ಶಿಕಾರಿಪುರ, ಭಾರತೀಯ ಜನತಾ ಪಾರ್ಟಿ ವತಿಯಿಂದ ಇಂದು ಶಿಕಾರಿಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ “ರೈತ ಮುಖಂಡರ ಜೊತೆ ಸಮಾಲೋಚನಾ ಸಭೆ” ಹಾಗೂ ಪ್ರಗತಿಪರ ರೈತರೊಂದಿಗೆ ಮತ್ತು FPO (ರೈತ ಉತ್ಪಾದಕ ಸಂಸ್ಥೆಗಳ) ಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾನ್ಯ ಸಂಸದರಾದ ಬಿ. ವೈ. ಆರ್ ಅವರು ಪಾಲ್ಗೊಂಡರು.
ರೈತರ ಆರ್ಥಿಕ ಸುಧಾರಣೆ ಮತ್ತು ಕೃಷಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಸರ್ಕಾರದ ಹಾಗೂ ಸಂಘಟನೆಯ ಪರಮೋಚ್ಚ ಧ್ಯೇಯವಾಗಿದೆ. ಅನ್ನದಾತರ ಪ್ರತಿಯೊಂದು ಹಿತರಕ್ಷಣೆಗೂ ನಾವು ಸದಾ ಕಟಿಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಈ ಕೃಷಿ ಸಮಾಲೋಚನಾ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಶಿಕಾರಿಪುರ ತಾಲೂಕಿನ ಶಾಸಕರಾದ ಶ್ರೀ ಬಿ.ವೈ. ವಿಜಯೇಂದ್ರ, ಜಿಲ್ಲಾ ಅಧ್ಯಕ್ಷರಾದ ಜಗದೀಶ್, ಕೆ. ಎಸ್. ಗುರುಮೂರ್ತಿ, ಕ್ಷೇತ್ರದ ಹಿರಿಯ ಜನಪ್ರತಿನಿಧಿಗಳು, ರೈತ ಮೋರ್ಚಾದ ಪದಾಧಿಕಾರಿಗಳು, ಪ್ರಮುಖ ಕೃಷಿ ತಜ್ಞರು ಹಾಗೂ ಶಿಕಾರಿಪುರ ತಾಲ್ಲೂಕಿನ ನೂರಾರು ಪ್ರಗತಿಪರ ರೈತ ಬಂಧುಗಳು ಉಪಸ್ಥಿತರಿದ್ದರು.



