ಶಿವಮೊಗ್ಗ | ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳಿಂದ ಪಕ್ಷಕ್ಕೆ ಕಳಂಕ ತರುವರಿಗೆ ಸ್ಪಷ್ಟ ಸಂದೇಶ

ಶಿವಮೊಗ್ಗ

ಶಿವಮೊಗ್ಗದ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾದಂತ ನಾಜಿಮಾ ಹಾಗೂ ತಿಮ್ಮರಾಜುರವರು, ಅಸ್ಮಾ ಬಾನು ಎಂಬ ಬಡ ಮಹಿಳೆಗೆ ಸರ್ಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸುವುದಾಗಿ ಸಚಿವ ಮಧು ಬಂಗಾರಪ್ಪ ಹಾಗೂ ಎಂ ಎಲ್ ಸಿ ಬಲ್ಕಿಸ್ ಬಾನು ಹೆಸರಲ್ಲಿ ವಂಚಿಸಿ 3 ಲಕ್ಷ ಹಣ ಪೀಕಿ ವಂಚನೆ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು.

ಇನ್ನು ಘಟನೆ ಸಂಬಂಧ ಸಂಪೂರ್ಣ ಮಾಹಿತಿ ಪಡೆದುಕೊಂಡ ಶಿವಮೊಗ್ಗದ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಆರ್. ಪ್ರಸನ್ನ ಕುಮಾರ್ ಹಾಗೂ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶ್ವೇತ ಬಂಡಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ನಾಜಿಮಾ ಅವರು ಪಕ್ಷ ಹಾಗೂ ಪಕ್ಷದ ನಾಯಕರ ಹೆಸರು ದುರ್ಬಳಿಕೆ ಮಾಡಿಕೊಂಡು ಹಲವಾರು ಜನರಿಗೆ ವಂಚನೆ ಮಾಡಿರುವ ಕುರಿತು ಮಾಹಿತಿ ಮೇರೆಗೆ ಹಾಗೂ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾದ ಹಿನ್ನಲೆಯಲ್ಲಿ, ಹಾಗೂ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿ ಪಕ್ಷಕ್ಕೆ ಮುಜುಗರ ತಂದಿರುವ ಕಾರಣಕ್ಕೆ,

ಮೋಸ ಕಪಟ ಪಕ್ಷ ವಿರೋಧಿಯಂತಹ ವಿಚಾರಕ್ಕೆ ಪಕ್ಷ ಯಾವತ್ತೂ ಸೊಪ್ಪು ಹಾಕುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯ ಮೂಲಕ ನಾಜಿಮ ಹಾಗೂ ತಿಮ್ಮರಾಜು ಅವರನ್ನು ಪಕ್ಷದಿಂದ ಕಿಕ್ಔಟ್ ಮಾಡಿದ್ದಾರೆ.

ಹಾಗೂ ಪಕ್ಷದ ಘನತೆಗೆ ಇನ್ನು ಮುಂದೆ ಯಾರೇ ಧಕ್ಕೆ ತರುವ ಕೆಲಸ ಮಾಡುವುದಕ್ಕೆ ಹೆದರಿಕೆ ಇರಬೇಕು ಎಂಬ ಸಂದೇಶ ರವಾನಿಸಿದ್ದಾರೆ.

ಪಕ್ಷ ಹಾಗೂ ನಾಯಕರ ಹೆಸರಲ್ಲಿ ಎತ್ತುವಳಿ ಮಾಡುವುದು ಬಡವರಿಗೆ ಹಾಗೂ ಯಾರಿಗೆ ಆಗಲಿ ಅನ್ಯಾಯ ಮಾಡಿದ್ದೂ ಗೊತ್ತಾದಲ್ಲಿ ಪಕ್ಷ ಸುಮ್ಮನೆ ಕೂರುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ನಿಜವಾಗಲು ಅಧ್ಯಕ್ಷರುಗಳ ಸ್ಪಷ್ಟ ಸಂದೇಶ ನೀಡಿರುವುದು ಸಂತೋಷ ಉಂಟು ಮಾಡಿದೆ.ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಕಾರ್ಯಕರ್ತರಲ್ಲಿ ಈ ಒಂದು ಘಟನೆಯಿಂದ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರ ಶ್ರಮಕ್ಕೆ ಪಕ್ಷ ಬೆಂಬಲವಿರಲಿದೆ ಎಂಬ ಆತ್ಮವಿಶ್ವಾಸ ಹೆಚ್ಚಾಗಿದೆ.

