ಶಿವಮೊಗ್ಗ, ಕಾಂಗ್ರೆಸ್ ಕಾರ್ಯಕರ್ತರು ಅನುಮತಿ ಇಲ್ಲದೆ ಜಿಲ್ಲಾ ಬಿಜೆಪಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿಕಾರ್ಯಾಲಯದ ಮೇಲೆ ಚಪ್ಪಲಿ ಎಸೆದಿರುವುದು, ಕಛೇರಿಯ ಪೀಠೋಪಕರಣವನ್ನು ಧ್ವಂಸ ಮಾಡಿರುವುದರ ಸಂಬಂಧ ಜಿಲ್ಲಾ ಬಿಜೆಪಿ ಇಂದು ಮಧ್ಯಾಹ್ನ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಲಿಖಿತ ದೂರು ನೀಡಿದೆ.
ಇಂದು ಬೆಳಿಗ್ಗೆ 11.26 ರ ಸುಮಾರಿಗೆ, ಕಾಂಗ್ರೆಸ್ ಕಾರ್ಯಕರ್ತರು ಪೂರ್ವ ಅನುಮತಿ ಇಲ್ಲದೆ, ಜಿಲ್ಲಾ, ನಗರ ಬಿಜೆಪಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ನುಗ್ಗಿದ್ದಾರೆ. ಕಾರ್ಯಾಲಯಕ್ಕೆ ನುಗ್ಗವ ಸಂದರ್ಭದಲ್ಲಿ ಕಛೇರಿಗೆ ನುಗ್ಗುವ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಗಳು ಮತ್ತು ಸರ್ಕಲ್ ಇನ್ಸೆಪೆಕ್ಟರ್‌ಗಳ ಸಮ್ಮುಖದಲ್ಲಿ ಜಿಲ್ಲಾ ಬಿಜೆಪಿಗೆ ನುಗ್ಗಿ ಬಂಟಿಂಗ್ಸ್ ಹರಿದು, ಖರ್ಚಿಯನ್ನು ಮುರಿದು, ದ್ವಿಚಕ್ರ ವಾಹನಗಳಿಗೆ ಹಾನಿ ಮಾಡಿದ್ದಾರೆ ಎಂದು ಮನವಿಯಲ್ಲಿ ವಿವರಿಸಿದೆ.
ಕಾರ್ಯಾಲಯ ಕಾರ್ಯದರ್ಶಿ ಚಿದಾನಂದ ಮತ್ತು ಯುವಮೋರ್ಚಾ ಅಧ್ಯಕ್ಷರು , ಮಾಜಿ ಮಹಾನಗರ ಪಾಲಿಕೆ ಸದಸ್ಯ ರಾಹುಲ್ ಬಿದರೆಯವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಪೋಲೀಸರು ರಕ್ಷಣೆಯನ್ನು ನೀಡುವುದರಲ್ಲಿ ಸಂಪೂರ್ಣ ವಿಫಲವಾಗಿದ್ದಾರೆಂದು ಹೇಳಿದ್ದಾರೆ.

ಪೋಲೀಸ್ ಇಲಾಖೆಯ ವಾಹನದ ಮೇಲೇರಿ ಕಾಂಗ್ರೆಸ್ ಬಾವುಟವನ್ನು ಹಿಡಿದು ಪೊಲೀಸರು ನಮ್ಮ ಬೆಂಬಲಕ್ಕೆ ಇದ್ದಾರೆ ಎಂಬುದರ ಮೂಲಕ ಭಯದ ವಾತಾವರಣವನ್ನು ಸೃಷ್ಠಿಸಿದ್ದಾರೆ.ಕಾಂಗ್ರೆಸ್ ಕಾರ್ಯಕರ್ತರ ಈ ವರ್ತನೆ ಮತ್ತು ಪೋಲೀಸ್ ಇಲಾಖೆಯ ವೈಫಲ್ಯದ ಬಗ್ಗೆ ತನಿಖೆ ನಡೆಸಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ,ನಗರ ಬಿಜೆಪಿ ಒತ್ತಾಯಿಸಿದೆ.
ಕಾಂಗ್ರೆಸ್ ಕಾರ್ಯತರು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿರುವ ಈ ಘಟನೆಯ ಸಂಪೂರ್ಣ ದೃಶ್ಯವನ್ನು ತಮ್ಮದೇ ಇಲಾಖೆಯ ಡೋನ್ ಕ್ಯಾಮರದಲ್ಲಿ ಸೆರೆಯಾಗಿದೆ. ಇದನ್ನು ವೀಕ್ಷಿಸಿ ಕ್ರಮ ಜರುಗಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಗದೀಶ್, ಮಾಜಿ ಜಿಲ್ಲಾಧ್ಯಕ್ಷ ಮೇಘರಾಜ, ನಗರಾಧ್ಯಕ್ಷ ಮೋಹನ್ ರೆಡ್ಡಿ, ವಿಭಾಗ ಪ್ರಭಾರಿ ಸಿದ್ದರಾಮಣ್ಣ ಮೊದಲಾದವರು ಹಾಜರಿದ್ದರು.
