ಶಿವಮೊಗ್ಗ | ಫೇಸ್‌ಬುಕ್‌ನ ಜಾಹೀರಾತು ನಂಬಿ ಲಕ್ಷಾಂತರ ರೂಪಾಯಿ ವಂಚನೆಗೋಳಗಾದ ವ್ಯಕ್ತಿ!
ಇದೇ ಸಮಯವನ್ನು ಬಳಸಿಕೊಂಡು ಮಾರ್ಕೆಟಿಂಗ್‌ಗೆ ಇಳಿದ ವಂಚಕರು, ನಿಮ್ಮ ಹಳೆ ನೋಟಿಗೆ ನಾವು ಬರೋಬ್ಬರಿ 90,00,000 ರೂಪಾಯಿ. ಮೌಲ್ಯ ನಿಗದಿ ಮಾಡಿದ್ದೇವೆ ಎಂದು ಆಸೆ ಹುಟ್ಟಿಸಿದ್ದಾರೆ. ಅಷ್ಟೇ ಅಲ್ಲದೆ, ಇದಾದ ನಂತರ ಹಣ ಕೀಳುವ ಪ್ಲಾನ್ ಮಾಡಿದ್ದಾರೆ. ಅದೇನೆಂದರೆ, ನಾವು ನಿಗದಿಪಡಿಸಿದ ಹಣ ನಿಮ್ಮ ಕೈ ಸೇರಬೇಕೆಂದರೆ ಪ್ರೊಸೆಸಿಂಗ್ ಚಾರ್ಜ್ 750ರೂಪಾಯಿ. ಪಾವತಿಸುವಂತೆ ತಿಳಿಸಿದ್ದಾರೆ. ಅದರಂತೆ ದೂರುದಾರರು 17-06-2026 ರಂದು ವಂಚಕರು ಕಳುಹಿಸಿದ ಸ್ಕ್ಯಾನರ್‌ಗೆ 750 ರೂಪಾಯಿ. ಹಣ ಪಾವತಿಸಿದ್ದು, ನಂತರದಲ್ಲಿ ಹಣ ಪಡೆಯಲು ವಿವಿಧ ಟ್ಯಾಕ್ಸ್ […]
Continue Readingಫಿಫಾ ವಿಶ್ವಕಪ್ 2026 : ಸ್ಪೇನ್ ವಿಶ್ವ ಚಾಂಪಿಯನ್!
ಗೆಲುವು ತಂದುಕೊಟ್ಟ ಏಕೈಕ ಗೋಲು: ನಿಯಮಿತ 90 ನಿಮಿಷಗಳಲ್ಲಿ ಯಾವುದೇ ತಂಡಕ್ಕೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಪಂದ್ಯ ಹೆಚ್ಚುವರಿ ಸಮಯಕ್ಕೆ ಸಾಗಿದ ಬಳಿಕ 106ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ಸ್ಪೇನ್ ಪರ ನಿರ್ಣಾಯಕ ಗೋಲು ಬಾರಿಸಿದರು. ನಿಕೊ ವಿಲಿಯಮ್ಸ್ ನೀಡಿದ ಹೆಡರ್ ಪಾಸ್ ಅನ್ನು ಟೊರೆಸ್ ಜಾಲಕ್ಕೆ ಸೇರಿಸಿ ಸ್ಪೇನ್‌ಗೆ ಅಮೂಲ್ಯ ಮುನ್ನಡೆ ತಂದುಕೊಟ್ಟರು. ಕೊನೆಯ ಕ್ಷಣದವರೆಗೂ ಅರ್ಜೆಂಟೀನಾ ಸಮಬಲ ಸಾಧಿಸಲು ಪ್ರಯತ್ನಿಸಿದರೂ, ಸ್ಪೇನ್‌ನ ಸಂಘಟಿತ ರಕ್ಷಣೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಈ ಫೈನಲ್ ಅನ್ನು ಫುಟ್‌ಬಾಲ್ ದಿಗ್ಗಜ […]
Continue Readingಶಿವಮೊಗ್ಗ | ಶಂಕರರ ವಿರುದ್ಧ ಅವಹೇಳನಕಾರಿ ಕಮೆಂಟ್ ; ವೆಬ್ ಸೈಟ್ ಗಳ ವಿರುದ್ಧ ಕಾನೂನು ಕ್ರಮವಾಗಲಿ : ಶ್ರೀಶಂಕರ ಚೈತನ್ಯ ವೇದಿಕೆ ಆಗ್ರಹ..!