ಪಕ್ಷದ ಹೆಸರಲ್ಲಿ ಅಂದಾದುಂದಿ ವ್ಯವಹಾರ ಮಾಡಿಕೊಂಡು ಪೊಲೀಸ್ ಠಾಣೆಯಲ್ಲಿ ಕೂತುಕೊಂಡು ಸಮಸ್ಯೆ ಬಗೆಹರಿಸಿ ಕೊಡುತ್ತೇನೆ ನ್ಯಾಯ ಒದಗಿಸಿಕೊಡುತ್ತೇನೆ ನನಗು ಶಾಸಕರು, ಸಚಿವರು ಗೊತ್ತು ಎಂದು ಪಕ್ಷಕ್ಕೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಮಾಡುತ್ತಿದ್ದವರಿಗೆ ಇನ್ನು ಮುಂದೆ ಅವಕಾಶ ಇಲ್ಲ ಎಂಬ ಸಂದೇಶವನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳು ರವಾನಿಸಿದ್ದಾರೆ.

ಹಾಗೂ ಇನ್ನು ಮುಂದೆ ಯಾರೇ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವರಿಗೆ ಪಕ್ಷ ಯಾವತ್ತು ಸುಮ್ಮನೆ ಇದ್ದು ಸಹಿಸಿಕೊಳ್ಳವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರು ಇಷ್ಟು ವರ್ಷ ಬಯಸುತ್ತಿದ್ದ ಹಾಗೂ ನ್ಯಾಯ ಒದಗಿಸುವ ಅಧ್ಯಕ್ಷರು ಶಿವಮೊಗ್ಗದಲ್ಲಿ ಬಂದಿರುವುದು ಶಿವಮೊಗ್ಗ ಕಾಂಗ್ರೆಸ್ ಪ್ರಾಮಾಣಿಕ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿದೆ, ಪಕ್ಷದ ಮೇಲೆ ಮತ್ತೆ ಉತ್ಸಾಹ ಮೂಡಿದೆ ಹಾಗೂ ಪ್ರಾಮಾಣಿಕ ಕಾರ್ಯಕರ್ತರು ಪ್ರಾಮಾಣಿಕವಾಗಿ ನಿಷ್ಠಾವಂತ ಕಾರ್ಯಕರ್ತರಿಗೆ ನ್ಯಾಯ ಸಿಗಲಿದೆ ಎಂಬ ಆಶಭಾವನೆ ಮೂಡಿದೆ.

ಹಾಗೂ ಪಕ್ಷದ ಚೌಕಟ್ಟು ಮೀರಿ ಯಾರೇ ಪಕ್ಷಕ್ಕೆ ಕಳಂಕ ತರುವ ಕೆಲಸ ಮಾಡಿದ್ದೂ ಗೊತ್ತಾದಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ ಎಂಬ ಸಂದೇಶ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಪ್ರಸನ್ನ ಕುಮಾರ್ ಹಾಗೂ ಮಹಿಳಾ ಅಧ್ಯಕ್ಷರಾದ ಶ್ವೇತ ಬಂಡಿ ಪಕ್ಷ ಹಾಗೂ ಕಾರ್ಯಕರ್ತರಿಗೆ ಸ್ಪಷ್ಟವಾಗಿ ರವಾನಿಸಿದ್ದಾರೆ.

ಕೊನೆಯದಾಗಿ ಮಾಧ್ಯಮಗಳು ನೀಡುವ ಮಾಹಿತಿಯನ್ನ ಅವಲೋಕಿಸಿ,ಬೆಂಬಲಿಸಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗುವ ಯಾವದೇ ಸುದ್ದಿಗಳು ಬಂದಲ್ಲಿ ತಕ್ಷಣ ಸ್ಪಂದಿಸಿ ತಕ್ಷಣ ತಪ್ಪಿಸ್ತರ ವಿರುದ್ಧ ಕ್ರಮ ಜರುಗಿಸುವ ಮೂಲಕ ಪಕ್ಷವನ್ನು ಸಂಕಷ್ಟಕ್ಕೆ ಸಿಲುಕಿಸದಂತೆ ಪಾರು ಮಾಡುತ್ತಿರುವುದು ನಿಜಕ್ಕೂ ಶ್ಲಾಘನಿಯ ಸಂಗತಿಯಾಗಿದೆ.

Author