ತುಮಕೂರು | ಪುಡಿರೌಡಿಗಳಿಂದ ಲಾಂಗ್ ಹಿಡಿದು ಅಟ್ಟಹಾಸ

ತುಮಕೂರು

ತುಮಕೂರು ಬಿಯರ್ ಕೊಳ್ಳುವ ನೆಪದಲ್ಲಿ ಬಾರ್ ಗೆ ತೆರಳಿ ಲಾಂಗ್ ಹಿಡಿದು ಪುಡಿರೌಡಿಗಳ ಅಟ್ಟಹಾಸ ಮೆರೆದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಸಂತೆಪೇಟೆ ಗ್ರಾಮದಲ್ಲಿರುವ ಜೆ.ಕೆ ಬಾರ್ ನಲ್ಲಿ ನಡೆದಿದೆ.

ಪುಡಿರೌಡಿಗಳ ಅಟ್ಟಹಾಸದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಂಜುನಾಥ್ ಹಾಗೂ ಮನೋಜ್ ಎಂಬ ಇಬ್ಬರು ಪುಡಿರೌಡಿಗಳಿಂದ ಕೃತ್ಯ ನಡೆದಿದೆ ಕಳೆದ ಭಾನುವಾರ ರಾತ್ರಿ ಕೈಯಲ್ಲಿ ಲಾಂಗ್ ಹಿಡಿದು ಜೆಕೆ ಬಾರ್ ಗೆ ತೆರಳಿದ್ದ ಕೆಂಪನಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ನಿಟ್ಟೂರು ಗ್ರಾಮದ ಮನೋಜ್ ಬಾರ್ ನಲ್ಲಿ ಎರಡು ಬಿಯರ್ ಖರಿದೀಸಿ ಹಣ ಕೊಡದೇ ಬಾರ್ ಕ್ಯಾಶಿಯರ್ ಗೆ ಅವಾಜ್ ಹಾಕಿ ನಮ್ಮನ್ನೆ ಹಣ ಕೇಳ್ತಿಯಾ ಎಂದು ಬಾರ್ ಕೌಂಟರ್ ಕಡೆಗೆ ಲಾಂಗ್ ಬಿಸಿ ಅಟ್ಟಹಾಸ ಮೆರೆದಿದ್ದಾರೆ.‌

ಈ ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಗೆ ಬಾರ್ ಕ್ಯಾಶಿಯರ್ ನೀಡಿದ ದೂರಿನ ಮೇರೆಗೆ, ಕುಣಿಗಲ್ ಪೊಲೀಸರಿಂದ, ಲಾಂಗ್ ಹಿಡಿದು ಅಟ್ಟಹಾಸ ಮೆರೆದಿದ್ದ ಕೆಂಪನಹಳ್ಳಿ ಮಂಜುನಾಥ್ (28) ಹಾಗೂ ನಿಟ್ಟೂರು ಗ್ರಾಮದ ಮನೋಜ್@ಸಣ್ಣ (24) ಬಂಧನವಾಗಿದೆ.

ಕೆಂಪನಹಳ್ಳಿ ಗ್ರಾಮದಲ್ಲಿರುವ ಬಾರ್ ವೊಂದಕ್ಕೆ ಪಾರ್ಟನರ್ ಶಿಪ್ ನಲ್ಲಿ ಬಾರ್ ಮಾಲೀಕನಾಗಿರುವ ಆರೋಪಿ ಮಂಜುನಾಥ್.

ಆರೋಪಿ ಮಂಜುನಾಥ್ ಬಾರ್ ನಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಜೆ.ಕೆ ಬಾರ್ ಅಂಡ್ ರೆಸ್ಟೋರೆಂಟ್. ಕೇವಲ ಮೂರು ತಿಂಗಳ ಹಿಂದಷ್ಟೇ ಓಪನ್ ಆಗಿದ್ದ ಜೆ.ಕೆ ಬಾರ್ ಅಂಡ್ ರೆಸ್ಟೋರೆಂಟ್ ಆಗಿತ್ತು.

ಈ ಭಾಗದಲ್ಲಿ ಜೆ.ಕೆ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಪ್ರಾರಂಭವಾದ ಕಾರಣ ಆರೋಪಿ ಮಂಜುನಾಥ್ ಅವರ ಬಾರ್ ಕಡೆಗೆ ಗಿರಾಕಿಗಳು ಬಾರದೆ ಬಣ ಕೊಡುವಂತಾಗಿತ್ತು.

ಇದರಿಂದ ಬಾರ್ ಬ್ಯುಸಿನೆಸ್ ಎಂಬುವುದು ನಷ್ಟದ ಹಾದಿ ಹಿಡಿದಿತ್ತು. ಹೇಗಾದ್ರು ಮಾಡಿ ಜೆಕೆ ಬಾರ್ ಮಾಲೀಕನನ್ನ ಹೆದರಿಸಿ ಬಾರ್ ಖಾಲಿ ಮಾಡಿಸಲು ಆರೋಪಿ ಮಂಜುನಾಥ್ ಪ್ಲಾನ್‌ ಮಾಡಿದ್ದ.

ತನ್ನ ಸ್ಕೆಚ್ ಅನ್ನು ಎಕ್ಸಿಕ್ಯೂಟ್ ಮಾಡಲು ಸ್ನೇಹಿತ ಮನೋಜ್ ಎಂಬಾತನ ಜೊತೆ ಬಿಯರ್ ಖರೀದಿಸುವ ನೆಪದಲ್ಲಿ ಜೆಕೆ ಬಾರ್ ಗೆ ತೆರಳಿ ಬಾರ್ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿ ಲಾಂಗ್ ಹಿಡಿದು ಬೆದರಿಸಿದ್ದರು.

ಇನ್ನೇನು ಬಾರ್ ಮಾಲೀಕ ಹೆದರಿಕೊಳ್ಳುತ್ತಾನೆ ಆತನ ವ್ಯಾಪಾರ ತಂಡ ಹೊಡೆಯುತ್ತೆ ತಮ್ಮ ಬಿಸಿನೆಸ್ ಮೊದಲಿನಂತೆ ಚೆನ್ನಾಗಿ ಇರುತ್ತೆ ಎಂದು ಹಾಕಿದ್ದ ಸ್ಕೆಚ್ ಉಲ್ಟಾ ಆಗಿ ಬಾರ್ ಮಾಲಿಕ ಪೊಲೀಸ್ರಿಗೆ ದೂರು ನೀಡಿದ್ದ.

ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತಮ್ಮ ಸ್ಟೈಲ್ ನಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಸದ್ಯ ಘಟನೆ ಸಂಬಂಧ ಕುಣಿಗಲ್ ಪೊಲೀಸರು ಆರೋಪಿ ಮಂಜುನಾಥ್ ಹಾಗೂ ಮನೋಜ್ ನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ

Author