ಯಾರು ಜಗತ್ತಿನ ಸತ್ಯಮಾರ್ಗವನ್ನು ತೋರಿಸಿ ಧರ್ಮವನ್ನು ರಕ್ಷಿಸಿದರೋ ಅವರನ್ನೇ ನಿಂದಿಸುವುದು ಯಾರಿಗೂ ಶೋಭೆ ತರುವಂಥಹದ್ದಲ್ಲ. ಅದೈತ ಸಿದ್ಧಾಂತದ ಪ್ರತಿಪಾದಕರು ಅಸಹಾಯಕರಲ್ಲ. ಶ್ರೀಶಂಕರರು ಹಾಗೂ ಕ್ಷೇತ್ರಗಳ ಬಗ್ಗೆ ಹಗುರವಾಗಿ ಮಾತನಾಡಬಾರದು. ಅವರವರ ತತ್ವ ಸಿದ್ಧಾಂತವನ್ನು ಧರ್ಮಾನುಸಾರ ಅನುಸರಿಸಸಬೇಕೆಂದರು.
Continue Readingಶಿವಮೊಗ್ಗ | ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಜೆಡಿಎಸ್ ಕಾರ್ಯಕರ್ತರು ಶ್ರದ್ಧಾಂಜಲಿ
ಸಭೆಯಲ್ಲಿ ಜಿಲ್ಲಾ ಮತ್ತು ನಗರ ಘಟಕದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ದಿವಂಗತರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಲಾಯಿತು. ಶಿವಮೊಗ್ಗ ನಗರ ಜೆಡಿಎಸ್ ನಿಂದ ಇಂದು ಮಾತೃಶ್ರೀ ಅಮ್ಮ ಚೆನ್ನಮ್ಮದೇವೇಗೌಡರವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಮಾತೃಶ್ರೀ ಅಮ್ಮ ಚೆನ್ನಮ್ಮನವರು ನಮ್ಮನ್ನು ಅಗಲಿದ್ದರೂ, ಅವರ ಪ್ರೀತಿ, ಮಮತೆ ಮತ್ತು ಆದರ್ಶಗಳು ಸದಾ ನಮ್ಮ ಹೃದಯದಲ್ಲಿ ಜೀವಂತವಾಗಿರುತ್ತವೆ.ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುವ ಮೂಲಕ ನಗರ ಜೆಡಿಎಸ್ ಶ್ರದ್ದಾಂಜಲಿ ಅರ್ಪಿಸಿದ್ದಾರೆ. ಹಾಗೂ ಕುಟುಂಬ ಸದಸ್ಯರು […]
Continue Readingತಮ್ಮ ತಾಯಿಯನ್ನು ಶಿವನೇ ತನ್ನಲ್ಲಿಗೆ ಕರೆಸಿಕೊಂಡಿದ್ದಾನೆ : ಭಾವುಕ ಟ್ವೀಟ್ ಮಾಡಿದ ಕುಮಾರಸ್ವಾಮಿ..!
ಗಂಡ ಮಾಜಿ ಪಿಎಂ, ಒಬ್ಬ ಮಗ ಮಾಜಿ ಸಿಎಂ, ಇನ್ನೊಬ್ಬ ಮಗ ಮಾಜಿ ಸಚಿವ. ಇಡೀ ರಾಜಕೀಯ ನಾಯಕರನ್ನು ತನ್ನ ಅಕ್ಕಪಕ್ಕದಲ್ಲೇ ಇರಿಸಿಕೊಂಡರೂ ಚೆನ್ನಮ್ಮ ದೇವೇಗೌಡರು ಹೊರಗೆ ಕಾಣಿಸಿಕೊಳ್ಳುತ್ತಿದ್ದದ್ದು ಬಹಳ ವಿರಳ. ದೇವೇಗೌಡರ ಜೊತೆ ಒಮ್ಮೊಮ್ಮೆ ಮಗ ಕುಮಾರಸ್ವಾಮಿ ಜೊತೆ ಫೋಟೋದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮೊಮ್ಮಕ್ಕಳು, ಮರಿಮೊಮ್ಮಕ್ಕಳನ್ನು ಎತ್ತಿ ಆಡಿಸಿದ ಹಿರಿಯ ಜೀವ ಅದು. ಎಚ್‌ಡಿ ದೇವೇಗೌಡರ ಜೊತೆ 72 ವರ್ಷಗಳ ತುಂಬು ಸಂಸಾರ ನಡೆಸಿದ್ದ ಚೆನ್ನಮ್ಮ ಶನಿವಾರ ಸಂಜೆ 4 ಗಂಟೆಗೆ ವಿಧಿವಶರಾದರು.
Continue Readingಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಹೃದಯಾಘಾತದಿಂದ ವಿಧಿವಶ
ಹೆಚ್‌ಡಿ ದೇವೇಗೌಡ ಮತ್ತು ಚೆನ್ನಮ್ಮಾ ದಂಪತಿಗೆ ಆರು ಮಕ್ಕಳಿದ್ದು, ರಾಜಕೀಯ-ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಹೆಚ್‌ಡಿ ರೇವಣ್ಣ (ಹಿರಿಯ ಮಗ) ಹೆಚ್‌ಡಿ ಕುಮಾರಸ್ವಾಮಿ (ಎರಡನೇ ಮಗ) ಕೇಂದ್ರ ಸಚಿವ ಹೆಚ್‌ಡಿ ಬಾಲಕೃಷ್ಣ (ಮೂರನೇ ಮಗ) ಉದ್ಯಮಿ ಹೆಚ್‌ಡಿ ರಮೇಶ್ (ನಾಲ್ಕನೇ ಮಗ) ವೈದ್ಯಕೀಯ ವಿಭಾಗ ಹೆಚ್‌ಡಿ ಅನುಸೂಯಾ (ಮಗಳು) ಹೆಚ್‌ಡಿ ಶೈಲಜಾ (ಮಗಳು).
