ಶಿವಮೊಗ್ಗ, ವಂದೇ ಮಾತರಂ ಗೆ 150 ವರ್ಷಗಳ ಹಿನ್ನೆಲೆಯಲ್ಲಿ ಚಕ್ರವರ್ತಿ ಸೂಲಿಬೆಲೆಸಮರ್ಪಿಸುವನಾನೇ ಭಾರತ(ತಾಯಿ ಭಾರತಿಗೆ ಕನ್ನಡದಾರತಿ) ಕಾರ್ಯಕ್ರಮ ಏ . 18ರಂದು ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಅನವರತ ಫೌಂಡೇಶನ್ ಅಧ್ಯಕ್ಷ ಎಸ್ ಎನ್ ಚನ್ನಬಸಪ್ಪ, ಅನವರತ ಫೌಂಡೇಶನ್ ಶಿವಮೊಗ್ಗ ಮತ್ತು ಸಂಸ್ಕಾರ ಭಾರತಿ, ಶಿವಮೊಗ್ಗ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ಕರ್ನಲ್ ಎ ಎಸ ರಘುನಾಥ ಕಾರ್ಯಕ್ರಮ ಉದ್ಘಾಟಿಸುವರು. ನಂತರ ಶಿವಮೊಗ್ಗದ ಸಂಗೀತ ಶಾಲೆಗಳ 150 ಪ್ರತಿಭೆಗಳಿಂದ ‘ವಂದೇ ಮಾತರಂ’ ಸಮೂಹ ಗಾಯನ ನಡೆಯಲಿದೆ ಎಂದರು.
ಸ್ವಾತಂತ್ರ್ಯ ಸಂಗ್ರಾಮದ ವೀರಗಾಥೆ: ವಿಶೇಷ ಪ್ರದರ್ಶಿನಿ’ಅದಮ್ಯ ಭಾರತ’ ಬೆಳಗ್ಗಿನಿಂದ ಸಂಜೆಯವರೆಗೆ ನಡೆಯಲಿದೆ.
ಸಂಜೆ 6:00ಕ್ಕೆ ನಾನೇ ಭಾರತ ಎಂಬ ವಿಷಯದಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತನಾಡುವರು. ಭಾರತ ಬರಿಯ ಮಣ್ಣಲ್ಲ, ಯಾರೋ ಗೀಚಿದ ಗಡಿ ರೇಖೆಯೂ ಅಲ್ಲ ಅವಳು ತಾಯಿ, ದೇವಿ, ದುರ್ಗೆ, ಅವಳು ಸಸ್ಯಶ್ಯಾಮಲೆ, ಕೋಟಿ ಕೋಟಿ ತರುಣರ ಏಕಮಾತ್ರ ಆಶಯದನಿ.
ತಾಯಿ ಭಾರತೀಯ ಸ್ತುತಿಗೀತೆಗೆ 150 ಮತ್ತು ಬಂಕಿಮಚಂದ್ರರ ಸ್ಮರಿಸೋಣ ವಿಷಯವಾಗಿ ತಾಯಿ ಭಾರತಿಗೆ ನಮೋ ಎನ್ನೋಣ ಬಗ್ಗೆ ಅವರ ಉಪನ್ಯಾಸವಿರಲಿದೆ ಎಂದರು.


