ಶಿವಮೊಗ್ಗ | ಕಾಂಗ್ರೆಸ್ ನಾಯಕರು ಹುಚ್ಚರಾಗಿದ್ದಾರೆ : ಸಯ್ಯದ್ ಮುಜಿಬುಲ್ಲ

ಶಿವಮೊಗ್ಗ

ಶಿವಮೊಗ್ಗ,”ಅಲ್ಪಸಂಖ್ಯಾತರ ಮತಗಳಿಂದ ಅಧಿಕಾರವನ್ನು ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ರಾಜಕೀಯ ಸಮಾನತೆ ನೀಡುವಲ್ಲಿ ವಿಫಲವಾದದ್ದು, ಮುಸ್ಲಿಮರ ರಾಜಕೀಯ ನಾಯಕತ್ವವನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿದೆ. ಹಲವಾರು ವರ್ಷಗಳಿಂದ ತಾಳ್ಮೆಯಿಂದ ಇದ್ದ ಮುಸ್ಲಿo ಸಮುದಾಯ ತಮ್ಮ ಹಕ್ಕಿಗಾಗಿ ಧ್ವನಿ ಎತ್ತುತ್ತಿದೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ H C ಬಾಲಕೃಷ್ಣ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಧರ್ಮಗುರುಗಳು ಕಿಡಿಕಾರಬಾರದು ಮತ್ತು ಅಮಾನತ್ತು ಮಾಡಲಾಗಿದೆ ಅಷ್ಟೇ ಯಾರನ್ನು ಗಲ್ಲಿಗೇರಿಸಿಲ್ಲ ಎಂದು ಉದ್ಧಟತನದಿಂದ ಮಾತನಾಡಿದ್ದಾರೆ.

ಕಾಂಗ್ರೇಸ್ ನಾಯಕರ ವರ್ತನೆಯಿಂದ ಕಾಂಗ್ರೆಸ್ಸ್ನವರಿಗೆ ಅಧಿಕಾರದ ಮದದಿಂದ ಹುಚ್ಚುಹಿಡಿದಂತೆ ಕಾಣಿಸುತ್ತಿದೆ. ಉಲೇಮಗಳು ನಮ್ಮ ಸಮುದಾಯದ ಕಿರೀಟ ಉಲೇಮಗಳಿಗೆ ಸಂಭಂದ ಪಟ್ಟಂತೆ ಯಾರೇ ಅಗೌರವ ತೋರಿದರೂ ಪರಿಣಾಮ ಎದುರಿಸಬೇಕಾಗುತ್ತದೆ.

ತಕ್ಷವೇ ಶಾಸಕ ಬಾಲಕೃಷ್ಣ ಉಲೇಮಗಳ ಕ್ಷಮೆಕೋರಬೇಕು ಎಂದು ವೇದಿಕೆಯು ಒತ್ತಾಯಿಸುತ್ತದೆ. ಹಾಗೂ ಇದೇ ರೀತಿಯ ಬೆಳವಣಿಗೆಗಳು ಕಾಂಗ್ರೆಸ್ಸಿನಿಂದ ಮುಂದುವರೆದಲ್ಲಿ ಕಾಂಗ್ರೇಸ್ ಪಕ್ಷದ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರಕ್ಷಣಾ ವೇದಿಕೆ ಎಚ್ಚರಿಸುತ್ತದೆ ಸಯ್ಯದ್ ಮುಜಿಬುಲ್ಲ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author