ಬಿ.ಸಿ. ರೋಡ್‌ ಲಾವಣ್ಯಾ ಹತ್ಯೆ ಪ್ರಕರಣ ; ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ಪ್ರಚೋದನಕಾರಿ ಪೋಸ್ಟ್ ಪ್ರಸಾರ ಮಾಡಿದವರ ಮೇಲೆ ದಾಖಲಾಯಿತು ಪ್ರಕರಣ..!

ಚೇತನ್ ಬೆಳ್ಳಾಡ ಎಂಬ ಪೇಸ್ ಬುಕ್ ಖಾತೆಯಲ್ಲಿ ಪ್ರಕರಣದ ಆರೋಪಿಯ ಪೋಟೋವನ್ನು ಕಾಂಗ್ರೆಸ್ ಪಾರ್ಟಿಯ ಕಾರ್ಯಕರ್ತ ಎಂದು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಮೇಲಿನ 3 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ಶಿವಮೊಗ್ಗ | ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ : ಜು. 17 ರ ಪ್ರಗತಿ

ಶಿವಮೊಗ್ಗ ಗ್ರಾಮಾಂತರ: ಒಟ್ಟು 2,20,250 ಮತದಾರರಿದ್ದು, 2,20,250 ಶೇ. 100 ಇ-ಫಾರ್ಮ್ ವಿತರಿಸಲಾಗಿದೆ. 158001 ಅಂದರೆ ಶೇ. 71.74 ಡಿಜಿಟಲೀಕರಣಗೊಳಿಸಲಾಗಿದೆ.ಭದ್ರಾವತಿ: 2,14,907 ಮತದಾರರಿದ್ದು, 2,14,907 ಶೇ. 100 ಇ-ಫಾರ್ಮ್ ವಿತರಿಸಲಾಗಿದ್ದು, 110420 ಫಾರ್ಮ್ ಅಂದರೆ ಶೇ 4.12 ಡಿಜಿಟಲೀಕರಣಗೊಂಡಿದೆ.ಶಿವಮೊಗ್ಗ ನಗರ: 2,77,098 ಮತದಾರರನ್ನು ಹೊಂದಿದ್ದು, 275778 ಶೇ. 99.52 ಇ-ಫಾರ್ಮ್ ವಿತರಣೆಯಾಗಿದೆ. 144251 ಫಾರ್ಮ್ ಶೇ.52.06ಡಿಜಿಟಲೀಕರಣಗೊಂಡಿದೆ.ತೀರ್ಥಹಳ್ಳಿ: 1,92,314 ಮತದಾರರಿದ್ದು, 192113 ಶೇ. 99.90 ಇ-ಫಾರ್ಮ್ ವಿತರಿಸಲಾಗಿದೆ. 140863 ಫಾರ್ಮ್ ಶೇ. 73.25 ಡಿಜಿಟಲೀಕರಣಗೊಂಡಿದೆ. ಶಿಕಾರಿಪುರ 2,06,415 ಮತದಾರರಿದ್ದು,2,06,415 […]

Continue Reading

ಶಿವಮೊಗ್ಗ | ಶಾಸಕ ಚನ್ನಬಸಪ್ಪರಿಂದ ಸೌಲಭ್ಯಗಳ ವಿತರಣೆ : 105 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಹಾಗೂ ಉದ್ಯೋಗ ಸಾಲ ವಿತರಣೆ

