ಶಿವಮೊಗ್ಗ, ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಆಡಳಿತಾತ್ಮಕ ಬದಲಾವಣೆ ತಂದಿದ್ದು, ಶಿವಮೊಗ್ಗ ಜಿಲ್ಲೆಯೊಳಗೆ ಅಧಿಕಾರಿಗಳ ಸ್ಥಳಾಂತರ ಪ್ರಕ್ರಿಯೆ ನಡೆಸಿದೆ.
ಜಿಲ್ಲೆಯ ಸಾಗರ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ASP) ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ಡಾ!! ಬೆನಕ ಪ್ರಸಾದ್ ಎನ್.ಜೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶಿವಮೊಗ್ಗ ಉಪ ವಿಭಾಗದ ನೂತನ ಎಎಸ್ಪಿಯಾಗಿ ವರ್ಗಾವಣೆ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ಸರ್ಕಾರದ ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್. ಅವರು ಮೇ 21ರ ಇಂದು ರಾಜ್ಯಪಾಲರ ಅಪ್ಪಣೆಯ ಮೇರೆಗೆ ಈ ನಿಯೋಜನೆಯ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದ್ದಾರೆ.
2022ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಡಾ!!. ಬೆನಕ ಪ್ರಸಾದ್ ಅವರು ಇನ್ಮುಂದೆ ಮುಂದಿನ ಆದೇಶದವರೆಗೆ ಶಿವಮೊಗ್ಗ (ಎ) ಉಪ ವಿಭಾಗದ ಕಾನೂನು ಸುವ್ಯವಸ್ಥೆಯ ಜವಾಬ್ದಾರಿಯನ್ನು ಹೊರಲಿದ್ದಾರೆ.
ಇದೇ ವೇಳೆ, ಪ್ರಸ್ತುತ ಶಿವಮೊಗ್ಗ ಉಪ ವಿಭಾಗದ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಬಾಬು ಆಂಜನಪ್ಪ ಅವರನ್ನು ಸರ್ಕಾರ ದಿಢೀರನೆ ವರ್ಗಾವಣೆಗೊಳಿಸಿದೆ. ಆದರೆ ಅವರಿಗೆ ಯಾವುದೇ ನೂತನ ಹುದ್ದೆ ಅಥವಾ ಕರ್ತವ್ಯದ ಸ್ಥಳವನ್ನು ಇಲಾಖೆ ಇನ್ನು ನಿಗದಿಪಡಿಸಿಲ್ಲ.

