ಶೀಘ್ರದಲ್ಲೇ ದೇಶಕ್ಕೆ ದೊಡ್ಡ ‘ಆರ್ಥಿಕ ಆಘಾತ’ ಎದುರಾಗಲಿದೆ : ರಾಹುಲ್ ಗಾಂಧಿ ಎಚ್ಚರಿಕೆ..!

ರಾಜಕೀಯ

ನವದೆಹಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶೀಘ್ರದಲ್ಲೇ ದೇಶಕ್ಕೆ ದೊಡ್ಡ ‘ಆರ್ಥಿಕ ಆಘಾತ’ ಎದುರಾಗಲಿದೆ ಎಂದು ಮಂಗಳವಾರ ಹೇಳಿದ್ದಾರೆ.

ಆದರೆ ‘ಅದಾನಿ, ಅಂಬಾನಿ ಅಥವಾ ಮೋದಿ’ಗೆ ಅದು ಎಫೆಕ್ಟ್ ಆಗುವುದಿಲ್ಲ, ಬದಲಾಗಿ ಯುವಕರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಇಂದು ರಾಯ್‌ಬರೇಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, “ಮುಂದೆ ತುಂಬಾ ಕಠಿಣಾತಿಕಠಿಣ ದಿನಗಳು ಬರುತ್ತಿವೆ” ಎಂದು ವ್ಯಾಪಾರಿಗಳಿಗೆ ಎಚ್ಚರಿಸಿದರು.ಹಲವು ವರ್ಷಗಳಿಂದ ನಾವು ನೋಡಿರದ ದೊಡ್ಡ ಆರ್ಥಿಕ ಆಘಾತ ಎದುರಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಪ್ರಧಾನಿ ಮೋದಿ ಅವರು ತಾವೇ ಹೇಳಿದ ಕಠಿಣ ಕ್ರಮಗಳ ಕರೆಯನ್ನು ಅವರೇ ಪಾಲಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದರು.”ನರೇಂದ್ರ ಮೋದಿ ಅವರು ದೇಶದ ಜನತೆಗೆ ವಿದೇಶ ಪ್ರವಾಸ ಹೋಗಬೇಡಿ ಎಂದು ಹೇಳುತ್ತಿದ್ದಾರೆ.

ಆದ್ರೆ ಅವರೇ ಪ್ರಪಂಚದಾದ್ಯಂತ ಸುತ್ತುತ್ತಿದ್ದಾರೆ. ಇದು ನಮ್ಮ ಪ್ರಧಾನಿಯವರ ನಡೆ” ಎಂದು ರಾಹುಲ್ ಗಾಂಧಿ ಟೀಕಿಸಿದರು.

Author