ಶಿವಮೊಗ್ಗ ಆಸ್ಥಿ ವರ್ಗಾವಣೆಗೆ ಹೆಚ್ಚುವರಿ ಶುಲ್ಕ ಹದಗೆಟ್ಟರಸ್ತೆ, ಚರಂಡಿ,ಬೀದಿದೀಪಗಳು,ಪ್ಲೆಕ್ಸ್ ಹಾವಳಿ, ಈ ತ್ಯಾಜ್ಯ ವಿಲೇವಾರಿ, ಶುದ್ದಕುಡಿಯುವ ನೀರಿನ ಘಟಕದ ಕಳಪೆ ನಿರ್ವಹಣೆ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನ ಸಾರ್ವಜನಿಕರು ನೇರವಾಗಿ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರೊಂದಿಗೆ ಮುಖಾಮುಖಿಯಾಗಿ ಮನವಿ ಮಾಡಿದರು.

ಶಿವಮೊಗ್ಗದ ಪತ್ರಿಕಾಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಪಾಲಿಕೆ ಆಯುಕ್ತರೊಂದಿಗೆ ಸಾರ್ವಜನಿಕರು ಸಮಸ್ಯೆಗೆ ಪರಿಹಾರ ಪಡೆಯಲು ಮುಖಾಮುಖಿ ಕಾರ್ಯಕ್ರಮ ಆಯೋಜಿಸಿತ್ತು.
ವಿವಿಧ ಸಂಘ,ಸಂಸ್ಥೆ ಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಿ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡರ ಮುಂದೆ ಸಮಸ್ಯೆಗಳ ಸರಮಾಲೆ ಮುಂದಿಟ್ಟು ಉತ್ತರ ಪಡೆದರು.ಕೆಲ ಸಮಸ್ಯೆಗಳಿಗೆ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಸೂಕ್ತವಾಗಿ ಸ್ಪಂದಿಸಿ ಸರಿಪಡಿಸುವ ಭರವಸೆ ನೀಡಿದರು.
ಮತ್ತೆ ಕೆಲವು ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಿ ಪರಿಹಾರ ಒದಗಿಸುವುದಾಗಿ ತಿಳಿಸಿದರು.
ಪರಿಸರ ರಮೇಶ್ ನವುಲೆ ಕರೆಗೆ ಕಲುಷಿತ ನೀರು ಸೇರ್ಪಡೆಯಾಗುತ್ತಿದೆ. ಹೂಳೆತ್ತುವ ಅಭಿವೃದ್ದಿ ಕಾರ್ಯ ವಿಳಂಬ ಪ್ರಸ್ತಾಪಿಸಿದರು. ಸೂಡಾ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಜಂಟಿಯಾಗಿ ಡಿಪಿಆರ್ ಸಿದ್ದಪಡಿಸುತ್ತಿದ್ದು ನವುಲೆ ಕರೆ ಅಭಿವೃದ್ದಿ ಪಡಿಸಲು ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಮುಂದಾಗಿದೆ ಎಂದು ತಿಳಿಸಿದರು.
ಕೈಗಾರಿಕಾ ವಾಣಿಜ್ಯ ಸಂಘದ ಗೋಪೀನಾಥ್ ಮಳೆಗಾಲದಲ್ಲಿ ಮನೆಗಳಿಗೆ ಕಲುಷಿತ ನೀರು ಸರಬರಾಜಾಗುತ್ತಿದೆ. ಶುದ್ದ ಕುಡಿಯುವ ನೀರಿನ ಘಟಕಗಳು ಹಳೆಯದಾಗಿದ್ದು ಸರಿಯಾದ ನಿರ್ವಹಣೆ ಉನ್ನತೀಕರಣವಾಗಿಲ್ಲವೆಂದು ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತ ಮಾಯಣ್ಣಗೌಡ ನಗರದಲ್ಲಿ 10 ಶುದ್ದ ಕುಡಿಯುವ ನೀರಿನ ಘಟಕಗಳಿದ್ದು ಅದರಲ್ಲಿ ಕೆಲವು ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
7 ಘಟಕಗಳನ್ಮ ಉನ್ನತೀಕರಿಸಿ ಶುದ್ದಕುಡಿಯುವ ನೀರಿನ ಘಟಕದ ಅನುಕೂಲ ಸಾರ್ವಜನಿಕರಿಗೆ ಸಿಗುವಂತೆ ಮಾಡಲಾಗುವುದು ಎಂದರು.