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, “ನಮ್ಮ ಅವಧಿಯಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ, ಅರ್ಹತೆ ಹೊಂದಿರುವ ನೈಜ ಫಲಾನುಭವಿಗಳಿಗೆ ನೇರವಾಗಿ ಸರ್ಕಾರದ ಸೌಲಭ್ಯಗಳು ತಲುಪುವಂತೆ ಪಾರದರ್ಶಕ ವ್ಯವಸ್ಥೆ ಕಲ್ಪಿಸಲಾಗಿದೆ. ಕರ್ತವ್ಯ ಭವನವು ಸದಾ ಸಾರ್ವಜನಿಕರ ಹಿತರಕ್ಷಣೆಗೆ ಮತ್ತು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಕೆಲಸ ಕಾರ್ಯಗಳಿಗೆ ಮುಕ್ತವಾಗಿರುತ್ತದೆ” ಎಂದರು. ಇದೇ ವೇಳೆ ಸೌಲಭ್ಯಗಳನ್ನು ಸ್ವೀಕರಿಸಿದ ಫಲಾನುಭವಿಗಳು ಶಾಸಕರ ತ್ವರಿತ ಸ್ಪಂದನೆ ಹಾಗೂ ಕಾಳಜಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ […]

Continue Reading

ಬಿಜೆಪಿ ಮೈತ್ರಿ ಬಿಟ್ಟು ಹೊರಗೆ ಬನ್ರಿ ನೋಡೋಣ? : ಕೇಂದ್ರ ಸಚಿವ ಎಚ್‌ಡಿಕೆಗೆ, ಮಾಜಿ ಸಚಿವ ಚಲುವರಾಯಸ್ವಾಮಿ ಪಂಥಾಹ್ವಾನ..!?

ತಮಿಳುನಾಡು ಮಾಜಿ ಸಿಎಂ ದಿವಂಗತ ಕರುಣಾನಿಧಿ ಮಗನನ್ನು ನೋಡಿ ಕಲಿತುಕೊಳ್ಳಿ. ದೇವೇಗೌಡರ ಮಗನಾಗಿ ಏನ್ರಿ ನಿಮ್ಮ ಸಾಧನೆ? ಇನ್ನು ಮುಂದೆಯಾದರೂ ಗೌರವದಿಂದ ಮಾತನಾಡಿ ಮಿಸ್ಟರ್ ಕುಮಾರಸ್ವಾಮಿಯವರೇ. ನಮಗೆ ಕುಮಾರಸ್ವಾಮಿ ಅಭಿನಂದನೆ ಬೇಕಾಗಿಲ್ಲ, ಅವರ ಸರ್ಟಿಫಿಕೇಟ್ ಬೇಕಾಗಿಲ್ಲ. ರೇವಣ್ಣಗೆ ಇರುವ ಮನಸ್ಸೂ ನಿಮಗೆ ಇಲ್ಲ ಎಂದು ಕಿಡಿಕಾರಿದರು.

Continue Reading

ಬೆಂಗಳೂರು ಬಳಿ ಎರಡನೆ ವಿಮಾನ‌ ನಿಲ್ದಾಣ ಬೇಡ : ಸಿಎಂಗೆ ವಿಜಯೇಂದ್ರ ಪತ್ರ..!

ಎರಡನೆಯದಾಗಿ, ಬೆಂಗಳೂರು ಈಗಾಗಲೇ ಜನಸಂಖ್ಯೆ, ವಾಹನ ದಟ್ಟಣೆ. ಕುಡಿಯುವ ನೀರು. ಸಂಚಾರ ಮತ್ತು ಪರಿಸರದ ಮೇಲೆ ಅತಿಯಾದ ಒತ್ತಡವನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಬೃಹತ್ ಮೂಲ ಸೌಕರ್ಯ ಯೋಜನೆಯನ್ನು ಬೆಂಗಳೂರಿನ ಸುತ್ತಮುತ್ತಲೇ ಕೇಂದ್ರೀಕರಿಸುವುದು ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುವ ಇರಾದೆ ಎಂದಿದ್ದಾರೆ.

