ಶಿವಮೊಗ್ಗ | ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಆದ್ಯತೆ ಕೇವಲ ಭಾವನೆ ಅಲ್ಲ ಬದುಕು ಎಂಬುದನ್ನ ತೋರಿಸಿಕೊಟ್ಟ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್

ರಾಜಕೀಯ

ಶಿವಮೊಗ್ಗ,ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಸಂಪುಟ ಸಭೆಯನ್ನ ನಡೆಸಿ ಕರಾವಳಿ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ತುಳು ಭಾಷೆಗೆ ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆ ಎಂದು ಘೋಷಿಸಿ, ಆ ಜನರ ಭಾವನೆಗಳಿಗೆ ಬೆಲೆಯನ್ನು ನೀಡಿರುವ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು. ಬಿಜೆಪಿ ದೇವರು ಮತ್ತು ಧರ್ಮದ ವಿಚಾರಗಳನ್ನು ಮುಂದೆ ಮಾಡಿಕೊಂಡು,

ರಾಜಕಾರಣಕ್ಕಾಗಿ ಇವುಗಳನ್ನು ಬಳಸಿಕೊಂಡು ಭಾವನೆಗಳೊಂದಿಗೆ ನಾಯಕತ್ವ ಬಯಸುವ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಮಂಗಳೂರು ಮತ್ತು ಕರಾವಳಿ ಭಾಗದ ಜನರ ಬದುಕಿನ ಬಗ್ಗೆ ಭರವಸೆಯನ್ನ ಮೂಡಿಸುವ ಮತ್ತು ಆರ್ಥಿಕವಾಗಿ ಶಕ್ತಿ ತುಂಬುವ ಅನೇಕ ಕಾರ್ಯಕ್ರಮಗಳನ್ನು ಸಂಪುಟ ಸಭೆಯಲ್ಲಿ ಘೋಷಿಸಿ, 32 ಸಾವಿರದ 162 ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ನೀಡುವುದರ ಮೂಲಕ ನಮಗೆ ಚುನಾವಣೆಗಳಲ್ಲಿ ಮತ ಗಳಿಗಿಂತ ಜನರ ಬದುಕು ಪ್ರಮುಖ ಎಂಬುದನ್ನ ತೋರಿಸಿಕೊಟ್ಟಿದ್ದಾರೆ.

ಕರಾವಳಿ ಭಾಗದ ಬಹುಜನರ ಬೇಡಿಕೆಯಾಗಿದ್ದ ಪುತ್ತೂರಿಗೆ ಮೆಡಿಕಲ್ ಕಾಲೇಜ್, ರಸ್ತೆಗಳ ಅಭಿವೃದ್ಧಿ, ಕರಾವಳಿ ಪ್ರದೇಶದ ವಿವಿಧ ಜಿಲ್ಲೆಗಳ ಸ್ಥಳೀಯ ಜೀವನ ಸದೃಢಗೊಳಿಸಲು ಅಗತ್ಯವಾಗಿ ಬೇಕಾಗಿರುವ ಸೌಲಭ್ಯ ಸೌಕರ್ಯಗಳನ್ನು ಕಲ್ಪಿಸಿಕೊಟ್ಟು, ಅತ್ಯಂತ ಸುಂದರವಾದ ಪ್ರಕೃತಿಯ ತವರಾಗಿರುವ ಕರಾವಳಿ ಭಾಗದ ಪ್ರಕೃತಿಯ ಸೌಂದರ್ಯವನ್ನು ವಿಶ್ವದ ಜನರು ವೀಕ್ಷಿಸುವ ಸಲುವಾಗಿ, ವಿಶೇಷವಾದ ಪ್ರವಾಸೋದ್ಯಮ ನೀತಿಯನ್ನು ರೂಪಿಸುವುದರ ಮೂಲಕ, ಉದ್ಯೋಗವನ್ನು ಸೃಷ್ಟಿ ಮಾಡುವಂತಹ ನಿಟ್ಟಿನಲ್ಲೂ ಕಾರ್ಯಯೋನ್ಮುಖರಾಗಿರುವ ಸರ್ಕಾರಕ್ಕೆ,

ವಿಶೇಷವಾಗಿ ಪಾದರಸದಂತೆ ದುಡಿಯುತ್ತಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರಿಗೆ ಅಭಿನಂದನೆಗಳನ್ನು ಪ್ರತಿಯೊಬ್ಬ ಅಭಿವೃದ್ಧಿ ಚಿಂತಕರು ಹೇಳಲೇಬೇಕಾಗಿದೆ ಎಂದು ಪಿ ಎಂ ಮಾಲತೇಶ್ ನಿರ್ದೇಶಕರು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಕರ್ನಾಟಕ ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Author