ಶಿವಮೊಗ್ಗ,ಭದ್ರಾವತಿ ಗ್ರಾಮಾಂತರದ ಕೂಡ್ಲಿಗೆರೆ ಗ್ರಾಮದ ಸುತ್ತಮುತ್ತ, ಅಲ್ಲಿನ ಅರಣ್ಯ ಪ್ರದೇಶದ ಚಾನಲ್ ಏರಿ ಬಳಿಯಲ್ಲಿ ಗುಂಪು ಕಟ್ಟಿಕೊಂಡು .ಜೂಜಾಟದಲ್ಲಿ ತೊಡಗಿಕೊಂಡವರನ್ನು ಪೊಲೀಸರು ಡ್ರೋನ್ ಮೂಲಕ ಪತ್ತೆ ಮಾಡಿ ಬಂಧಿಸಿದ್ದಾರೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಪೊಲೀಸ್ ನಿರೀಕ್ಷಕರ ನೇತೃತ್ವದ ಸಿಬ್ಬಂದಿಗಳ ತಂಡ ನಂತರ ಈ ಸ್ಥಳದ ಮೇಲೆ ದಾಳಿ ಮಾಡಿತ್ತು.
ಒಟ್ಟು 19 ಜನ ಅಕ್ರಮ ಜೂಜುಕೋರರನ್ನು ದ್ರೋಣ್ ಮೂಲಕ ಗುರುತಿಸಿ ಪ್ರಕರಣ ದಾಖಲಿಸಲಾಗಿದೆ.