Continue Reading

ದಾವಣಗೆರೆ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಿದ್ದೇಶ್ವರ್​ ಅಸಮಾಧಾನ

ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಬದಲಾವಣೆ ಮಾಡಿದ್ದಾರೆ, ಮಾಡಲಿ. ಆದರೆ ಬದಲಾವಣೆ ಮಾಡುವಾಗ ನಮ್ಮನ್ನು ಒಂದು ಮಾತು ಕೇಳಬೇಕಿತ್ತು. ನಾವು ಮಾಡಿದ್ದ ಪ್ರಧಾನ ಕಾರ್ಯದರ್ಶಿಗಳನ್ನು ಏಕೆ ತೆಗೆದರು ಎನ್ನುವುದು ಗೊತ್ತಾಗಬೇಕಿದೆ. ಮೂರು ತಿಂಗಳಿಗೆ ಪ್ರಧಾನ ಕಾರ್ಯದರ್ಶಿಗಳನ್ನು ತೆಗೆದರೆ ಅದರ ಅರ್ಥ ಏನು?. ಹೀಗೆ ಮಾಡಿದರೆ ನಾವು ಕಾರ್ಯಕರ್ತರಿಗೆ ಮತ್ತು ಜನರಿಗೆ ಏನು ಉತ್ತರ ಕೊಡಬೇಕು?. ರಾಜ್ಯಾಧ್ಯಕ್ಷರೇ ಇದಕ್ಕೆಲ್ಲ ಉತ್ತರ ಕೊಡಬೇಕು ಎಂದು ಹೇಳಿದರು. ನಾನು ರಾಜ್ಯಾಧ್ಯಕ್ಷರಿಗೆ ಕರೆ ಮಾಡಿ ಮಾತನಾಡಿದರೆ ಇವತ್ತು ಅಮವಾಸ್ಯೆ ಇದೆ ಮಾತಾಡೋದು ಬೇಡಾ ಅಂತ […]

Continue Reading

ದೇಶದ ಪ್ರಥಮ ಹೈಡ್ರೋಜನ್ ಚಾಲಿತ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ..!

ಇಂಧನವಾಗಿ ಡೀಸೆಲ್ ಬಳಸುವ ಹಾಗೂ ಕಾರ್ಬನ್ ಹೊರಸೂಸುವ ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ, ಈ ಹೈಡ್ರೋಜನ್ ಚಾಲಿತ ರೈಲು ಭಿನ್ನವಾಗಿದ್ದು, ಕೇವಲ ನೀರಾವಿಯನ್ನು ಮಾತ್ರ ಹೊರಹಾಕುತ್ತದೆ. ಹೀಗಾಗಿ ಇದು ಸಂಪೂರ್ಣವಾಗಿ ಶೂನ್ಯ-ಉದ್ವಾರದ (Zero-emission) ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದೆ. ರೈಲಿನ ಸಂಚಾರಕ್ಕೆ ಅಗತ್ಯವಿರುವ ಗ್ರೀನ್ ಹೈಡ್ರೋಜನ್ ಅನ್ನು ಜಿಂದ್‌ನಲ್ಲಿಯೇ ಸ್ಥಾಪಿಸಲಾದ ಸುಸಜ್ಜಿತ ಘಟಕದಿಂದ ಪೂರೈಸಲಾಗುತ್ತದೆ. ಸುರಕ್ಷಿತ ಸಂಚಾರಕ್ಕಾಗಿ ಈ ಯೋಜನೆಯಲ್ಲಿ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಜರ್ಮನಿ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಇಟಲಿ ಮತ್ತು ಅಮೆರಿಕ ಸೇರಿದಂತೆ ಕೆಲವೇ […]

