ಸಾಗರ | ಹಿರಿಯ ಪತ್ರಕರ್ತ ಓಂಕಾರ ಎಸ್.ವಿ ತಾಳಗುಪ್ಪ ವಿಧಿವಶ

ಶಿವಮೊಗ್ಗ

ಸಾಗರ,ಆತ್ಮೀಯರು, ಹಿರಿಯ ಪತ್ರಕರ್ತರೂ ಆದ ಓಂಕಾರ ಎಸ್.ವಿ ತಾಳಗುಪ್ಪ ಇವರು ದಿನಾಂಕ 14-04-2026 ರ ರಾತ್ರಿ 9:30 ಲಿಂಗೈಕ್ಯರಾಗಿರುತ್ತಾರೆ.

ಇವರ ಅಂತ್ಯಕ್ರಿಯೆಯನ್ನು ತಾಳಗುಪ್ಪದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿರುತ್ತಾರೆ.

ಸಮಾಜದ ಅಂಕು ಡೊಂಕುಗಳನ್ನು ನೇರವಾಗಿ ತಮ್ಮ ಹರಿತವಾದ ಪದಗಳಿಂದ ಬರೆದು ಭ್ರಷ್ಟರ ಕನಸಿನಲ್ಲಿ ಸಿಂಹ ಸ್ವಪ್ನವಾಗಿ ಕಾಣುತ್ತಿದ್ದ ನಿಷ್ಠೂರವಾದಿ ಪತ್ರಕರ್ತ ಓಂಕಾರ್. ಎಸ್, ಇವರ ನಿಧನದಿಂದ ದಿಟ್ಟ ವರದಿಯ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಸದ್ಗತಿಯನ್ನು ನೀಡಲಿ ಕುಟುಂಬ ವರ್ಗದವರಿಗೆ ಸ್ನೇಹಿತರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ.

ನಮ್ಮ ಇ-ಕನ್ನಡ ಮಾಧ್ಯಮದಿಂದ ಹಿರಿಯ ಪತ್ರಕರ್ತ ಓಂಕಾರ್. ಎಸ್. ತಾಳಗುಪ್ಪ ಅವರ ನಿಧನಕ್ಕೆ ಸಂತಾಪ ಸುಚಿಸುತ್ತಿದ್ದೇವೆ.

Author