ಶಿವಮೊಗ್ಗದಲ್ಲಿ ನಾಳೆ IFB Point ನೂತನ ಶೋರೂಮ್ ಉದ್ಘಾಟನೆ

ಶಿವಮೊಗ್ಗ

ಶಿವಮೊಗ್ಗ, ಗೃಹೋಪಯೋಗಿ ಎಲೆಕ್ಟ್ರಾನಿಕ್ ಹಾಗೂ ಕಿಚನ್ ಉಪಕರಣಗಳ ಪ್ರಮುಖ ಬ್ರ್ಯಾಂಡ್ IFB Point ನ ನೂತನ ಶೋರೂಮ್‌ನ್ನು ಶಿವಮೊಗ್ಗದಲ್ಲಿ ಜುಲೈ 10 (ಶುಕ್ರವಾರ) ರಂದು ಉದ್ಘಾಟಿಸಲಾಗುತ್ತಿದೆ.

ನಗರದ ಗಾಂಧಿನಗರ, ಜೈಲ್ ಮೇನ್ ರಸ್ತೆ, ಥಿಪ್ಪೇಸ್ವಾಮಿ ಕಾಂಪ್ಲೆಕ್ಸ್, ಡೊಣ್ಣೆ ಬಿರಿಯಾನಿ ಮನೆ ಎದುರು ಬೆಳಿಗ್ಗೆ 11 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಸಾರ್ವಜನಿಕರು ಹಾಗೂ ಗ್ರಾಹಕರು ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಹ್ವಾನಿಸಲಾಗಿದೆ.

ಉದ್ಘಾಟನಾ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ಘೋಷಿಸಲಾಗಿದ್ದು, ₹13,000 ವರೆಗೆ ಎಕ್ಸ್‌ಚೇಂಜ್ ಆಫರ್, ₹922 ರಿಂದ EMI ಸೌಲಭ್ಯ, ₹9,000 ವರೆಗೆ ಕ್ಯಾಶ್‌ಬ್ಯಾಕ್ ಹಾಗೂ ಪ್ರತಿ ಖರೀದಿಗೆ ಖಚಿತ ಉಚಿತ ಉಡುಗೊರೆ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಈ ನೂತನ ಶೋರೂಮ್‌ನಲ್ಲಿ IFB ಕಂಪನಿಯ ವಾಷಿಂಗ್ ಮಷಿನ್, ರೆಫ್ರಿಜರೇಟರ್, ಏರ್ ಕಂಡೀಷನರ್, ಮೈಕ್ರೋವೇವ್ ಓವನ್, ಚಿಮ್ನಿ, ಹಾಬ್ ಸೇರಿದಂತೆ ವಿವಿಧ ಗೃಹೋಪಯೋಗಿ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿರಲಿವೆ.

ಈ ಸಮಾರಂಭಕ್ಕೆ ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶೋರೂಮ್ ಮಾಲೀಕರಾದ ಸೃಜನ್ ಅತ್ತಿಕೊಡಿಗೆ ಹಾಗೂ ಸುಚನ್ ಅತ್ತಿಕೊಡಿಗೆ ಮನವಿ ಮಾಡಿದ್ದಾರೆ.

Author