ಹೂವಿನ ಹಾರ ತರಬೇಡಿ : ಡಿ.ಕೆ. ಶಿವಕುಮಾರ್ ಮನವಿ

ರಾಜಕೀಯ

ಬೆಂಗಳೂರು, ಕಾರ್ಯಕರ್ತರೇ ಸಿಎಂ ಆಗುತ್ತಿದ್ದಾರೆ. ರಾಜ್ಯದೆಲ್ಲೆಡೆ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ ಎಂದು ಕೇಳಿದಾಗ, ‘ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸಿಎಂ ಆಗುತ್ತಿರುವುದು ನಾನಲ್ಲ, ಕಾರ್ಯಕರ್ತರೇ ಸಿಎಂ ಆಗುತ್ತಿದ್ದಾರೆ. 1979 ರಿಂದ ನಾನು ಪಕ್ಷದಲ್ಲಿ ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಹೀಗಾಗಿ ಸಂಭ್ರಮಿಸುತ್ತಿದ್ದಾರೆ’ ಎಂದು ತಿಳಿಸಿದರು.

ನಂತರ ಮಾತನಾಡಿ ಹೂವಿನ ಅಲರ್ಜಿ ಇರುವುದರಿಂದ ಭೇಟಿವೇಳೆ ಆ ಹೂವಿನ ಹಾರ ತರಬಾರದು ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.

ಕುಮಾರಕೃಪಾ ಅತಿಥಿಗೃಹದ ಬಳಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರು ಹೀಗೆ ಹೇಳಿದ್ದಾರೆ.ಈ ಹಿಂದೆಯೂ ಯಾವುದೇ ಹೂವಿನ ಹಾರ ಅಥವಾ ಗುಚ್ಛಗಳನ್ನು ಕೊಡಬಾರದು ಎಂದು ಹೇಳಿದ್ದರು.

ಹೂವಿನಲ್ಲಿನ ಪರಾಗ ಹಾಗೂ ಸುಗಂಧ ಅಲರ್ಜಿ ಉಂಟು ಮಾಡುತ್ತದೆ ಎಂದು ಹೇಳಿದ್ದರು.

‘ಕಾರ್ಯಕರ್ತರ ಉತ್ಸಾಹ ನನಗೆ ಅರ್ಥವಾಗುತ್ತದೆ.ಪ್ರಮಾಣ ವಚನ ಕಾರ್ಯಕ್ರಮವನ್ನು ಸರಳವಾಗಿ ಮಾಡುತ್ತಿರುವುದರಿಂದ ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸಲು ಆಗುವುದಿಲ್ಲ’ ಎಂದು ಹೇಳಿದರು.

Author