Continue Readingಶಿವಮೊಗ್ಗ | ಡಿಜಿಟಲ್ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾರೀ ಭ್ರಷ್ಟಾಚಾರ : ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಗಂಭೀರ ಆರೋಪ
ಆದರೆ, ಈ ಡಿಜಿಟಲ್ ವ್ಯಾಲ್ಯೂವೇಶನ್‌ನಲ್ಲಿ ವಿಪರೀತ ದುಂದುವೆಚ್ಚ ಮಾಡಲಾಗುತ್ತಿದೆ. ಇಲ್ಲಿ ಪ್ರತಿ ಬುಕ್‌ಲೆಟ್ ಮೌಲ್ಯಮಾಪನಕ್ಕೆ ಬರೋಬ್ಬರಿ 54 ರೂಪಾಯಿ ಚಾರ್ಜ್ ಮಾಡಲಾಗುತ್ತಿದ್ದು, ಒಂದು ಸೆಮಿಸ್ಟರ್ ಪ್ರಕ್ರಿಯೆ ಮುಗಿಸಲು ಬರೋಬ್ಬರಿ 2.36 ಕೋಟಿ ರೂಪಾಯಿ ಹಣವನ್ನು ವೆಚ್ಚ ಮಾಡಲಾಗಿದೆ ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದರು.ಡಿಜಿಟಲ್ ವ್ಯಾಲ್ಯೂವೇಶನ್ ಜಾರಿಗೆ ಬಂದರೆ ಪಾರದರ್ಶಕತೆ ಇರುತ್ತದೆ, ಮಕ್ಕಳಿಗೆ ಬೇಗ ಅಂಕಪಟ್ಟಿ ಸಿಗುತ್ತದೆ ಎಂಬ ಆಶಯ ನಮ್ಮದಾಗಿತ್ತು. ಆದರೆ, 2024-25 ಹಾಗೂ 2025-26ನೇ ಸಾಲಿನ ಅಂಕಪಟ್ಟಿಗಳು ಇದುವರೆಗೂ ವಿದ್ಯಾರ್ಥಿಗಳ ಕೈಸೇರಿಲ್ಲ. ಈ ವಿಳಂಬಕ್ಕೆ ಕಾರಣವೇನು […]
Continue Readingಶಿವಮೊಗ್ಗ ನಗರದಲ್ಲಿ ನೂತನ ‘ಆಡಳಿತ ಸೌಧ’ ನಿರ್ಮಾಣಕ್ಕೆ ಸಚಿವರಿಗೆ ಚೇತನ್ ಕೆ. ಗೌಡ ಮನವಿ
ಇದರಿಂದಾಗಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆಯನ್ನು ಸರ್ಕಾರವೇ ಭರಿಸಬೇಕಾಗಿದ್ದು, ಬೊಕ್ಕಸಕ್ಕೆ ಅನಗತ್ಯ ಆರ್ಥಿಕ ಹೊರೆಯಾಗಿದೆ. ಅಷ್ಟೇ ಅಲ್ಲದೆ, ಈ ಕಚೇರಿಗಳು ನಗರದ ವಿವಿಧೆಡೆ ಹರಿದು ಹಂಚಿಹೋಗಿರುವುದರಿಂದ ಸಾರ್ವಜನಿಕರು ಹಾಗೂ ರೈತರು ಒಂದೇ ದಿನದಲ್ಲಿ ವಿವಿಧ ಇಲಾಖೆಗಳ ಕೆಲಸಗಳನ್ನು ಮುಗಿಸಿಕೊಳ್ಳಲು ತೀವ್ರ ಪರದಾಡುವಂತಾಗಿದೆ. ನೂತನ ಆಡಳಿತ ಸೌಧ ನಿರ್ಮಾಣಕ್ಕಾಗಿ ಗುರುತಿಸಲಾಗಿರುವ ಜಾಗವು ಶಿವಮೊಗ್ಗ ಮುಖ್ಯ ಬಸ್ ನಿಲ್ದಾಣದಿಂದ ಕೇವಲ 500 ಮೀಟರ್ ದೂರದಲ್ಲಿದೆ. ಇದು ಜಿಲ್ಲೆಯ ವಿವಿಧ ಭಾಗಗಳಿಂದ ಬರುವ ಜನಸಾಮಾನ್ಯರಿಗೆ ಅತ್ಯಂತ ಸುಲಭವಾಗಿ ತಲುಪಲು ಯೋಗ್ಯವಾದ […]
Continue Reading




