ಶಿವಮೊಗ್ಗ | ಅಕ್ರಮ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ : ಕೆಪಿಸಿಸಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ

ರಾಜಕೀಯ

ಶಿವಮೊಗ್ಗ ಸ್ಪಾ ಮತ್ತು ಮಸಾಜ್ ಪಾರ್ಲರ್ ಹೆಸರಿನಲ್ಲಿ ಅಕ್ರಮ ಅನೈತಿಕ ಚಟುವಟಿಕೆ ಗಳು ಹೆಚ್ಚಾಗಿದ್ದು ಅವುಗಳಿಗೆ ಕಡಿವಾಣ ಹಾಕುವಂತೆ ಬಿಗಿಯಾದ ಕಾನೂನು ಕ್ರಮ ಜರುಗಿಸಿ INTUC ಕಾಂಗ್ರೆಸ್ ಸಂಘಟನೆ ವತಿಯಿಂದ ಎಸ್‌ಪಿ ಅವರಿಗೆ ಮನವಿ ಸಲ್ಲಿಸಲಾಗಿದೆ.

ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪ ಹಾಗೂ ಸಂಘಟನೆಯ ಕವಿತಾ ರಾಘವೇಂದ್ರ ಅವರ ನೇತೃತ್ವದಲ್ಲಿ ಎಸ್ಪಿ ಕಚೇರಿಗೆ ಭೇಟಿ ನೀಡಿದ ನಿಯೋಗವು ಜಿಲ್ಲೆಯಲ್ಲಿ ಹಾಗೂ ನಗರದಲ್ಲಿ ಗಲ್ಲಿ ಗಲ್ಲಿಗಳಲ್ಲಿ ನಾಯಿ ಕೊಡೆಗಳಂತೆ ಮಸಾಜ್ ಪಾರ್ಲರ್ ಗಳು ಹೆಚ್ಚಾಗುತ್ತಿವೆ. ಹೊರ ಜಿಲ್ಲೆಗಳಿಂದ ಹೆಣ್ಣು ಮಕ್ಕಳನ್ನು ಕರೆಯಿಸಿ ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಸಾಜ್ ಪಾರ್ಲರ್ ಮಾಲೀಕರಿಂದ ಫೋಟೋ ಸಮೇತ ವಿದ್ಯಾರ್ಥಿಗಳಿಗೆ ಹಾಗೂ ಯುವ ಉದ್ಯೋಗಿಗಳಿಗೆ ಹುಡುಗಿಯರ ಫೋಟೋ ಕಳುಹಿಸಲಾಗುತ್ತಿದೆ.

18 ವರ್ಷದ ಒಳಗಿನ ಹಾಗೂ 18 ವರ್ಷದ ಮೇಲಿನ ಯುವತಿ ಯುವಕರನ್ನು ಮತ್ತು ವಿದ್ಯಾರ್ಥಿಗಳನ್ನು ಮಸಾಜ್ ಪಾರ್ಲರ್ ಗಳಿಗೆ ಆಹ್ವಾನಿಸಿ ಅಲ್ಲಿ ಅನೈತಿಕ ಚಟುವಟಿಕೆಗಳಿಗೆ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ.

ಇವುಗಳಿಂದ ಹನಿ ಟ್ರಾಪ್ ನಂತಹ ಅಪರಾಧ ಪ್ರಕ್ರಿಯೆಗಳು ಹೆಚ್ಚಾಗುವ ಸಂಭವನೀಯತೆ ಜಿಲ್ಲಾ ರಕ್ಷಣಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನವಹಿಸಿ ಪಾರ್ಲರ್ ಮತ್ತು ಗಾಂಜಾ ದಂಧೆಗಳ ಮೇಲೆ ಹೆಚ್ಚಿನ ದಾಳಿ ನಡೆಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ ಇದೆ ರೀತಿಯಲ್ಲಿ ಮುಂದುವರೆದರೆ ಶೈಕ್ಷಣಿಕ ಕ್ಷೇತ್ರವಾಗಿರುವ ಶಿವಮೊಗ್ಗ ಜಿಲ್ಲೆ ಮತ್ತು ನಗರವು ವೇಶ್ಯವಾಟಿಕೆ ತಳಗಳಾಗಿ ಪರಿವರ್ತನೆ ಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಮನವಿ ತಿಳಿಸಲಾಗಿದೆ.

ಮಸಾಜ್ ಪಾರ್ಲರ್ಗಳ ಮೇಲೆ ನಿಯಂತ್ರಣ ಸಾಧಿಸಲು ಒಂದು ಹೊಸ ಮಹಿಳಾ ಪೊಲೀಸ್ ತಂಡ ರಚಿಸಿ ಮಸಾಜ್ ಪಾರ್ಲರ್ಗಳ ಮಾಲೀಕರ ಫೋನುಗಳನ್ನು ವಶಪಡಿಸಿಕೊಂಡು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವವರ ಮತ್ತು ಅವರ ಬ್ಯಾಂಕ್ ಖಾತೆಗಳಿಂದ ಹಣಗಳ ವ್ಯವಹಾರಗಳ ಮೇಲೆ ನಿಗವಹಿಸುವಂತೆ ಸಂಘಟನೆ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದೇವೇಂದ್ರಪ್ಪ, ಕವಿತಾ, ಹಾಗೂ ಇನ್ನಿತರೇ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಮನವಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ದೊಡ್ಡಪೇಟೆ ಪೊಲೀಸ್ ಸರು ತಮ್ಮ ಠಾಣ ವ್ಯಾಪ್ತಿಯಲ್ಲಿ ಬರುವ ಸ್ಪಾಗಳ ಮೇಲೆ ದಾಳಿ ನಡೆಸಿರುವುದು ತಿಳಿದು ಬಂದಿದೆ.

ದೊಡ್ಡಪೇಟೆ ಪೊಲೀಸ್ ಠಾಣೆಯ ಪಿ ಐ ಸತ್ಯನಾರಾಯಣ ಪಿಎಸ್ಐ ಅಂಬಿಗೇರ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಬ್ಯೂಟಿ ಪಾರ್ಲರ್ ಗಳ ಮೇಲೆ ಧಿಡೀರ್ ದಾಳಿ ನಡೆಸಲಾಗಿದೆ.

Author