ಮಾಜಿ ಉಪಮೇಯರ್ ವಿಜಯಲಕ್ಷ್ಮಿ ಪಾಟೀಲ್ ಮಾತನಾಡಿ ಯೂಜಿಡಿ ಪೈಪ್ ಅಳವಡಿಕೆಗಾಗಿ ರಸ್ತೆ ಅಗೆದುಹೋಗಿ ಕಾಮಗಾರಿ ಸ್ಥಗಿತಗೊಂಡಿದೆ. ಉತ್ತಮವಾಗಿದ್ದ ರಸ್ತೆ ಅಗೆಯಲು ಜನರು ವಿರೋಧಿಸಿದಾಗ ಅವರ ಮನವೊಲಿಸಿ ಕಾಮಗಾರಿ ನಡೆಯಲು ಅನುವುಮಾಡಿಕೊಟ್ಟಿವು ಇದೀಗ ಮಳೆಗಾಲ ಶುರುವಾಗಿದ್ದು ಅಪೂರ್ಣ ಕಾಮಗಾರಿ ಹಾಗೂ ಹಾಳಾದ ರಸ್ತೆ ಶೀಘ್ರ ದುರಸ್ಥಿಗೊಳಿಸಬೇಕೆಂದು ಮನವಿ ಮಾಡಿದರು.
ಮತ್ತೊಬ್ಬ ಸಾರ್ವಜನಿಕರು ಗಾಂಧೀಬಜಾರಿನಲ್ಲಿ ಸುಸಜ್ಜಿತ ಮೀನುಮಾರುಕಟ್ಟೆಯಿಲ್ಲದೇ ವ್ಯಾಪಾರಿಗಳು ಪುಟ್ ಪಾಥ್ ಅತಿಕ್ರಮಿಸುತ್ತಿದ್ದಾರೆ.ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿದರು.ನಾಗರೀಕ ಹಕ್ಕುಗಳ ವೇದಿಕೆ ವತಿಯಿಂದ ಆಸ್ಥಿವರ್ಗಾವಣೆ ಶುಲ್ಕ ಆಸ್ಥಿ ಮೌಲ್ಯದ ಮೇಲೆ ವಸೂಲಿ ಮಾಡಲಾಗುತ್ತಿದೆ. ಆ ಮೂಲಕ 25 ಸಾವಿರ ಕೋಟಿ ಹೆಚ್ಚುವರಿ ಶುಲ್ಕ ಪಾಲಿಕೆ ಸಂಗ್ರಹಿಸಿದೆ ಈ ವ್ಯವಸ್ಥೆ ಸರಿಪಡಿಸಬೇಕು ಎಂದು ಮನವಿ ಮಾಡಿದರು.
ಇ ಆಸ್ತಿ ಟ್ಯಾಕ್ಸ್ ಅಪ್ಡೇಟ್ ಗೆ ಅನಗತ್ಯ ಅಲೆದಾಟ ವಿಳಂಬದ ಬಗ್ಗೆಯೂ ದೂರು ಕೇಳಿಬಂದಿತು.

ವಾದಿ ಎ ಹುದಾ ಬಡಾವಣೆ ನಿವಾಸಿಯೊಬ್ಬರು ತಮ್ಮ ಬಡಾವಣೆಯಲ್ಲಿ ಹಾವು ಚೇಳುಗಳು ಹೆಚ್ಚಾಗಿ ಕಂಡುಬರುತ್ತವೆ.ವಿಪರೀತ ಬೀದಿ ನಾಯಿ ಹಾವಳಿಯಿದ್ದು ಪರಿಹಾರಕ್ಕಾಗಿ ಮನವಿ ಮಾಡಿದರು.ಕೆಲವರು, ಸಮರ್ಪಕ ಡಾಂಬರ್ ರಸ್ತೆ,ಒಳಚರಂಡಿ, ವಿದ್ಯುತ್ ದೀಪಗಳ ಅಳವಡಿಕೆಗೆ ಬೇಡಿಕೆಯಿಟ್ಟರೆ, ಕನ್ಸರ್ವರನ್ಸಿ , ಪ್ಲಾಸ್ಟಿಕ್ ಬಳಕೆ ನಿಷೇಧ, ದುರ್ಗಿಗುಡಿ ಶಾಲಾ ಸ್ಮಾರ್ಟ್ ಬೋರ್ಡ್ ರೀಚಾರ್ಜ್ ವಿಚಾರಗಳು ಪ್ರಸ್ತಾಪವಾದವು.
