ಶಿವಮೊಗ್ಗ | ಅರಣ್ಯದಲ್ಲಿ ಜೂಜು : ಪತ್ತೆಹಚ್ಚಿದ ಡ್ರೋನ್ ; 19 ಜನರ ವಿರುದ್ಧ ದಾಖಲಾಯಿತು ಪ್ರಕರಣ

ಶಿವಮೊಗ್ಗ

ಶಿವಮೊಗ್ಗ,ಭದ್ರಾವತಿ ಗ್ರಾಮಾಂತರದ ಕೂಡ್ಲಿಗೆರೆ ಗ್ರಾಮದ ಸುತ್ತಮುತ್ತ, ಅಲ್ಲಿನ ಅರಣ್ಯ ಪ್ರದೇಶದ ಚಾನಲ್ ಏರಿ ಬಳಿಯಲ್ಲಿ ಗುಂಪು ಕಟ್ಟಿಕೊಂಡು .ಜೂಜಾಟದಲ್ಲಿ ತೊಡಗಿಕೊಂಡವರನ್ನು‌ ಪೊಲೀಸರು ಡ್ರೋನ್ ಮೂಲಕ ಪತ್ತೆ ಮಾಡಿ ಬಂಧಿಸಿದ್ದಾರೆ.

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಪೊಲೀಸ್ ನಿರೀಕ್ಷಕರ ನೇತೃತ್ವದ ಸಿಬ್ಬಂದಿಗಳ ತಂಡ ನಂತರ ಈ ಸ್ಥಳದ ಮೇಲೆ ದಾಳಿ ಮಾಡಿತ್ತು.

ಒಟ್ಟು 19 ಜನ ಅಕ್ರಮ ಜೂಜುಕೋರರನ್ನು ದ್ರೋಣ್ ಮೂಲಕ ಗುರುತಿಸಿ ಪ್ರಕರಣ ದಾಖಲಿಸಲಾಗಿದೆ.

Author