ಶಿವಮೊಗ್ಗ | ಸಾಲ ಬಾಧೆಯಿಂದ ಮನನೊಂದು ಆಟೋ ಚಾಲಕ ಆತ್ಮಹತ್ಯೆಗೆ ಶರಣು

ಶಿವಮೊಗ್ಗ

ಶಿವಮೊಗ್ಗದ ಶರಾವತಿ ನಗರ ಬಡಾವಣೆಯ ನಿವಾಸಿಯಾದ ಮಂಜುನಾಥ್ (35) ತಮ್ಮ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ.

ವೃತ್ತಿಯಲ್ಲಿ ಲಗ್ಗೇಜ್ ಆಟೋ ಚಾಲಕನಾಗಿದ್ದರು.ತಮ್ಮ ಪ್ಯಾಸೆಂಜರ್ ಆಟೋಗಾಗಿ ಸುಮಾರು 30 ಸಾವಿರ ರೂ. ಸಾಲ ಪಡೆದಿದ್ದ ಮಂಜುನಾಥ್ ಎಂದು ತಿಳಿದುಬಂದಿದೆ.

ಸಾಲದ ಹಣವನ್ನು ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಾಲ ನೀಡಿದ್ದವರು ಮಂಜುನಾಥ್ ಅವರು ಆಟೋವನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದರು ಎನ್ನಲಾಗಿದೆ.

ಇದರಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದ ಮಂಜುನಾಥ್ ಎಂದು ತಿಳಿದುಬಂದಿದೆ.

ತಮ್ಮ ಜೀವನೋಪಾಯದ ಮುಖ್ಯ ಆಧಾರವಾಗಿದ್ದ ಆಟೋ ಕೈತಪ್ಪಿದ್ದಕ್ಕೆ ಒತ್ತಡಕ್ಕೆ ಒಳಗಾಗಿದ್ದ ಮಂಜುನಾಥ್ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿಯಾಗಿದೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ ಇಬ್ಬರ ವಿರುದ್ಧ ಕೇಸು ದಾಖಲಿಸಿರುವ ಮೃತ ಮಂಜುನಾಥ್ ಪತ್ನಿ

ಶಿವಮೊಗ್ಗ ದೊಡ್ಡಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Author