ಪ್ಲೆಕ್ಸ್ ಹಾವಳಿ :
ನಗರದಲ್ಲಿ ಅತೀಯಾದ ಪ್ಲೆಕ್ಸ್ ಹಾವಳಿ ಬಗ್ಗೆ ಸಂಘಟನೆಯ ಮುಖಂಡರೊಬ್ಬರಯ ಗಮನಸೆಳೆದರು.ಇಲ್ಲಿ ನಾಗರೀಕರಿಗೆ ಒಂದು ಕಾನೂನು ರಾಜಕಾರಣಿಗಳಿಗೊಂದು ಕಾನೂನು ಇದೆಯಾ ರಸ್ತೆ ತುಂಬಾ ಪ್ಲೆಕ್ಸ್ ಅಳವಡಿಕೆಗೆ ಪಾಲಿಕೆಯಿಂದ ಕಟ್ಟುನಿಟ್ಟಿನ ಕ್ರಮವೇಕಿಲ್ಲ ಎಂದು ಪ್ರಶ್ನಿಸಿದರು?
ಇದಕ್ಕೆ ಉತ್ತರಿಸಿದ ಆಯುಕ್ತ ಮಾಯಣ್ಣಗೌಡ ಪ್ಲೆಕ್ಸ್ ವಿಚಾರದಲ್ಲಿ ಪಾಲಿಕೆ ವಿಫಲವಾಗಿದೆ ಎಂದು ಒಪ್ಪಿಕೊಂಡರು.
ಮುಂದಿನ ದಿನಗಳಲ್ಲಿ ಪ್ಲೆಕ್ಸ್ ನಿಯಂತ್ರಣಕ್ಕೆ ಕಠಿಣ ಹೆಜ್ಜೆ ಇಡುವುದಾಗಿ ತಿಳಿಸಿದರು.
ಇನ್ನೂ ಮುಖಾಮುಖಿ ಕಾರ್ಯಕ್ರಮದ ವೇಳೆ ಮಹಾನಗರಪಾಲಿಕೆಗೆ ಚುನಾಯಿತ ಪ್ರತಿನಿಧಿಗಳಿಲ್ಲದೇ ಆಡಳಿತದಲ್ಲಿ ಸಾಕಷ್ಟು ಕುಂದುಕೊರತೆ ಉಂಟಾಗಿದೆ ಎಂದ ಆಯುಕ್ತರು,ಈ ಎರಡುವರ್ಷಗಳಲ್ಲಿ ಸಾರ್ವಜನಿಕರೊಂದಿಗೆ ಯಾವುದೇ ಕುಂದುಕೊರತೆ ಸಭೆ ನಡೆಸಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಮುಂದಿನ ದಿನಗಳಲ್ಲಿ ಕುವೆಂಪುರಂಗಮಂದಿರ,ಅಂಬೇಡ್ಕರ್ ಭವನದಂತಹ ವಿಶಾಲ ಸ್ಥಳದಲ್ಲಿ ಬೃಹತ್ ಸಂವಾದ ಕುಂದುಕೊರತೆ ಸಭೆ ನಡೆಸಿ ಶೀಘ್ರ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷ ವೈದ್ಯನಾಥ್ , ಕಾರ್ಯದರ್ಶಿ ಹಾಲಸ್ವಾಮಿ,ಸಂಘದ ಪದಾಧಿಕಾರಿಗಳು, ಪಾಲಿಕೆ ವಿವಿಧ ವಿಭಾಗದ ಅಧಿಕಾರಿಗಳು ,ಉಪಸ್ಥಿತರಿದ್ದರು.


