ಅಪರಿಚಿತನಿಂದ ಬಂತು ವಿಡಿಯೋ ಕಾಲ್​ ; ರಿಸೀವ್ ಮಾಡಿದ ಮಹಿಳೆ ಶಾಕ್..!

ಶಿವಮೊಗ್ಗ

ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ವ್ಯಾಟ್ಸ್​​ಪ್​ ಕಾಲ್​ ಮಾಡಿ ಖಾಸಗಿ ಅಂಗವನ್ನು ಪ್ರದರ್ಶಿಸಿದ್ದಾನೆ ಎಂದು ಆರೋಪಿಸಿ ಮಹಿಳೆ ಶಿವಮೊಗ್ಗದ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ಘಟನೆ ವಿವರ

ಶಿವಮೊಗ್ಗದ (ಊರು ಹಾಗೂ ಮಹಿಳೆಯ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.) ಮಹಿಳೆಯೊಬ್ಬರು ಹೀಗೆ ಮೊಬೈಲ್​ ನೋಡುತ್ತಿದ್ದಾಗ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸ್‌ಆ್ಯಪ್ ಸಂದೇಶವೊಂದು ಬಂದಿತ್ತು. ನಾನು ನಿಮಗೆ ಪರಿಚಯವಿರುವ ವ್ಯಕ್ತಿ, ವಿಡಿಯೋ ಕಾಲ್ ಮಾಡುತ್ತೇನೆ ರಿಸೀವ್ ಮಾಡಿ, ನಾನು ಯಾರು ಎಂದು ತಿಳಿಯುತ್ತದೆ ಎಂದು ಆ ವ್ಯಕ್ತಿ ನಂಬಿಸಿದ್ದ.

ಇದನ್ನು ನಂಬಿದ ಮಹಿಳೆ ಕಾಲ್ ರಿಸೀವ್ ಮಾಡಿದಾಗ, ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾನೆ.ಮೊದಲ ಎರಡು ಬಾರಿ ಕರೆ ಬಂದಾಗ ಮಹಿಳೆ ತನ್ನ ಮುಖ ಕಾಣದಂತೆ ಕ್ಯಾಮೆರಾ ತಿರುಗಿಸಿ ಕಾಲ್ ರಿಸೀವ್ ಮಾಡಿದ್ದರು. ಆದರೆ ವ್ಯಕ್ತಿ ತನ್ನ ಮುಖ ತೋರಿಸಿರಲಿಲ್ಲ.

ಕೂಡಲೇ ಎಚ್ಚೆತ್ತ ಮಹಿಳೆ, ರಾತ್ರಿ ಮೊಬೈಲ್‌ನಲ್ಲಿ ಸ್ಕ್ರೀನ್ ರೆಕಾರ್ಡಿಂಗ್ ಆನ್ ಮಾಡಿಕೊಂಡು ಆ ನಂಬರ್‌ಗೆ ವಿಡಿಯೋ ಕಾಲ್ ಮಾಡಿದ್ದಾರೆ.

ಆಗ ಆ ವ್ಯಕ್ತಿ ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸಿದ್ದು, ಇದನ್ನು ಮಹಿಳೆ ಸಾಕ್ಷ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಈ ಹಿನ್ನೆಲೆ ಕಿರುಕುಳ ನೀಡುತ್ತಿರುವ ವ್ಯಕ್ತಿಯನ್ನು ಬಂಧಿಸುವಂತೆ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Author