಣಿಕೆ ಕುರಿತಂತೆ ಮೊನ್ನೆ, ಮತ ಎಣಿಕೆ ಕಾರ್ಯವನ್ನು ನಗರದ ಐಡಿಎಸ್​​ಜಿ ಕಾಲೇಜಿನಲ್ಲಿ ಮಾಡಲಾಯಿತು. ಈ ವೇಳೆ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್​ಗೆ ಚುನಾವಣಾ ಅಧಿಕಾರಿ ಗೌರವ ಕುಮಾರ್ ಶೆಟ್ಟಿ ಸಲ್ಲಿಕೆ ಮಾಡಿದ್ದರು.ಈಗ ಉಚ್ಚ ನ್ಯಾಯಾಲಯದ ಆದೇಶದಂತೆ 123 – ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ […]

Continue Reading

ಎಕ್ಸಿಟ್​ ಪೋಲ್ ​: ಪ.ಬಂಗಾಳ, ಅಸ್ಸಾಂ,ಪುದುಚೇರಿಯಲ್ಲಿ
ಬಿಜೆಪಿ, ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಯುಡಿಎಫ್​ಗೆ ಅಧಿಕಾರ

ದೇಶದ ಗಮನ ಸೆಳೆದಿರುವ, ಭಾರೀ ಜಿದ್ದಾಜಿದ್ದಿನ ಕಣವಾಗಿರುವ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ. ಪೋಲ್​ ಆಫ್​ ಎಕ್ಸಿಟ್​ ಸಮೀಕ್ಷೆಯ ಪ್ರಕಾರ, ಟಿಎಂಸಿ 144, ಬಿಜೆಪಿ 143 ಕಾಂಗ್ರೆಸ್​ 5 ಸ್ಥಾನ ಪಡೆದರೆ, ಪಿ ಮಾರ್ಕ್​ ಸಮೀಕ್ಷೆಯ ಪ್ರಕಾರ ಟಿಎಂಸಿ 118-138, ಬಿಜೆಪಿ 150-175 ಸ್ಥಾನ ಪಡೆಯಲಿದೆ. ಮ್ಯಾಟ್ರೀಜ್​ ಸಮೀಕ್ಷೆ ಹೇಳುವಂತೆ ಟಿಎಂಸಿ 125-140, ಬಿಜೆಪಿ 146-161 ಸ್ಥಾನ ಪಡೆದು ಅಧಿಕಾರಕ್ಕೆ ಬರಲಿದೆ ಎಂದಿದೆ. ಪೀಪಲ್ಸ್​​ ಪಲ್ಸ್​ ಪ್ರಕಾರ, […]

Continue Reading

ಪುತ್ತೂರು | ಬಿಜೆಪಿ ಮುಖಂಡನ ಮಗನ ಅತ್ಯಾಚಾರ ಪ್ರಕರಣ ; ಸಂತ್ರಸ್ತೆಗೆ ಪ್ರತಿ ತಿಂಗಳು ಪಾಲನೆ ಹಣ ನೀಡಲು ಹೈಕೋರ್ಟ್ ಆದೇಶ

ಇಂದು ಕೃಷ್ಣ ಜೆ. ರಾವ್ ಅವರು ಪ್ರಕರಣ ರದ್ದುಪಡಿಸಲು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈ ಮಧ್ಯಂತರ ಆದೇಶವನ್ನು ನೀಡಿತು.ಇದೇ ವೇಳೆ, ಮೊದಲ ಕಂತಿನ 75 ಸಾವಿರ ರೂಪಾಯಿಯನ್ನು ಒಂದು ವಾರದೊಳಗೆ ಮಗುವಿನ ತಾಯಿಗೆ ಪಾವತಿಸಿ, ನಂತರ ಪ್ರತೀ ತಿಂಗಳು ಪಾವತಿ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ. ಈ ಷರತ್ತಿನ ಆಧಾರದಲ್ಲಿ, ಮುಂದಿನ ಆದೇಶಗಳವರೆಗೆ ಪ್ರಕರಣದ ಎಲ್ಲಾ ಮುಂದಿನ ವಿಚಾರಣೆಗಳನ್ನು ಹೈಕೋರ್ಟ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

Continue Reading