ಶಿವಮೊಗ್ಗ | ಆತ್ಮಹತ್ಯೆಗೆ ಶರಣಾದ ಯುವಕ

ಶಿವಮೊಗ್ಗ

ಶಿವಮೊಗ್ಗಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ, ತಾಲೂಕಿನ ಗರ್ತಿಕೆರೆ ಸಮೀಪದ ಗಂದ್ರಳ್ಳಿ ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ಮೃತನನ್ನು 26 ವರ್ಷದ ಶ್ರೀಜಿತ್ ನಾಯ್ಕ ಎಂದು ಗುರುತಿಸಲಾಗಿದೆ. ಮಾರ್ಚ್ 7ರ ಶನಿವಾರ ರಾತ್ರಿ ಸುಮಾರು 10.30ರ ಸುಮಾರಿಗೆ ಮನೆಗೆ ಬಂದಿದ್ದ ಶ್ರೀಜಿತ್ ಅವರಿಗೆ ತಾಯಿ ಮತ್ತು ಸಹೋದರರು ಊಟಕ್ಕೆ ಕರೆದಿದ್ದಾರೆ. ಆದರೆ ನಾನು ಈಗಾಗಲೇ ಊಟ ಮಾಡಿದ್ದೇನೆ ಎಂದು ಹೇಳಿ ಈಗಾಗಲೇ ಊಟ ಮಾಡಿದ್ದೇನೆ ಎಂದು ಹೇಳಿ ಮಲಗಲು ತೆರಳಿದ್ದರು.

ಮರುದಿನ ಅಂದರೆ ಮಾರ್ಚ್ 8ರ ಭಾನುವಾರ ಬೆಳಿಗ್ಗೆ 5.30ಕ್ಕೆ ನೋಡಿದಾಗ ಶ್ರೀಜಿತ್ ಮನೆಯಲ್ಲಿ ಇರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತ ಹುಡುಕಾಡಿದಾಗ, ಮನೆಯ ಮುಂದಿನ ಜಾಗದಲ್ಲಿದ್ದ ಮರಕ್ಕೆ ಲುಂಗಿಯಿಂದ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿರುವುದು ಕಂಡುಬಂದಿದೆ.

ಹಳೆಯ ಪ್ರೇಮ ಪ್ರಕರಣದ ನೋವು ಹಾಗೂ ಮದ್ಯಪಾನದ ಅಮಲಿನಲ್ಲಿ ಈ ಆತ್ಮಹತ್ಯೆ ಸಂಭವಿಸಿರಬಹುದು ಎಂದು ಮೃತನ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author