Continue Reading

ಶಿವಮೊಗ್ಗ | ಹಳಗನ್ನಡ : ಅಭಿವ್ಯಕ್ತಿಯ ಕೌಶಲಗಳ ಶೋಧನೆ ಅಗತ್ಯ

ಹಳಗನ್ನಡ ಕಾವ್ಯಗಳನ್ನು ಕೇವಲ ವಿಚಾರದ ನೆಲೆಯಲ್ಲಿ ನೋಡದೆ ತರಗತಿಯಲ್ಲಿ ಆಕರ್ಷಕವಾಗಿ ಮಂಡಿಸುವ ಕೌಶಲಗಳ ಬಗೆಗೆ ಚಿಂತಿಸಬೇಕಿದೆ. ಕನ್ನಡ ಭಾಷೆಯು ಅನ್ಯ ಭಾಷೆಗಳೊಟ್ಟಿಗೆ ಯಾವ ರೀತಿಯಾದ ಸಂಬಂಧವನ್ನು ಹೊಂದಿದೆ ಎಂಬುದನ್ನು ಹಾಗೂ ಕನ್ನಡ ಸಂಸ್ಕೃತಿಯ ಅಂತಸತ್ವವನ್ನು ಸರಿಯಾದ ಕ್ರಮದಲ್ಲಿ ಅರಿಯುವ ವಿಧಾನಗಳನ್ನು ಇಂದು ರೂಢಿಸಿಕೊಳ್ಳಬೇಕಿದೆ. ಹಳಗನ್ನಡ ಓದು ಅನ್ನುವುದು ತರಗತಿಯಲ್ಲಿ ಕಾವ್ಯವನ್ನು ಆಕರ್ಷಕವಾಗಿ ದಾಟಿಸುವ ಕೌಶಲಗಳ ಶೋಧನೆಗೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಜ್ಯಾದ್ಯಂತ ಪದವಿ ಕಾಲೇಜುಗಳ […]

Continue Reading

ಶಿವಮೊಗ್ಗ | ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ವೇಗ ನೀಡಿ : ಅಧಿಕಾರಿಗಳಿಗೆ ಸಂಸದ ಬಿ.ವೈ ರಾಘವೇಂದ್ರ ಕಟ್ಟುನಿಟ್ಟಿನ ಆದೇಶ

ಕೇಂದ್ರ ಭೂಸಾರಿಗೆ ಮಂತ್ರಾಲಯದ ಪ್ರಾದೇಶಿಕ ಅಧಿಕಾರಿಗಳಾದ ಬಿ ಟಿ ಶ್ರೀಧರ್ ರವರು ಮಾತನಾಡಿ, ಅರಣ್ಯ ಬಿಡುಗಡೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ಆಗುತ್ತಿರುವ ವಿಳಂಬ ಮತ್ತು ಅದರಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ವಿವರವಾಗಿ ಸಭೆಗೆ ವಿವರಿಸಿ, ಈ ತಿಂಗಳ ಅಂತ್ಯದೊಳಗೆ ಎಲ್ಲಾ ಅರಣ್ಯ ಬಿಡುಗಡೆ ಸಂಬಂಧ ಎಲ್ಲಾ ಪ್ರಕ್ರಿಯೆಗಳನ್ನು ಹಾಗೂ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಕಾಮಗಾರಿಯನ್ನು ಅನುಷ್ಟಾನಗೊಳಿಸಲು ಸಹಕಾರ ನೀಡುವಂತೆ ಸಭೆಯಲ್ಲಿ ಹಾಜರಿದ್ದ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕೋರಿದರು. ಸಭೆಯಲ್ಲಿ ಹಾಜರಿದ್ದ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು […]

Continue Reading

ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗಾಗಿ ಪ್ರಧಾನಿ ಮುಂದೆ ಎಚ್.ಡಿ. ದೇವೇಗೌಡರು ಪ್ರತಿಭಟನೆ ನಡೆಸಲಿ : ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಸಲಹೆ

ಹಾಸನ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಲ್ಲಿನ ರೈತರ ಸಮಸ್ಯೆಗಳ ಬಗ್ಗೆ ದೇವೇಗೌಡರು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಪುತ್ರ ವ್ಯಾಮೋಹ ಬಿಟ್ಟು ರಾಜ್ಯದ ಜನರ ಸಮಸ್ಯೆಗಳ ಕಡೆ ಗಮನಹರಿಸಬೇಕು, ಕುಮಾರಸ್ವಾಮಿ, ಮತ್ತು ನಿಖಿಲ್ ಅವರನ್ನು ಮೆಚ್ಚಿಸಲು ಧರಣಿ ಕೂರಬೇಡಿ ಎಂದು ಸಲಹೆ ನೀಡಿದರು.

Continue Reading