ಪುತ್ತೂರು | ಬಿಜೆಪಿ ಮುಖಂಡನ ಮಗನ ಅತ್ಯಾಚಾರ ಪ್ರಕರಣ ; ಸಂತ್ರಸ್ತೆಗೆ ಪ್ರತಿ ತಿಂಗಳು ಪಾಲನೆ ಹಣ ನೀಡಲು ಹೈಕೋರ್ಟ್ ಆದೇಶ

ದಕ್ಷಿಣ ಕನ್ನಡ

ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮಾಜಿ ನಾಯಕ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ಮುಂದಿನ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯನ್ನು ನೀಡಿದೆ.

ಮದುವೆಯಾಗುವ ಭರವಸೆ ನೀಡಿ ಯುವತಿಯನ್ನು ಗರ್ಭಿಣಿಯಾಗಿಸಿದ್ದಾನೆ ಎಂಬ ಆರೋಪ ಈತನ ಮೇಲಿದೆ.

ನ್ಯಾಯಾಲಯವು ಆರೋಪಿ ಕೃಷ್ಣ ಜೆ ರಾವ್ ಗೆ ಸಂತ್ರಸ್ತೆ ಹಾಗೂ ಮಗುವಿನ ಪಾಲನೆಗಾಗಿ ತಿಂಗಳಿಗೆ 75 ಸಾವಿರ ರೂಪಾಯಿ ವೈಯಕ್ತಿಕವಾಗಿ ಅಥವಾ ತನ್ನ ಪೋಷಕರ ಮೂಲಕ ಪಾವತಿಸಲು ಹೈಕೋರ್ಟ್ ಆದೇಶಿಸಿದೆ.ಯುವತಿಗೆ ಪ್ರತಿ ತಿಂಗಳು ಪಾಲನೆ ಹಣ ನೀಡಲು ಹೈಕೋರ್ಟ್ ಆದೇಶಿಸಿದೆ.

ಇಂದು ಕೃಷ್ಣ ಜೆ. ರಾವ್ ಅವರು ಪ್ರಕರಣ ರದ್ದುಪಡಿಸಲು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈ ಮಧ್ಯಂತರ ಆದೇಶವನ್ನು ನೀಡಿತು.ಇದೇ ವೇಳೆ, ಮೊದಲ ಕಂತಿನ 75 ಸಾವಿರ ರೂಪಾಯಿಯನ್ನು ಒಂದು ವಾರದೊಳಗೆ ಮಗುವಿನ ತಾಯಿಗೆ ಪಾವತಿಸಿ, ನಂತರ ಪ್ರತೀ ತಿಂಗಳು ಪಾವತಿ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.

ಈ ಷರತ್ತಿನ ಆಧಾರದಲ್ಲಿ, ಮುಂದಿನ ಆದೇಶಗಳವರೆಗೆ ಪ್ರಕರಣದ ಎಲ್ಲಾ ಮುಂದಿನ ವಿಚಾರಣೆಗಳನ್ನು ಹೈಕೋರ್ಟ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

Author